Home » Karnataka Congress: ನೂತನ ಸಚಿವರಿಗೆ ಇನ್ನೂ ಖಾತೆ ಹಂಚಿಕೆಯಾಗಿಲ್ಲ, ನಕಲಿ ಪಟ್ಟಿ ನಂಬಬೇಡಿ- ಕಾಂಗ್ರೆಸ್ ಸ್ಪಷ್ಟನೆ

Karnataka Congress: ನೂತನ ಸಚಿವರಿಗೆ ಇನ್ನೂ ಖಾತೆ ಹಂಚಿಕೆಯಾಗಿಲ್ಲ, ನಕಲಿ ಪಟ್ಟಿ ನಂಬಬೇಡಿ- ಕಾಂಗ್ರೆಸ್ ಸ್ಪಷ್ಟನೆ

by ಹೊಸಕನ್ನಡ
0 comments
Karnataka cabinet

Karnataka cabinet : ನಿನ್ನೆ ದಿನ ಕರ್ನಾಟಕ ಸರ್ಕಾರದ(Karnataka Government) ನೂತನ ಸಚಿವರಾಗಿ 24 ಮಂದಿ ಶಾಸಕರು ಪ್ರಮಾಣವಚನ ಸ್ವೀಕರಿಸಿದ್ದು, ಈ ಬೆನ್ನಲ್ಲೇ ಸಂಪುಟದಲ್ಲಿರುವ ಒಟ್ಟು 34 ಜನ ಸಚಿವರಿಗೆ ಖಾತೆ ಹಂಚಿಕೆಯಾಗಿದೆ ಎಂದು ಅದರ ಪಟ್ಟಿ ಎಲ್ಲೆಡೆ ವೈರಲ್ ಆಗಿತ್ತು. ಮಾಧ್ಯಮಗಳು ಕೂಡ ಅವುಗಳನ್ನು ಪ್ರಕಟಿಸಿದ್ದವು. ಆದರೀಗ ಈ ಪಟ್ಟಿ ಸುಳ್ಳೆಂದು ಕಾಂಗ್ರೆಸ್ ಸ್ಪಷ್ಟ ಪಡಿಸಿದೆ.

ಹೌದು, ಇಂದು ನೂತನ ಸಚಿವರಾಗಿ ( New Minister ) 24 ಮಂದಿ ಶಾಸಕರು ಪ್ರಮಾಣವಚನ ಸ್ವೀಕರಿಸಿದ ಬೆನ್ನಲ್ಲೇ, ಸಚಿವ ಸ್ಥಾನ ಹಂಚಿಕೆಯಾಗಿರುವಂತ (Karnataka cabinet) ಪಟ್ಟಿಯೊಂದು ಸೋಷಿಯಲ್ ಮೀಡಿಯಾದಲ್ಲಿ ( Social Media ) ವೈರಲ್ ಆಗಿತ್ತು. ಈ ಬಗ್ಗೆ ಟ್ವಿಟ್ ( Twitter ) ಮಾಡಿರುವಂತ ಕರ್ನಾಟಕ ಕಾಂಗ್ರೆಸ್, ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಕೆಲವು ಮಾಧ್ಯಮಗಳಲ್ಲಿ ಖಾತೆ ಹಂಚಿಕೆಯಾಗಿರುವ ಬಗ್ಗೆ ನಕಲಿ ಪಟ್ಟಿ ವೈರಲ್ ಆಗಿದೆ. ಇನ್ನೂ ಸಹ ಖಾತೆ ಹಂಚಿಕೆಯಾಗಿರುವುದಿಲ್ಲ, ಯಾರೂ ಸಹ ಊಹಾಪೋಹಗಳಿಗೆ ಕಿವಿಗೊಡಬೇಡಿ ಹಾಗೂ ನಕಲಿ ಸುದ್ದಿಗಳನ್ನು ಹಂಚಬೇಡಿ. ಸರ್ಕಾರ ಅಧಿಕೃತವಾಗಿ ಖಾತೆ ಹಂಚಿಕೆಯ ಪಟ್ಟಿಯನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಿದೆ ಎಂಬುದಾಗಿ ತಿಳಿಸಿದೆ.

ಅಂದಹಾಗೆ ಇಂದು ರಾಜಭವನದಲ್ಲಿ(Rajabhavan) ನಡೆದಂತ ಸಮಾರಂಭದಲ್ಲಿ ಹಿರಿಯ ಕಾಂಗ್ರೆಸ್ ಶಾಸಕ ಹೆಚ್ ಕೆ ಪಾಟೀಲ್ ಸೇರಿದಂತೆ 24 ಮಂದಿ ಶಾಸಕರು(24 MLA) ಸಂಪುಟ ದರ್ಜೆಯ ಸಚಿವರಾಗಿ ಇಂದು ಪ್ರಮಾಣವಚನ ಸ್ವೀಕರಿಸಿದ್ದಾರೆ. ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ(CM Siddaramaiah), ನೂತನ ಸಚಿವರ ಪ್ರಮಾಣವಚನ ಸ್ವೀಕಾರ ಸಮಾರಂಭದ ಬಳಿಕ, ವಿಧಾನಸೌಧದಲ್ಲಿ ಸಚಿವ ಸಂಪುಟ ಸಭೆಯನ್ನು ನಡೆಸಿದರು. ಆ ಬಳಿಕ ಮಾತನಾಡಿರುವಂತ ಅವರು ಇಂದು ಅಥವಾ ನಾಳೆ ನೂತನ ಸಚಿವರಿಗೆ ಖಾತೆ ಹಂಚಿಕೆಯನ್ನು ಮಾಡಲಾಗುತ್ತದೆ ಎಂಬುದಾಗಿ ಸ್ಪಷ್ಟ ಪಡಿಸಿದ್ದಾರೆ.

ಇದನ್ನೂ ಓದಿ: ರಾಜ್ಯಾದ್ಯಂತ ಗ್ಯಾರಂಟಿ ಗಲಾಟೆ: ಕೊಪ್ಪಳದಲ್ಲಿ ಪತ್ನಿಗೆ ಟಿಕೆಟ್ ತೆಗೆಯದ ಪತಿರಾಯ, ಯಾದಗಿರಿಯಲ್ಲಿ ಕನೆಕ್ಷನ್ ಕಟ್ ಮಾಡಿದ ವೈರ್ ನ್ನು ಸಿಬ್ಬಂದಿ ಕಾರಿನಿಂದ ಕಸಿದುಕೊಂಡ ಮಹಿಳೆಯರು

You may also like

Leave a Comment