Suicide attempt: ಬೆಂಗಳೂರು : ಪ್ರೇಮಿಗಳು ವಿಷಸೇವಿಸಿ ಸ್ಲೀಪರ್ ಕೋಚ್ ಬಸ್‌ನಲ್ಲಿ ಮಲಗಿದ್ದು, ಯುವತಿ ಮೃತಪಟ್ಟು ,ಯುವಕ ಪಾರಾದ ಘಟನೆ ರಾಣೆಬೆನ್ನೂರು ನಗರದ ಚಳಗೇರಿ ಟೋಲ್ ಬಳಿಇರುವ ಗ್ರೀನ್ ಪ್ಯಾಲೇಸ್ ಹೋಟೆಲ್ ಬಳಿ ನಡೆದಿದೆ.
ಹೇಮಾ (20) ಮೃತಪಟ್ಟ ಯುವತಿ. ಅಖಿಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಅಪಾಯದಿಂದ ಪಾರಾದ ಯುವಕ.
ಘಟನೆ ವಿವರ: ಬಿ.ಕಾಂ ಫೈನಲ್ ಇಯರ್ ವಿದ್ಯಾರ್ಥಿನಿಯಾಗಿದ್ದ ಬೆಂಗಳೂರು ಮೂಲದ ಹೇಮಾ ಮತ್ತು ಬಾಗಲಕೋಟೆ ಮೂಲದ ಅಖಿಲ್ ಒಬ್ಬರನ್ನೊಬ್ಬರು ಪರಸ್ಪರ ಪ್ರೀತಿಸುತ್ತಿದ್ದರು.
ಆದರೆ ಇವರಿಬ್ಬರ ಮದುವೆಗೆ ಪೋಷಕರು ವಿರೋಧ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಇಬ್ಬರೂ ವಿಷಸೇವಿಸಿ ಆತ್ಮಹತ್ಯೆ (Suicide attempt ) ಮಾಡಿಕೊಳ್ಳಲು ತೀರ್ಮಾನಿಸಿ ಇಬ್ಬರೂ ವಿಷಸೇವಿಸಿದ್ದಾರೆ.ಆದರೆ ಯುವತಿ ಮೃತಪಟ್ಟು,ಯುವಕ ಬದುಕುಳಿದಿದ್ದಾನೆ.
ಸಾಯೋದಕ್ಕೂ ಮುನ್ನ ನಮಗೆ ಮದುವೆಗೆ ನೀವು ಒಪ್ಪಿಗೆ ಕೊಡಲ್ಲ ಅನ್ನೋದು ಗೊತ್ತಾಯ್ತು. ಹೀಗಾಗಿ ಬಾಂಬೆಗೆ ಹೋಗ್ತಾ ಇದ್ದೇವೆ ಎಂದು ಯುವತಿ ಮನೆಯವರಿಗೆ ಕರೆ ಮಾಡಿ ಹೇಳಿದ್ದಳು. ಬಳಿಕ ಸ್ಲೀಪರ್ ಕೋಚ್ ಬಸ್ ನಲ್ಲೇ ವಿಷ ಕುಡಿದು ಮಲಗಿದ್ದಾರೆ. ಈ ನಡುವೆ ಊಟಕ್ಕೆ ಬಸ್ ನಿಲ್ಲಿಸಿದಾಗ ಬಸ್ ನಲ್ಲಿದ್ದವರಿಗೆ ಅನುಮಾನ ಬಂದಿದೆ.
ವಿಷದ ವಾಸನೆ ಬಂದ ಹಿನ್ನೆಲೆಯಲ್ಲಿ ಸ್ಥಳೀಯರು ಕೂಡಲೇ ಆಸ್ಪತ್ರೆಗೆ ದಾಖಲಿಸುವ ಪ್ರಯತ್ನ ಮಾಡಿದರು. ಆದರೆ ಯುವತಿ ಬದುಕುಳಿಯಲಿಲ್ಲ. ಯುವಕ ಚೇತರಿಸಿಕೊಂಡು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾನೆ.
ಇದನ್ನು ಓದಿ: Odisha: ಒಡಿಶಾ ರೈಲು ದುರಂತ: ಹೆಂಡತಿಯನ್ನು ಅಂತ್ಯಕ್ರಿಯೆ ನಡೆಸಿ, ಮಗಳ ಮೃತ ದೇಹ ಹುಡುಕಲು ಹೋದ ವ್ಯಕ್ತಿ!
