Home » Bill Gates Love Story: ಬಿಲ್ ಗೇಟ್ಸ್ ಗೂ ಇತ್ತು ಒಂದು ಬೇಡದ ಪ್ರೇಮ, ಹಳೆ ಲವ್ ತಂದ ಹೊಸ ಸಂಕಷ್ಟ!

Bill Gates Love Story: ಬಿಲ್ ಗೇಟ್ಸ್ ಗೂ ಇತ್ತು ಒಂದು ಬೇಡದ ಪ್ರೇಮ, ಹಳೆ ಲವ್ ತಂದ ಹೊಸ ಸಂಕಷ್ಟ!

0 comments
Bill Gates Love Story

Bill Gates Love Story: ಬಿಲ್ ಗೇಟ್ಸ್ (Bill Gates) ಹೆಸರು ಯಾರು ಕೇಳಿಲ್ಲ ಹೇಳಿ. ಇವರು ಅಮೆರಿಕದ ಪ್ರಭಾವಿ ಉದ್ಯಮಿ. ಅಲ್ಲದೆ, ವಿಶ್ವದ ಅತಿದೊಡ್ಡ ಸಿರಿವಂತರಲ್ಲಿ ಇವರೂ ಒಬ್ಬರು. ಮೈಕ್ರೋಸಾಫ್ಟ್ (Microsoft) ಎಂಬ ವಿಶ್ವದ ದೈತ್ಯ ಐಟಿ ಕಂಪನಿಯ ಸಹ–ಸಂಸ್ಥಾಪಕರೂ ಹೌದು. 1975ರಲ್ಲಿ ಬಿಲ್ ಗೇಟ್ಸ್ ತಮ್ಮ ಸಹಪಾಠಿ ಪೌಲ್ ಅಲೆನ್ (Paul Allen) ಜೊತೆ ಸೇರಿ ಮೈಕ್ರೋಸಾಫ್ಟ್ ಎಂಬ ಐಟಿ ಕಂಪನಿ ಸ್ಥಾಪಿಸಿದರು. 2014ರಲ್ಲಿ ಅವರು ಮೈಕ್ರೋಸಾಫ್ಟ್ ತೊರೆದು ಈಗ ಸಾಮಾಜಿಕ ಕಾರ್ಯಗಳಲ್ಲಿ ಹೆಚ್ಚಾಗಿ ತೊಡಗಿಸಿಕೊಂಡಿದ್ದಾರೆ. ಆದರೆ, 67 ವರ್ಷದ ಬಿಲ್ ಗೇಟ್ಸ್’ಗೂ ಇತ್ತಂತೆ ಒಂದು ಬೇಡದ ಪ್ರೇಮ (Bill Gates Love Story). ಹೌದು, ಇದೀಗ ಆ ಹಳೆ ಲವ್ ಹೊಸ ಸಂಕಷ್ಟವೊಂದನ್ನು ತಂದಿದೆ.

ಬಹಳ‌ ಹಿಂದೆ ರಷ್ಯಾ ಮೂಲದ ಮಿಲಾ ಆ್ಯಂಟನೊವಾ ಎಂಬ ಮಹಿಳೆಯೊಂದಿಗೆ ಬಿಲ್ ಗೇಟ್ಸ್’ಗೆ ಸಂಬಂಧವಿತ್ತಂತೆ. ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ ದಿವಂಗತ ಜೆಫ್ರಿ ಎಪ್‌ಸ್ಟೀನ್‌ ಎಂಬಾತ ಆ್ಯಂಟನೊವಾ ಜೊತೆಗೆ ಸಂಬಂಧವಿಟ್ಟುಕೊಂಡಿದ್ದ ಬಿಲ್’ಗೆಟ್ಸ್ ಗೆ ಬ್ಲ್ಯಾಕ್‌ ಮೇಲ್‌ ಮಾಡುತ್ತಿದ್ದ ಎನ್ನಲಾಗಿದೆ.

ಈ ವಿಚಾರ ಇತ್ತೀಚೆಗೆ ಬಹಿರಂಗವಾಗಿದ್ದು, ಇದರ ಬೆನ್ನಲ್ಲೇ ಮಿಲಾ, ರಷ್ಯಾದ ಗುಪ್ತಚರಳಾದ ಆ್ಯನ್ನಾ ಚಾಪ್ಶನ್‌ ಎಂಬುವವಳ ಆಪ್ತೆ ಎಂಬ ಮಾಹಿತಿಯೂ ರಟ್ಟಾಗಿದೆ. ಮಿಲಾ-ಆ್ಯನ್ನಾ ಆಪ್ತರು ಎನ್ನುವುದಕ್ಕೆ ಸಾಕ್ಷಿಯಾಗಿ ವಾಲ್‌ಸ್ಟ್ರೀಟ್‌ನಲ್ಲಿ ತೆಗೆದ ಸೆಲ್ಫಿ ಫೋಟೋ ಲಭ್ಯವಾಗಿದೆ. ಆದರೆ, ಇದುವರೆಗೆ ಮಿಲಾ ಸಂಶಯಾಸ್ಪದ ಚಟುವಟಿಕೆ ನಡೆಸಿದ್ದು ಬೆಳಕಿಗೆ ಬಂದಿಲ್ಲ. ಒಂದು ವೇಳೆ ಈ ವಿಚಾರ ಗೇಟ್ಸ್‌ಗೆ ಮುಂಚೆಯೇ ಗೊತ್ತಿದ್ದರೆ ಅವರಿಗೆ ಸಂಕಷ್ಟ ಎದುರಾಗುತ್ತಿತ್ತು.

ಇದನ್ನೂ ಓದಿ: ESIC Recruitment 2023: ಕಾರ್ಮಿಕರ ರಾಜ್ಯ ವಿಮಾ ನಿಗಮದಲ್ಲಿ ಉದ್ಯೋಗವಕಾಶ ; ನೇರ ಸಂದರ್ಶನ- ಕೂಡಲೇ ಅರ್ಜಿ ಸಲ್ಲಿಸಿ!!

You may also like

Leave a Comment