Home » Child Death: ಬಾತ್ ರೂಮಿನಲ್ಲಿದ್ದ ಬಕೆಟ್’ಗೆ ತಲೆಕೆಳಗಾಗಿ ಬಿದ್ದ 10 ತಿಂಗಳ ಮಗು ಸಾವು !

Child Death: ಬಾತ್ ರೂಮಿನಲ್ಲಿದ್ದ ಬಕೆಟ್’ಗೆ ತಲೆಕೆಳಗಾಗಿ ಬಿದ್ದ 10 ತಿಂಗಳ ಮಗು ಸಾವು !

0 comments
Child Death

Child Death: ಇನ್ನೇನು ಪುಟ್ಟ ಪುಟ್ಟ ಹೆಜ್ಜೆ ಹಾಕುತ್ತ, ಪ್ರಪಂಚದ ಖುಷಿಯನ್ನು ಅನುಭವಿಸುವ ಮೊದಲೇ ಮುದ್ದಾದ ಮಗು ತಾಯಿಯ ಮಡಿಲಲ್ಲಿ ಹೆಣವಾಗಿ ಮಲಗಿದೆ.

ಹೌದು, ಅನ್ವರ್ ಮತ್ತು ಶಬಾನಾ ಶೇರ್ ದಂಪತಿಗಳ ದುಹಾ ಮನ್ಹಾಲ್ ಎಂಬ 10 ತಿಂಗಳ ಮಗು ಬಾತ್ ರೂಂ ನಲ್ಲಿ ಬಕೆಟ್ ನಲ್ಲಿದ್ದ ನೀರಿಗೆ ಬಿದ್ದು ದಾರುಣ ಅಂತ್ಯ (Child Death)ಕಂಡಿದೆ. ಸೋಮವಾರ ಈ ಘಟನೆ ನಡೆದಿದ್ದು, ಕುಟುಂಬಸ್ಥರು ಹಾಗೂ ಹೆತ್ತವರ ರೋಧನೆ ಮುಗಿಲು ಮುಟ್ಟಿದೆ.

ಮಾಹಿತಿ ಪ್ರಕಾರ ಈ ವೇಳೆ ಮನೆಯಲ್ಲಿ ಶಬಾನಾ ಶೆರಿನ್ ಹಾಗೂ ಇಬ್ಬರು ಮಕ್ಕಳು ಮಾತ್ರ ಇದ್ದರು. ಮಗು ಆಕಸ್ಮಿಕವಾಗಿ ನೀರಿಗೆ ಬಿದ್ದು ಸಾವನ್ನಪ್ಪಿದ್ದು, ಘಟನಾ ಸ್ಥಳಕ್ಕೆ ಮಾವೂರು ಎಸ್‌ಐ ಮೋಹನನ್, ಸಿವಿಲ್ ಪೊಲೀಸ್ ಅಧಿಕಾರಿಗಳಾದ ಶಿಬು ಮತ್ತು ಪ್ರಿನ್ಸಿ ಆಗಮಿಸಿ ವಿಚಾರಣೆ ನಡೆಸಿದ್ದಾರೆ.

 

ಇದನ್ನು ಓದಿ: Five guarantees: ನಾಳೆ ಮಧ್ಯಾಹ್ನ 12ಕ್ಕೆ ಸಚಿವ ಸಂಪುಟ ಸಭೆ : ಐದು ಗ್ಯಾರಂಟಿ ಜಾರಿಗೆ ಅಧಿಕೃತ ಆದೇಶ ಸಾಧ್ಯತೆ

You may also like

Leave a Comment