Home » Sandalwood Sheddown: ಜೂನ್ 5 ರಿಂದ ಕನ್ನಡ ಚಿತ್ರರಂಗದ ಶೂಟಿಂಗ್ ಕಂಪ್ಲೀಟ್ ಬಂದ್; ಆಕ್ಷನ್ ಕಟ್ ಪ್ಯಾಕಪ್’ಗೆ ಇದೆ ದೊಡ್ಡ ಕಾರಣ !

Sandalwood Sheddown: ಜೂನ್ 5 ರಿಂದ ಕನ್ನಡ ಚಿತ್ರರಂಗದ ಶೂಟಿಂಗ್ ಕಂಪ್ಲೀಟ್ ಬಂದ್; ಆಕ್ಷನ್ ಕಟ್ ಪ್ಯಾಕಪ್’ಗೆ ಇದೆ ದೊಡ್ಡ ಕಾರಣ !

0 comments
Sandalwood Sheddown

Sandalwood Sheddown: ಜೂನ್ 5 ರಿಂದ ಕನ್ನಡ ಚಿತ್ರರಂಗದ (Sandalwood Sheddown) ಶೂಟಿಂಗ್ ಕಂಪ್ಲೀಟ್ ಬಂದ್ ಆಗಲಿದೆ. ಸಿನಿಮಾಗಳ ಹೊರಾಂಗಣ ಚಿತ್ರೀಕರಣಕ್ಕೆ ಬ್ರೇಕ್​ ಬೀಳುತ್ತಿದೆ. ಆಕ್ಷನ್ ಕಟ್ ಪ್ಯಾಕಪ್’ಗೆ ದೊಡ್ಡ ಕಾರಣವೇ ಇದೆ. ಹೌದು, ವೇತನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಹೊರಾಂಗಣ ಚಿತ್ರೀಕರಣ ಕಾರ್ಮಿಕರ ಸಂಘ ಬಂದ್‌ಗೆ ಕರೆನೀಡಿದೆ.

ಹೊರಾಂಗಣ ಚಿತ್ರೀಕರಣ ಕಾರ್ಮಿಕರು ಕಳೆದ ಮೂರು ವರ್ಷಗಳಿಂದ ವೇತನ ಹೆಚ್ಚಳದ ಬೇಡಿಕೆ ಇಡುತ್ತಾ ಬಂದಿದ್ದು, ಈ ಬಗ್ಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ನಿರ್ಮಾಪಕರ ಸಂಘಕ್ಕೆ ಮನವಿ ಮಾಡಿದ್ದರು. ಆದರೆ, ಫಿಲ್ಮ್ ಚೇಂಬರ್ ಮತ್ತು ನಿರ್ಮಾಪಕರ ಸಂಘ ಮನವಿಯನ್ನು ಕಡೆಗಣಿಸಿತ್ತು. ಈ ಹಿನ್ನೆಲೆ ಇದೀಗ ಶೂಟಿಂಗ್ ಬಂದ್ ಮಾಡುವ ನಿರ್ಧಾರ ಮಾಡಲಾಗಿದೆ.

ಈಗಲೂ ಚಿತ್ರೀಕರಣ ಕಾರ್ಮಿಕರ ಬೇಡಿಕೆ ಈಡೇರಿಸದಿದ್ದರೆ ಜೂನ್ 5 ರಿಂದ ಹೊರಾಂಗಣ ಚಿತ್ರೀಕರಣ ಬಂದ್ ಮಾಡಲು ಕಾರ್ಮಿಕರ ಸಂಘ ನಿರ್ಧರಿಸಿದೆ. ಅಲ್ಲದೆ, ಸರ್ಕಾರ ಚಿತ್ರಗಳಿಗೆ ನೀಡುವ ಸಬ್ಸಿಡಿಗೆ
ಹೊರಾಂಗಣ ಚಿತ್ರೀಕರಣ ಸರಬರಾಜು ಮಾಡುವ ಮಾಲೀಕರ ಸಹಿ ಬೇಕು. ಆದರೆ ಹಾಗೆ ನಡೆಯುತ್ತಿಲ್ಲ ಎಂದು ಹೊರಾಂಗಣ ಚಿತ್ರೀಕರಣ ಘಟಕದ ಅಧ್ಯಕ್ಷ ಎಹೆಚ್ ಭಟ್ ಹೇಳಿದ್ದಾರೆ.

ಇದನ್ನೂ ಓದಿ: Rajamouli: ಸಿನಿ ಜಗತ್ತು ರಾಜಮೌಳಿಗಾಗಿ ಕಾಯುತ್ತೆ, ಆದ್ರೆ ಈ ಸ್ಟಾರ್ ನಿರ್ದೇಶಕ ಆ ನಟನಿಗಾಗಿ ದಶಕಗಳಿಂದ ಕಾಯ್ತಿದ್ದಾರೆ!!

You may also like

Leave a Comment