Bellanduru Lake: ಬೆಳ್ಳಂದೂರು ಕೆರೆ (Bellanduru Lake) ನೊರೆ ಕಾಣಿಸಿಕೊಳ್ಳಲು ಕಾರಣವೇನೆಂದು ಐಐಎಸ್‌ಸಿಯು (IISc) ಪತ್ತೆ ಹಚ್ಚಿದೆ. ನಾಲ್ಕು ವರ್ಷಗಳ ಅಧ್ಯಯನ ಮಾಡಿದ ನಂತರ ಸಂಶೋಧಕರು ಇದರ ವಿಚಾರವಾಗಿ ಮೂರು ಕಾರಣಗಳನ್ನು ಈಗ ಹೇಳಿದ್ದಾರೆ. ಒಂದು ಅತಿಯಾದ ಮಳೆ, ಎರಡನೆಯದು ಕೆರೆಗೆ ಸೇರುವ ಸಂಸ್ಕರಿಸದ ಕೊಳಚೆ ನೀರು, ಮೂರನೆ ಕಾರಣ ನಿರ್ದಿಷ್ಟ ಬ್ಯಾಕ್ಟೀರಿಯಾವನ್ನು ಹೊಂದಿರುವ ಘನವಸ್ತುಗಳು ಕಾರಣ ದೆಂದು ಸಿಎಸ್‌ಟಿ (ಸೆಂಟರ್ ಫಾರ್ ಸಸ್ಟೈನಬಲ್ ಟೆಕ್ನಾಲಜೀಸ್), ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ ನ ಸಂಶೋದಕರು ಹೇಳಿದ್ದಾರೆ.
ಕೊಳಚೆ ನೀರು ಸಂಸ್ಕರಣೆ ಮಾಡದೇ ಕೆರೆಗೆ ಸೇರುವುದರಿಂದ ಕೆಸರಾಗಿ ಬದಲಾಗುತ್ತದೆ. ಇದನ್ನು ಮೊದಲು ನಿಲ್ಲಿಸಬೇಕು. ಈ ಕೊಳಚೆ ನೀರು 10-15 ದಿನಗಳ ನಂತರ ಹೂಳಾಗಿ ಬದಲಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಈ ನೊರೆ ರಚನೆಯನ್ನು ಅಧ್ಯಯನ ಮಾಡಲು ಸಂಶೋಧಕರು ಆಯಾ ಕಾಲದ ನೀರು, ನೊರೆನಸಂಗ್ರಹಿಸಿ ಈ ಅಧ್ಯಯನ ಮಾಡಿದ್ದಾರೆ.
ಇದನ್ನೂ ಓದಿ: ಇನ್‌ಸ್ಟ್ರಾಂಗ್‌ನಲ್ಲಿ ತಲಾಖ್ ಕುರಿತ ರೀಲ್ಸ್ ಮಾಡಿದ ಪತ್ನಿ, ರೆಬೆಲ್ ಆದ ಪತಿ, ರಿಯಲ್ ಆಗಿ ತಲಾಖ್ ನೀಡಿದ! ಮುಂದೇನಾಯ್ತು?
