Home » PM Narendra Modi: ನೂತನ ಸಂಸತ್ತಿನ ವಿಡಿಯೋ ಹಂಚಿಕೊಂಡ ಪ್ರಧಾನಿ ನರೇಂದ್ರ ಮೋದಿ, ನೋಡಿ ಆ ವೈಭವ !

PM Narendra Modi: ನೂತನ ಸಂಸತ್ತಿನ ವಿಡಿಯೋ ಹಂಚಿಕೊಂಡ ಪ್ರಧಾನಿ ನರೇಂದ್ರ ಮೋದಿ, ನೋಡಿ ಆ ವೈಭವ !

0 comments
Modi Govt Schemes

PM Narendra Modi: ಪ್ರಧಾನ ಮಂತ್ರಿ ನರೇಂದ್ರ ಮೋದಿ ನಾಳೆ ನೂತನ ಸಂಸತ್ ಭವನವನ್ನು ಉದ್ಘಾಟನೆ ಮಾಡಲಿದ್ದಾರೆ. ಈಗ ಸಂಸತ್ ಭವನದ ವೈಭವದ ವಿಡಿಯೋವೊಂದನ್ನು ಪ್ರಧಾನಿ ಮೋದಿ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ನಮ್ಮ ಸಂಸತ್ ನಮ್ಮ ಹೆಮ್ಮೆಎನ್ನುವ ಹ್ಯಾಷ್‌ಟ್ಯಾಗ್‌ನ್ನು ಬಳಕೆ ಮಾಡಿ ಅದನ್ನು ಅವರು ಹಂಚಿಕೊಂಡಿದ್ದಾರೆ.

ಇಲ್ಲಿನ ಇನ್ನೊಂದು ವಿಶೇಷತೆ ಏನೆಂದರೆ, ಪ್ರಧಾನಿಯವರು ಈ ವಿಡಿಯೋವನ್ನು , “ನಿಮ್ಮ ಧ್ವನಿ ಬಳಸಿ ಹಂಚಿಕೊಳ್ಳಿ’ ಎಂದು ಹೇಳಿದ್ದಾರೆ. ನೂತನ ಸಂಸತ್ ಭವನ ಪ್ರತಿಯೊಬ್ಬ ಭಾರತೀಯನಿಗೂ ಹೆಮ್ಮೆ ತರುತ್ತದೆ. ಈ ವಿಡಿಯೋ ಭವ್ಯ ಕಟ್ಟಡದ ನೋಟವನ್ನು ನಿಮಗೆ ನೀಡುತ್ತದೆ. ನೀವಿದನ್ನು ನಿಮ್ಮ ಸ್ವಂತ ಧ್ವನಿಯೊಂದಿಗೆ ಹಂಚಿಕೊಳ್ಳಿ. ಅವುಗಳಲ್ಲಿ ಕೆಲವನ್ನು ನಾನು ಮರು ಟ್ವೀಟ್ ಮಾಡುತ್ತೇನೆ ಎಂದು ಬಳಸಲು ಮರೆಯಬೇಡಿ ” ಎಂದು ಪ್ರಧಾನಿ ಮೋದಿ(PM Narendra Modi) ಹೇಳಿದ್ದಾರೆ. ಸಾಂಪ್ರದಾಯಿಕ ಪೂಜೆಯ ಮೂಲಕ ನಾಳೆ ವೈಭವದ ಸಂಸತ್ ಭವನವನ್ನು ಉದ್ಘಾಟನೆ ಮಾಡಲಿದ್ದಾರೆ ಪ್ರಧಾನಿ ನರೇಂದ್ರ ಮೋದಿ.

 

ಇದನ್ನು ಓದಿ: BIGG NEWS: ರಾಜ್ಯದ ನೂತನ 24 ಸಚಿವರಾಗಿ ಪ್ರಮಾಣವಚನ ಸ್ವೀಕಾರ, ಖಾತೆ ಹಂಚಿಕೆಗೆ ಕ್ಷಣಗಣನೆ!

You may also like

Leave a Comment