KL Rahul in StripClub: ಆರ್ಸಿಬಿ ವಿರುದ್ಧದ ಪಂದ್ಯದಲ್ಲಿ ಕೆಎಲ್ ರಾಹುಲ್ ಗಂಭೀರವಾದ ತೊಡೆಯ ಗಾಯಕ್ಕೆ ಒಳಗಾಗಿದ್ದು, ಇದರಿಂದಾಗಿ 16ನೇ ಆವೃತ್ತಿ ಐಪಿಎಲ್ (IPL 2023) ಹಾಗೂ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ (WTC Final 2023) ಪಂದ್ಯದಿಂದ ಹೊರಬಿದ್ದಿದ್ದಾರೆ. ಆನಂತರ ಲಂಡನ್ನಲ್ಲಿ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡು, ಇದೀಗ ವಿಶ್ರಾಂತಿ ಪಡೆಯುತ್ತಿದ್ದಾರೆ.
ಕೆಎಲ್ ರಾಹುಲ್ (KL Rahul) ಶಸ್ತ್ರಚಿಕಿತ್ಸೆಗೆಂದು ಲಂಡನ್’ಗೆ ತೆರಳಿದ್ದ ಸಂದರ್ಭದಲ್ಲಿ ಅಲ್ಲಿನ ಅರೆನಗ್ನ ಡ್ಯಾನ್ಸ್ ಮಾಡುವ ಸ್ಟ್ರಿಪ್ಕ್ಲಬ್’ನಲ್ಲಿ (KL Rahul in StripClub) ಕಾಣಿಸಿಕೊಂಡಿದ್ದರು. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡಿದೆ. ಹೌದು, ಪತಿ-ಪತ್ನಿ ಇಬ್ಬರೂ ಸ್ಟ್ರಿಪ್ ಕ್ಲಬ್’ಗೆ ಹೋಗಿದ್ದಾರೆ ಎಂಬ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಹಾಗೇ ವ್ಯಾಪಕ ಟೀಕೆ ಕೂಡ ವ್ಯಕ್ತವಾಗಿದೆ. ಈ ಹಿನ್ನೆಲೆ ರಾಹುಲ್ ಪತ್ನಿ ಆಥಿಯಾ (Athiya Shetty) ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
ಆಥಿಯಾ ಶೆಟ್ಟಿ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಹಂಚಿಕೊಂಡಿದ್ದು, “ನಾನು ಹೆಚ್ಚಾಗಿ ಮೌನವಾಗಿರುತ್ತೇನೆ ಮತ್ತು ಗಾಸಿಪ್’ಗಳಿಗೆ ಕಡಿಮೆ ಪ್ರತಿಕ್ರಿಯಿಸುತ್ತೇನೆ. ಆದರೆ ಕೆಲವೊಮ್ಮೆ ನಿಮ್ಮ ಪರವಾಗಿ ನಿಲ್ಲುವುದು ಮುಖ್ಯವಾಗಿರುತ್ತದೆ. ರಾಹುಲ್, ನಾನು ಮತ್ತು ನಮ್ಮ ಸ್ನೇಹಿತರು ಸಾಮಾನ್ಯ ಸ್ಥಳಕ್ಕೆ ಹೋಗಿದ್ದೆವು. ಈ ವಿಷಯದ ಬಗ್ಗೆ ಸತ್ಯ ಅರಿತು ನಂತರ ವರದಿ ಮಾಡಿ. ಈ ರೀತಿ ಸುಖಾಸುಮ್ಮನೆ ಮಾತನಾಡುವುದನ್ನು ಮೊದಲು ನಿಲ್ಲಿಸಿ ಎಂದು ನಟಿ ಪೋಸ್ಟ್ನಲ್ಲಿ ಬರೆದು ಟೀಕೆಗಳಿಗೆ ಅಂತ್ಯ ಹಾಡಿದ್ದಾರೆ.
ಇದನ್ನೂ ಓದಿ: Chennai: ‘ಇರ್ಫಾನ್ ವಿವ್ಯೂ’ ಚಾನೆಲ್ ಯೂಟ್ಯೂಬರ್ ನ ಕಾರು ಡಿಕ್ಕಿಯಾಗಿ ಮಹಿಳೆ ಸಾವು!!!
