Home » Bengaluru: ಶಾದಿ ಡಾಟ್ ಕಾಮ್‍ನಲ್ಲಿ ಹುಟ್ಟಿದ ಪ್ರೀತಿ ! ಹೋಟೇಲಿಗೆಂದು ಹೇಳಿ ಓಯೋ ರೂಮಿಗೆ ಕರೆದೊಯ್ದ ಪ್ರಿಯತಮ; ನಂತರ ಆದದ್ದೇನು?

Bengaluru: ಶಾದಿ ಡಾಟ್ ಕಾಮ್‍ನಲ್ಲಿ ಹುಟ್ಟಿದ ಪ್ರೀತಿ ! ಹೋಟೇಲಿಗೆಂದು ಹೇಳಿ ಓಯೋ ರೂಮಿಗೆ ಕರೆದೊಯ್ದ ಪ್ರಿಯತಮ; ನಂತರ ಆದದ್ದೇನು?

by ಹೊಸಕನ್ನಡ
0 comments
Bengaluru

Bengaluru: ಶಾದಿ ಡಾಟ್ ಕಾಮ್‍(Shadi. Com) ನಲ್ಲಿ ಆದ ಪರಿಚಯ ಯುವತಿಯನ್ನ ಬೀದಿಗೆ ತಂದು ನಿಲ್ಲಿಸಿದ ಪ್ರಸಂಗವೊಂದು ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ(Bengaluru) ನಡೆದಿದೆ.

ಹೌದು, ಯುವತಿಯೊಬ್ಬಳು ಮದುವೆ ಸಲುವಾಗಿ ಶಾದಿ ಡಾಟ್ ಕಾಮ್​​ನಲ್ಲಿ ಫೋಟೋ(Photo) ಮತ್ತು ಪ್ರೊಫೈಲ್(Profile) ಹಾಕಿದ್ದಳು. ಈ ವೇಳೆ ನೂಮಾನ್ ಷರೀಫ್(Numan sharif) ಎಂಬಾತನ ಪರಿಚಯವಾಗಿತ್ತು. ನಂತರ ಮದುವೆ ಆಗುವುದಾಗಿ ನಂಬಿಸಿ, ಓಯೋ(Oyo) ರೂಮ್​​ಗೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಸದ್ಯ ಅನ್ಯಾಯಕ್ಕೊಳಗಾದ ಸಂತ್ರಸ್ತ ಯುವತಿ ನ್ಯಾಯಕ್ಕಾಗಿ ಪೊಲೀಸ್ ಠಾಣೆ ಮೇಟ್ಟಿಲೇರಿದ್ದಾಳೆ.

ಅಂದಹಾಗೆ ಸಂತ್ರಸ್ತ ಯುವತಿ ತಂದೆ-ತಾಯಿ ಕಳೆದುಕೊಂಡು ಮಾವನ ಮನೆಯಲ್ಲಿ ಆಸರೆ ಪಡೆದಿದ್ದಳು. ಶಾದಿ ಡಾಟ್ ಕಾಮ್ ಪ್ರೊಫೈಲ್ ಮೂಲಕ ಇಬ್ಬರ ಪರಿಚಯವಾಗಿದೆ. ಪರಿಚಯ ಪ್ರೇಮಾಂಕುರಕ್ಕೆ ವೇದಿಕೆಯಾಗಿದೆ. ಮದುವೆ ಆಗೋದಾಗಿ ಯುವತಿಯನ್ನು ನಂಬಿಸಿದ್ದಾನೆ. ಆ ಬಳಿಕ ಪೋಷಕರನ್ನ ಭೇಟಿ ಮಾಡಿಸೋದಾಗಿ ನೋಮನ್ ಶರೀಫ್, ಓಯೋ ರೂಮ್‍ (Oyo Room) ಗೆ ಕರೆಸಿಕೊಂಡಿದ್ದಾನೆ. ಆದರೆ ಈ ವೇಳೆ ಅಪ್ಪ-ಅಮ್ಮ ಬಂದಿಲ್ಲ ಹೇಗೂ ಹೋಟೆಲ್‍ಗೆ ಬಂದಿದ್ದೀವಲ್ಲ ಅಂತಾ ನಂಬಿಸಿ ಲೈಂಗಿಕವಾಗಿ ಬಳಸಿಕೊಂಡಿದ್ದಾನೆ.

ಇದಾದ ಬಳಿಕ ಮದುವೆಯಾಗುವುದಾಗಿ ನಂಬಿಸಿ ಅನೇಕ ಬಾರಿ ಶರೀಫ್ ಲೈಂಗಿಕವಾಗಿ ಬಳಕೆ ಮಾಡಿಕೊಂಡಿದ್ದಾನೆ. ಯುವತಿಯನ್ನ ಲೈಂಗಿಕವಾಗಿ ಬಳಸಿಕೊಂಡು ಆದ ಬಳಿಕ ಅವಳಿಗೆ ಕೈಕೊಟ್ಟು ಬೇರೊಬ್ಬ ಯುವತಿಯ ಜೊತೆ ಮದುವೆ ಆಗಿದ್ದಾನೆ. ಇದೀಗ ನೊಂದ ಯುವತಿ ಮದುವೆಯಾಗುವುದಾಗಿ ಹೇಳಿ ಮೋಸ ಮಾಡಿದ್ದಾನೆ ಎಂದು ಡಿಜೆ ಹಳ್ಳಿ ಪೊಲೀಸ್ ಠಾಣೆ(DJ Halli Police station)ಯಲ್ಲಿ ದೂರು ದಾಖಲಿಸಿದ್ದಾಳೆ. ನೂಮಾನ್ ಷರೀಫ್ ಎಂಬಾತನ ವಿರುದ್ಧ ಕೇಸ್ ದಾಖಲಾಗಿದ್ದು, ತನಿಖೆ ಆರಂಭವಾಗಿದೆ.

ಇದನ್ನೂ ಓದಿ: P M Modi: ನೂತನ ಸಂಸತ್ತಿನಲ್ಲಿ ಚಿನ್ನದ ರಾಜದಂಡದ ಪ್ರತಿಷ್ಠಾಪಿಸಿದ ಪ್ರಧಾನಿ!

You may also like

Leave a Comment