Shubman Gill- Sara Ali-Khan: ಟೈಟಾನ್ಸ್ ತಂಡದ ಸ್ಟಾರ್ ಬ್ಯಾಟ್ಸ್‌ಮನ್ ಶುಭ್ಮನ್ ಗಿಲ್ (Shubman Gill) ಮತ್ತು ಬಾಲಿವುಡ್ ನಟಿ, ಸೈಫ್ ಅಲಿ ಖಾನ್ (Saif Ali Khan) ಮಗಳು ಸಾರಾ ಅಲಿ ಖಾನ್ ಇಬ್ಬರೂ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿಗಳು ಹಲವಾರು ದಿನಗಳಿಂದ ಹಬ್ಬಿತ್ತು. ಅದಕ್ಕೆ ಪುಷ್ಟಿ ನೀಡುವಂತೆ ಈ ಜೋಡಿ ಹಲವು ಕಡೆ ಸೋಷಿಯಲ್ಸ್ ಕಣ್ಣಿಗೆ ಬಿದ್ದಿದ್ದರು. ಇದೀಗ ಶುಭ್ಮನ್ ಗಿಲ್ – ಸಾರಾ ಅಲಿ ಖಾನ್ (Shubman Gill- Sara Ali-Khan) ಬ್ರೇಕಪ್ ಮಾಡಿಕೊಂಡಿದ್ದಾರೆ ಎಂಬ ಸುದ್ಧಿ ವೈರಲ್ ಆಗುತ್ತಿದೆ. ಇದಕ್ಕೆ ಸಾಕ್ಷಿ ಕೂಡ ಇಲ್ಲಿದೆ ನೋಡಿ.
ಸಾಕಷ್ಟು ಕಡೆಗಳಲ್ಲಿ ಈ ಜೋಡಿ ಒಟ್ಟಾಗಿ ಕಾಣಿಸಿಕೊಂಡಿದ್ದು, ಈ ಹಿಂದೆ ಹೋಟೆಲ್ ಒಂದರಲ್ಲಿ ಇಬ್ಬರೂ ಭೇಟಿ ಆಗಿದ್ದರು. ಹಾಗೇ ನಂತರದಲ್ಲಿ ವಿಮಾನದಲ್ಲಿ ಒಟ್ಟಿಗೆ ಪ್ರಯಾಣಿಸುತ್ತಿದ್ದರು. ನಿಲ್ದಾಣದಲ್ಲಿ ಇಬ್ಬರೂ ಮಾತನಾಡುತ್ತಿದ್ದರು ಎಂಬಿತ್ಯಾದಿ ವಿಚಾರಗಳು ವೈರಲ್ ಆಗಿ, ಶುಭ್ಮನ್ ಗಿಲ್ – ಸಾರಾ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಮಾತು ಕೇಳಿಬರುತ್ತಿತ್ತು. ಇದೀಗ ಬ್ರೇಕಪ್ ಸುದ್ಧಿ ಕೇಳಿಬರುತ್ತಿದೆ.
ಇದಕ್ಕೆ ಸಾಕ್ಷಿ ಎಂಬಂತೆ, ಸಾರಾ ಅಲಿ ಖಾನ್ ಮತ್ತು ಶುಭ್ಮನ್ ಗಿಲ್ ಇನ್‌ಸ್ಟಾಗ್ರಾಮ್‌ನಲ್ಲಿ ಪರಸ್ಪರ ಅನ್ ಫಾಲೋ ಮಾಡಿದ್ದಾರೆ.
ಇದು ಸೋಷಿಯಲ್ಸ್ ಕಣ್ಣಿಗೆ ಬಿದ್ದಿದೆ. ಹಾಗಾಗಿ ಇವರಿಬ್ಬರು ಬ್ರೇಕಪ್ ಮಾಡಿಕೊಂಡರು, ಇವರ ಸಂಬಂಧದಲ್ಲಿ ಬಿರುಕು ಮೂಡಿದೆ ಎಂದು ಹೇಳಲಾಗುತ್ತಿದೆ. ಈ ಹಿಂದೆ ಶುಭ್ಮನ್ ಗಿಲ್ ಹೆಸರು ಸಚಿನ್ ತೆಂಡೂಲ್ಕರ್ ಪುತ್ರಿ ಸಾರಾ ತೆಂಡೂಲ್ಕರ್ ಜೊತೆಗೆ ತಳುಕು ಹಾಕಿಕೊಂಡಿತ್ತು.
ಸದ್ಯ ವಿಶ್ವ ಕ್ರಿಕೆಟ್ನಲ್ಲಿ ಶುಭ್ಮನ್ ಗಿಲ್ ಹೆಸರು ದೊಡ್ಡಮಟ್ಟದಲ್ಲಿ ಸದ್ದು ಮಾಡುತ್ತಿದೆ. ಐಪಿಎಲ್ 2023ರಲ್ಲಿ 3 ಶತಕ ಸಿಡಿಸುವ ಮೂಲಕ ಗಿಲ್ ಭರ್ಜರಿ ಪ್ರದರ್ಶನ ನೀಡುತ್ತಿದ್ದಾರೆ. ಜೊತೆಗೆ ಐಪಿಎಲ್ 2023ರಲ್ಲಿ ಶತಕದ ಬಳಿಕ ಆರೆಂಜ್ ಕ್ಯಾಪ್ ಹೋಲ್ಡರ್ ಸಹ ಆಗಿದ್ದು, ಭಾರತೀಯ ಕ್ರಿಕೆಟ್ನಲ್ಲಿ ಪ್ರಿನ್ಸ್ ಎಂದೇ ಪ್ರಸಿದ್ಧರಾಗಿದ್ದಾರೆ.
ಇದನ್ನು ಓದಿ: Siddaramaiah Cabinet Expansion: 24 ನೂತನ ಸಚಿವರು ಸೇರಿ 34 ಮಂದಿಗೆ ಖಾತೆ ಹಂಚಿಕೆ!! ಯಾರಿಗೆ ಯಾವ ಖಾತೆ?
