Current bill: ಕಾಂಗ್ರೆಸ್ ಸರ್ಕಾರದ(Congress Government) ಉಚಿತ ವಿದ್ಯುತ್ ಯೋಜನೆ ಜಾರಿಯಾಗದ ಹಿನ್ನೆಲೆಯಲ್ಲಿ ರಾಜ್ಯದ ಜನ ಕರೆಂಟ್ ಬಿಲ್ ಕಟ್ಟದೆ ಆಕ್ರೋಶ ಹೊರಹಾಕಿದ್ದಾರೆ. ಆದರೀಗ ಈ ಬೆನ್ನಲ್ಲೇ ಕರೆಂಟ್ ಬಿಲ್ ಕಟ್ಟದ ಜನತೆಗೆ ಇಂಧನ ಇಲಾಖೆ(Energy department)ಶಾಕ್ ನೀಡಿದೆ.
ಹೌದು, ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿರುವ ಕಾಂಗ್ರೆಸ್(Congress) ಚುನಾವಣಾ(Election) ಪೂರ್ವದಲ್ಲಿ ತಾನು ಬಿಡುಗಡೆ ಮಾಡಿದ ಪ್ರಣಾಳಿಕೆಯಲ್ಲಿ ರಾಜ್ಯದ ಜನರಿಗೆ ಆಶ್ವಾಸನೆ ನೀಡಿದ್ದ 5 ಗ್ಯಾರಂಟಿಗಳನ್ನು(5 Guaranty)ಗಳಲ್ಲಿ 200 ಯುನಿಟ್ ಉಚಿತ ವಿದ್ಯುತ್ ಘೋಷಣೆಯು ಒಂದಾಗಿದೆ. ಆದರೀಗ ಇವುಗಳನ್ನೆಲ್ಲ ಜಾರಿಗೊಳಿಸಲು ಸರ್ಕಾರ ಮೀನಾಮೇಶ ಎಣಿಸುತ್ತಿದ್ದು, ರಾಜ್ಯದ ಜನ ಕರೆಂಟ್ ಬಿಲ್ ಕಟ್ಟದೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಆದರೀಗ ಈ ಬೆನ್ನಲ್ಲೇ ಕರೆಂಟ್ ಬಿಲ್(Current bill) ಕಟ್ಟದ ಜನತೆಗೆ ರಾಜ್ಯ ಸರ್ಕಾರ ಶಾಕ್ ನೀಡಿದ್ದು, ಕರೆಂಟ್ ಬಿಲ್ ಕಟ್ಟದಿದ್ದರೆ ಕನೆಕ್ಷನ್ ಕಟ್ ಮಾಡುವಂತೆ ಎಲ್ಲಾ ಎಸ್ಕಾಂಗಳಿಗೆ ಖಡಕ್ ಸೂಚನೆ ನೀಡಿದೆ..
ಈ ಕುರಿತು ಸೂಚನೆ ನೀಡಿರುವ ಇಂಧನ ಇಲಾಖೆ ಜನರು ಬಾಕಿ ಇರುವ, ಪ್ರಸ್ತುತ ವಿದ್ಯುತ್ ಬಿಲ್ ಪಾವತಿಸಬೇಕು. ಮುಖ್ಯವಾಗಿ ಬಳಸಿರುವ ವಿದ್ಯುತ್ ಬಿಲ್ ಪಾವತಿಸಬೇಕು ಎಂದು ಸೂಚನೆ ನೀಡಿದೆ. ಕರೆಂಟ್ ಬಿಲ್ ಪಾವತಿ ವಿಳಂಬ ಮಾಡಿದ್ರೂ ದಂಡ ಹಾಕಲಾಗುವುದು. 3 ತಿಂಗಳ ಬಿಲ್ ಬಾಕಿ ಕಟ್ಟದಿದ್ದರೆ ಲೈಸೆನ್ಸ್ ರದ್ದು ಮಾಡಲಾಗುವುದು ಎಂದು ಖಡಕ್ ಎಚ್ಚರಿಕೆ ನೀಡಿದೆ.
ಅಂದಹಾಗೆ ಕಾಂಗ್ರೆಸ್ ಚುನಾವಣೆಗೂ ಮುನ್ನ 200 ಯುನಿಟ್ ವಿದ್ಯುತ್ ಉಚಿತ ಎಂದು ಘೋಷಿಸಿತ್ತು. ಇದೀಗ ಅಧಿಕಾರದ ಚುಕ್ಕಾಣಿ ಹಿಡಿದಿರುವ ಕಾಂಗ್ರೆಸ್ ಈವರೆಗೂ ಗೃಹಜ್ಯೋತಿ ಯೋಜನೆಯ ಆದೇಶ ಹೊರಡಿಸಿಲ್ಲ. ಆದೇಶ ಬರೋವರೆಗೂ ಕರೆಂಟ್ ಬಿಲ್ ಪಾವತಿಸದಿದ್ದರೆ ದಂಡ ಹಾಕಲಾಗುವುದು ಎಂದು ಇಂಧನ ಇಲಾಖೆ ಎಚ್ಚರಿಕೆ ನೀಡಿದೆ. ಇದು ಎಷ್ಟರ ಮಟ್ಟಿಗೆ ನ್ಯಾಯ ಎಂದು ಇಂದಿನ ಮುಖ್ಯಮಂತ್ರಿಗಳು(CM Siddaramaiah) ಹಾಗೂ ಉಪಮುಖ್ಯಮಂತ್ರಿಗಳೇ(DCM DK Shivkumar)ಸ್ಪಷ್ಟೀಕರಣ ನೀಡಬೇಕು.
ಯಾಕೆಂದರೆ ಚುನಾವಣೆ ಮುಂಚಿತವಾಗಿ ಈ ಉಚಿತ ಯೋಚನೆ ಘೋಷಣೆ ಮಾಡಿ, ಅಧಿಕಾರ ಹಿಡಿದ ಕೂಡಲೇ ಮೊದಲ ಸಂಪುಟ ಸಭೆಯಲ್ಲಿ ಚರ್ಚಿಸಿ, ಒಪ್ಪಿಗೆ ಪಡೆದು ಜಾರಿಗೊಳಿಸಲಾಗುವುದು ಎಂದು ಹೇಳಿದ್ದರು. ಆದರೀಗ ಎಲ್ಲವೂ ಆಗಿದೆ. ಉಚಿತ ಯೋಜನೆಗಳು ಮಾತ್ರ ಜಾರಿಯಾಗಿಲ್ಲ. ಪ್ರಶ್ನಿಸಿದರೆ ಕ್ರಮ ಜರುಗಿಸುತ್ತಿದ್ದಾರೆ. ಇದು ನಿಜವಾಗಿಯೂ ಖಂಡನೀಯ!
ಇದನ್ನೂ ಓದಿ:ಮುಹೂರ್ತಕ್ಕೆ ನಿಮಿಷಗಳ ಹಿಂದೆ ಓಡಿ ಹೋದ ವಧು, ಹಠಕ್ಕೆ ಬಿದ್ದು 13 ದಿನ ಮಂಟಪದಲ್ಲಿ ಠಿಕಾಣಿ ಹೂಡಿದ ವರ !
