Home » Proactive Chicken Video: ಪಾಪ, ಬಾಣಸಿಗನಿಗೆ ಯಾಕೆ ಕಷ್ಟ ಕೊಡ್ಬೇಕು ಅಂತ ಸ್ವತಃ ತಾನೇ ಉರಿಯುವ ಸ್ಟವ್ ಮೇಲೆ ನಿಂತ ಕೋಳಿ…..!

Proactive Chicken Video: ಪಾಪ, ಬಾಣಸಿಗನಿಗೆ ಯಾಕೆ ಕಷ್ಟ ಕೊಡ್ಬೇಕು ಅಂತ ಸ್ವತಃ ತಾನೇ ಉರಿಯುವ ಸ್ಟವ್ ಮೇಲೆ ನಿಂತ ಕೋಳಿ…..!

0 comments
Proactive Chicken Video

Proactive Chicken Video: ಸೋಷಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ ಅಸಂಖ್ಯ ಮನರಂಜನಾ ವಿಷಯಗಳ ತಾಣ, ಮೊಗೆದಷ್ಟೂ ಅರಳಿ ನಿಲ್ಲುವ ರಸಮಯ ಘಟನೆಗಳ ತಾಣ. ಒಂದಲ್ಲ ಒಂದು ರಂಜನಾತ್ಮಕ ವಿಷಯಗಳು ಇಂಟರ್ನೆಟ್ ನಲ್ಲಿ ವೈರಲಾಗುತ್ತಾ ಜನರ ದುಗುಡಗೊಂಡ ಮನಸ್ಸುಗಳನ್ನು ಕೂಲ್ ಕೂಲ್ ಮಾಡುತ್ತಿರುತ್ತದೆ. ಇಂಥದ್ದೇ ಒಂದು ವಿಡಿಯೋ ಈಗ ವೈರಲ್ ಆಗಿದೆ.

ಇಲ್ಲೊಂದು ಕರುಣಾಮಯಿ ಕೋಳಿ ಇದೆ. ಪಾಪ, ಬಾಣಸಿಗನಿಗೆ ಕಷ್ಟ ಕೊಡಬಾರದು, ಒಂದಷ್ಟು ಹೆಲ್ಪ್ ಮಾಡೋಣ ಅಂತ ಕೋಳಿಯೇ ಒಂದು ಸ್ಟೆಪ್ ಮುಂದೆ ಬಂದಿದೆ. ಸೀದಾ ಹೋಗಿ ಅಡುಗೆ ಮನೆಯ ಉರಿಯುತ್ತಿರುವ ಸ್ಟವ್ ಮೇಲೆ ಹೋಗಿ ಕುಳಿತಿದೆ. ಈಗ ಈ ಪ್ರೊ ಆಕ್ಟಿವ್ ( Proactive Chicken video) ಕೋಳಿಯ ಈ ವೀಡಿಯೊ ಸಕತ್ತಾಗಿ ಇಂಟರ್ ನೆಟ್ ನಲ್ಲಿ ಓಡುತ್ತಿದೆ.

ಈ ವಿಡಿಯೋದಲ್ಲಿ ಕೋಳಿ ಗ್ಯಾಸ್ ಒಲೆಯ ಮೇಲೆ ತಾನಾಗಿಯೇ ಹೋಗಿ ನಿಂತಿರುವುದನ್ನು ಕಾಣಬಹುದು. ಈ ಫೋಟೋ ನಿಮಗೆ ಆಶ್ಚರ್ಯವನ್ನುಂಟು ಮಾಡಿ, ಪಾಪ ಅಯ್ಯೋ ಕೋಳಿಯೇ ಎಂದು ನಿಮಗನ್ನಿಸಬಹುದು. ನಿಜಕ್ಕೂ ಇದು ನಿಜವಾಗಿ ನಡೆದ ಸಂಗತಿಯಲ್ಲ. ಯಾವುದೇ ಜೀವಿ, ಹೋಗಿ ಹೋಗಿ ಬೆಂಕಿಯ ಸಹವಾಸ ಮಾಡಬಲ್ಲುದೇ, ನೀವೇ ಹೇಳಿ ?! ಆದರೆ, ಈ ವೀಡಿಯೋವನ್ನು ಕೂಲಂಕುಷವಾಗಿ ನೋಡಿದರೆ ಇದು ಎಡಿಟ್ ಮಾಡಿದ ಫೋಟೋ/ ವಿಡಿಯೋ ಎಂಬುದು ತಿಳಿಯುತ್ತದೆ.

ಈ ವಿಡಿಯೋವನ್ನು ಯು ಟ್ಯೂಬ್ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಳ್ಳಲಾಗಿದೆ. ಈ ವೀಡಿಯೊವನ್ನು ಈಗಾಗಲೇ ಲಕ್ಷಾಂತರ ಜನರು ವೀಕ್ಷಿಸಿದ್ದಾರೆ. ಅಡುಗೆ ಭಟ್ಟರಿಗೆ ಸಹಾಯ ಮಾಡಲು ಹೋದ ಕೋಳಿಯ ಬಗ್ಗೆ ಇಂಟರ್ನೆಟ್ಟಿನಲ್ಲಿ ಹಲವು ಜನ ತಮಾಷೆಯ ಮತ್ತು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ ! ಇನ್ನು ಕೋಳಿ ಸಾಯುವ ಮೊದಲೂ ಸಾರ್ಥಕತೆ ತೋರಿಸಿದೆ ಅಂದಿದ್ದಾರೆ ಒಬ್ಬ ನೋಡುಗರು !

 

ಇದನ್ನೂ ಓದಿ: UPSC Prelims 2023: ಇಂದು UPSC ಪ್ರಿಲಿಮ್ಸ್ ಪರೀಕ್ಷೆ, ಕನ್ನಡದಲ್ಲಿ ಬರೆಯೋ ಭಾಗ್ಯ ಈ ವರ್ಷವೂ ಸಿಕ್ಕಿಲ್ಲ

 

You may also like

Leave a Comment