Home » Parliament New Building: ನೂತನ ಸಂಸತ್ ಭವನವನ್ನು ಶವಪೆಟ್ಟಿಗೆಗೆ ಹೋಲಿಸಿದ ಆರ್‌ಜೆಡಿ, ತೀವ್ರ ಟೀಕೆಗೆ ಗುರಿಯಾದ ವಿವಾದಾತ್ಮಕ ಹೇಳಿಕೆ !

Parliament New Building: ನೂತನ ಸಂಸತ್ ಭವನವನ್ನು ಶವಪೆಟ್ಟಿಗೆಗೆ ಹೋಲಿಸಿದ ಆರ್‌ಜೆಡಿ, ತೀವ್ರ ಟೀಕೆಗೆ ಗುರಿಯಾದ ವಿವಾದಾತ್ಮಕ ಹೇಳಿಕೆ !

0 comments
Parliament New Building

Parliament New Building: ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಇಂದು (ಮೇ 28) ನೂತನ ಸಂಸತ್ ಭವನವನ್ನು (Parliament New Building) ಉದ್ಘಾಟನೆ ಮಾಡಿದ್ದಾರೆ. ಆದರೆ, ಈ ಸಂಸತ್ ಭವನದ ಬಗ್ಗೆ ರಾಷ್ಟ್ರೀಯ ಜನತಾದಳ ಪಕ್ಷವು ಅವಹೇಳನಕಾರಿ ಟ್ವೀಟ್ ಮಾಡಿದ್ದು, ಭಾರೀ ಚರ್ಚೆಗೆ ಕಾರಣವಾಗಿದೆ.

ಹೌದು, ನೂತನ ಸಂಸತ್ ಭವನವನ್ನು ರಾಷ್ಟ್ರೀಯ ಜನತಾದಳ ಪಕ್ಷವು ಶವಪೆಟ್ಟಿಗೆಗೆ (ಕಾಫಿನ್‌ ಬಾಕ್ಸ್‌) ಹೋಲಿಸಿದೆ. ಪಕ್ಷದ ಅಧಿಕೃತ ಟ್ವಿಟರ್‌ನಲ್ಲಿ ಶವ ಪೆಟ್ಟಿಗೆ ಹಾಗೂ ಸಂಸತ್‌ ಭವನದ ಚಿತ್ರವನ್ನು ಹಾಕಲಾಗಿದೆ. ಈ ಮೂಲಕ ನೂತನ ಸಂಸತ್ ಭವನವನ್ನು ಶವಪೆಟ್ಟಿಗೆಗೆ ಹೋಲಿಸಿ ಅಪಹಾಸ್ಯ ಮಾಡಲಾಗಿದೆ.

ಸದ್ಯ ಆರ್‌ಜೆಡಿಯ ಈ ಟ್ವೀಟ್‌ಗೆ ವ್ಯಾಪಕ ವಿರೋಧ, ಆಕ್ರೋಶ ವ್ಯಕ್ತವಾಗಿದೆ. ಆರ್‌ಜೆಡಿಯು ಬ್ರಿಟೀಷ್‌ ಸಂಸ್ಕೃತಿಯನ್ನು ಬೆಂಬಲಿಸುತ್ತಿದೆ. ಇದೇ ರೀತಿಯ ಬಾಕ್ಸ್‌ನಲ್ಲಿ ಪಕ್ಷದ ಅಂತ್ಯವಾಗಲಿದೆ ಎಂದು ನೆಟ್ಟಿಗರು ಟ್ರೋಲ್‌ ಮಾಡುತ್ತಿದ್ದಾರೆ.

ಆರ್‌ಜೆಡಿ ಟ್ವೀಟ್’ಗೆ ಬಿಜೆಪಿ ಕೂಡ ಟಾಂಗ್ ನೀಡಿದೆ. ಬಿಜೆಪಿ ನಾಯಕ ಸುಶೀಲ್‌ ಕುಮಾರ್‌ ಅವರು ಈ ಬಗ್ಗೆ ಪ್ರತಿಕ್ರಿಯಿಸಿದ್ದು, “ಮೋದಿ ಅವರು ಪ್ರಜಾಪ್ರಭುತ್ವದ ಕನ್ನಡಿಯಾದ ಸಂಸತ್‌ ಭವನಕ್ಕೆ ಹೊಸ ರೂಪ ನೀಡಿ ದೇಶದ ಹಿರಿಮೆ ಹೆಚ್ಚಿಸಿದ್ದಾರೆ. ಆದರೆ, ಆರ್‌ಜೆಡಿ ಮನಸ್ಥಿತಿ ಆ ಪಕ್ಷದ ಚಿಂತನೆಯನ್ನು ಎತ್ತಿ ತೋರಿಸುತ್ತದೆ. ಟೀಕೆಯ ಭರದಲ್ಲಿ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಅಡ್ಡಿಯಾಗುವುದು ಬೇಡ, ಸರಿಯಲ್ಲ” ಎಂದು ಹೇಳಿದರು.

ಬಿಹಾರದ ರಾಷ್ಟ್ರೀಯ ಜನತಾದಳ (ಆರ್‌ಜೆಡಿ) ಪಕ್ಷವು ಈಗಾಗಲೇ ನೂತನ ಸಂಸತ್‌ ಭವನ ಉದ್ಘಾಟನೆ ಕಾರ್ಯಕ್ರಮದಿಂದ ದೂರ ಇರುವುದಾಗಿ ಹೇಳಿತ್ತು. ಅಂತೆಯೇ ಇಂದಿನ ಕಾರ್ಯಕ್ರಮಕ್ಕೆ ಪಕ್ಷದ ಪ್ರತಿನಿಧಿಗಳು ಆಗಮಿಸಿಲ್ಲ. ಇನ್ನು ನೂತನ ಸಂಸತ್‌ ಭವನ ಉದ್ಘಾಟನೆ ಸಮಾರಂಭಕ್ಕೆ ದೇಶದ ವಿವಿಧ ರಾಜ್ಯಗಳ ರಾಜಕೀಯ ಪಕ್ಷಗಳಿಗೆ ಆಹ್ವಾನ ನೀಡಲಾಗಿದೆ. ಆದರೆ, ಪ್ರಧಾನಿ ನರೇಂದ್ರ ಮೋದಿ (PM Modi) ಅವರು ಸಂಸತ್ ಉದ್ಘಾಟನೆ ಮಾಡುವುದನ್ನು ವಿರೋಧಿಸಿರುವ ವಿಪಕ್ಷಗಳು, ಕಾರ್ಯಕ್ರಮವನ್ನು ಬಹಿಷ್ಕರಿಸಿವೆ. ಆರ್‌ಜೆಡಿ, ಟಿಎಂಸಿ(TMC), ಕಾಂಗ್ರೆಸ್ (Congress), ಡಿಎಂಕೆ(DMK) ಮುಂತಾದ 19 ಪಕ್ಷಗಳು ಸೇರಿಕೊಂಡಿದ್ದು, ಜಂಟಿ ಹೇಳಿಕೆ ಹೊರಡಿಸಿವೆ. ಎನ್‌ಡಿಎ (NDA) ಮಿತ್ರ ಪಕ್ಷವಲ್ಲದ ಒಡಿಶಾದ ಬಿಜೆಡಿ (BJD) ಮತ್ತು ಆಂಧ್ರಪ್ರದೇಶದ ವೈಎಸ್‌ಆರ್‌ಸಿಪಿ (YSRCP) ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸುವುದಾಗಿ ಅಧಿಕೃತವಾಗಿ ತಿಳಿಸಿವೆ.

ಇದನ್ನೂ ಓದಿ: KMF Recruitment: KMF ನಲ್ಲಿ ವಿವಿಧ 219 ಹುದ್ದೆಗಳಿಗೆ ಅರ್ಜಿ ದಿನಾಂಕ ವಿಸ್ತರಣೆ, 97,000 ರೂವರೆಗೆ ಭರ್ಜರಿ ಸಂಬಳ

You may also like

Leave a Comment