Missing: ಬೆಳ್ತಂಗಡಿ: ನಿಶ್ಚಿತಾರ್ಥವಾಗಿ ಮದುವೆ ನಿಗದಿಯಾಗಿದ್ದಅಂಡಿಚೆಯ ಯುವತಿಯೋರ್ವಳು ಪ್ರಿಯಕರನೊಂದಿಗೆ ಪರಾರಿಯಾಗಿ ಆತನೊಂದಿಗೆ ಮದುವೆಯಾಗಿ ಹಾಗೆ ಹಾಜರಾದ ಘಟನೆ ನಡೆದಿದೆ.
ಅಂಡಿಜೆ ಗ್ರಾಮದ ಯುವತಿಗೆ ಬಂಟ್ವಾಳದ ಕನ್ಯಾನದ ಯುವಕನೊಂದಿಗೆ ಮದುವ ನಿಗದಿಯಾಗಿದ್ದು ಜೂ.1 ರಂದು ಮದುವೆ ನೆರವೇರಬೇಕಿತ್ತು, ಆದರೆ ಮದುವೆಗೆ ಕೆಲವೇ ದಿನಗಳು ಬಾಕಿ ಇರುವಾಗಲೇ ವಧು ಮನೆಯಿಂದ ನಾಪತ್ತೆ (Missing) ಯಾಗಿದ್ದಳು.
ಈ ಬಗ್ಗೆ ಮನೆಯವರು ವೇಣೂರು ಪೊಲೀಸರಿಗೆ ದೂರು ನೀಡಿದ್ದರು. ಅತ್ತ ಕರಿಮಣೇಲು ಗ್ರಾಮದ ಯುವಕನೂ ನಾಪತ್ತೆಯಾಗಿದ್ದ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆ ನಡೆಸುತ್ತಿರುವಾಗಲೇ ಯುವತಿ ಪ್ರೀತಿಸಿದ್ದ ಯುವಕನೊಂದಿಗೆ ಠಾಣೆಗೆ ಹಾಜರಾಗಿ ಮದುವೆಯಾಗಿರುವುದಾಗಿ ಹೇಳಿಕೆ ನೀಡಿದ್ದು, ಪೊಲೀಸರು ದಂಪತಿಯನ್ನು ಕಳುಹಿಸಿಕೊಟ್ಟಿದ್ದಾರೆ. ಇಬ್ಬರೂ ವಯಸ್ಕರಾಗಿರುವ ಕಾರಣ ಪ್ರಕರಣ ಸುಖಾಂತ್ಯ ಕಂಡಿದೆ.
ಇದನ್ನು ಓದಿ: Groom missing: ಇಂದು ವಿವಾಹಬೇಕಾಗಿದ್ದ ಯುವಕ ದಿಢೀರ್ ನಾಪತ್ತೆ | ಮೆಹಂದಿ ದಿನ ಪೇಟೆಗೆ ಹಣ್ಣು ತರಲು ಹೋದವ ನಾಪತ್ತೆ
