Home » Yashika anand: ತನಗಿಂತಲೂ 22 ವರ್ಷ ಹಿರಿಯ ನಟನೊಂದಿಗೆ ಕಾಲಿವುಡ್ ಬ್ಯೂಟಿ ಯಶಿಕಾ ಡೇಟಿಂಗ್!! ಯಾರು ಆ ಅದೃಷ್ಟವಂತ?

Yashika anand: ತನಗಿಂತಲೂ 22 ವರ್ಷ ಹಿರಿಯ ನಟನೊಂದಿಗೆ ಕಾಲಿವುಡ್ ಬ್ಯೂಟಿ ಯಶಿಕಾ ಡೇಟಿಂಗ್!! ಯಾರು ಆ ಅದೃಷ್ಟವಂತ?

by ಹೊಸಕನ್ನಡ
0 comments
Yashika anand

Yashika anand: ತಮಿಳು(Tamil) ಮತ್ತು ತೆಲುಗು(Telugu) ಚಿತ್ರರಂಗದಲ್ಲಿ ಖ್ಯಾತಿ ಗಳಿಸಿರೋ ನಟಿ ಯಶಿಕಾ ಆನಂದ್​(Yashika anand) ಬಿಗ್​ ಬಾಸ್​(Big boss) ಮುಂತಾದ ರಿಯಾಲಿಟಿ ಶೋಗಳಲ್ಲಿ ಸ್ಪರ್ಧಿಸಿ ಕೂಡ ಹೆಸರು ಗಳಿಸಿದ್ದಾರೆ. ಪ್ರಸ್ತುತ ಅನೇಕ ಸಿನಿಮಾ ಅವಕಾಶಗಳು ಅವರ ಕೈಯಲ್ಲಿವೆ. ಅಲ್ಲದೆ ಈ ಹಿಂದೆ ಭೀಕರವಾದ ಅಪಘಾತದಿಂದಾಗಿ ಅವರು ಸಾವಿನ ಹೊಸ್ತಿಲಿಗೆ ಹೋಗಿ ಅದೃಷ್ಟವಶಾತ್​ ಬದುಕಿ ಬಂದಿದ್ದರು. ಹಿಂದಿನ ನೋವೆಲ್ಲ ಮರೆತು ಮತ್ತೆ ಗ್ಲಾಮರ್​ ಲೋಕದ ಕ್ಷಣಗಳನ್ನು ಸವಿಯುತ್ತಿದ್ದಾರೆ. ಇದೀಗ ಯಶಿಕಾ ಕುರಿತಾದ ಮತ್ತೊಂದು ಬ್ರೇಕಿಂಗ್​ ಸುದ್ದಿ ಹೊರಬಿದ್ದಿದೆ.

ವಯಸ್ಕರ ಕಾಮಿಡಿ ಚಿತ್ರ ಮತ್ತು ಬಿಗ್ ಬಾಸ್ ಮೂಲಕ ಸಾಕಷ್ಟು ಖ್ಯಾತಿ ಗಳಿಸಿದ ನಟಿ ಯಶಿಕಾ ಆನಂದ್ ಅವರು ಇದೀಗ ಮತ್ತೊಂದು ಕಾರಣಕ್ಕಾಗಿ ಯಶಿಕಾ ಸುದ್ದಿಯಾಗಿದ್ದಾರೆ. ಹೌದು, ತಮಗಿಂತ 22 ವರ್ಷ ಹಿರಿಯ ನಟನ ಜೊತೆ ಡೇಟಿಂಗ್ (Dating) ಮಾಡುತ್ತಿದ್ದಾರೆ ಎನ್ನುವ ವಿಚಾರ ಹರಿದಾಡುತ್ತಿದೆ. ಅದಕ್ಕೆ ಪೂರಕ ಎನ್ನುವಂತೆ ಆ ನಟನ ಜೊತೆಗೆ ಕಾರಿನಲ್ಲಿ ಸುತ್ತುವ ಮತ್ತು ಆತನೊಂದಿಗೆ ಕಿಸ್ ಮಾಡಿರುವ ಫೋಟೋಗಳು(Photos) ಕೂಡ ವೈರಲ್(Viral) ಆಗಿವೆ.

ಆ ವ್ಯಕ್ತಿ ಕಾಲಿವುಡ್​ ಮಾಜಿ ನಟಿ ಶಾಲಿನಿ(Shalini) ಹಾಗೂ ಬೇಬಿ ಶ್ಯಾಮಿಲಿ(Baby shamily)ಎಂದೇ ಕನ್ನಡಿಗರಿಗೆ ಚಿರಪರಿಚಿತರಾದ ಶ್ಯಾಮಿಲಿ ಅವರ ಸಹೋದರ ಹಾಗೂ​ ಸೂಪರ್​​​​ಸ್ಟಾರ್​ ಅಜಿತ್​ಕುಮಾರ್​ ಅವರ ಬಾಮೈದ ರಿಚರ್ಡ್​ ರಿಷಿ ಎನ್ನಲಾಗುತ್ತಿದೆ. ಇಬ್ಬರು ಡೇಟಿಂಗ್​ ಮಾಡುತ್ತಿದ್ದಾರೆ ಎಂಬ ಚರ್ಚೆ ಕಾಲಿವುಡ್​(Kallywood) ಗಲ್ಲಿ ಗಲ್ಲಿಯಲ್ಲಿ ನಡೆಯುತ್ತಿದೆ. ರಿಚರ್ಡ್​ ರಿಷಿ(Richard rishi) ಅವರು ಇನ್​ಸ್ಟಾಗ್ರಾಂನಲ್ಲಿ(Instagram) ಶೇರ್​ ಮಾಡಿಕೊಂಡಿರುವ ಫೋಟೋಗಳು ಕೂಡ ವದಂತಿಗೆ ಪುಷ್ಠಿ ನೀಡುತ್ತಿವೆ.

ಅಂದಹಾಗೆ ಕೇವಲ 23ರ ವಯಸ್ಸಿನ ಯಶಿಕಾ ಆನಂದ್, 45 ವರ್ಷದ ರಿಚರ್ಡ್ ಜೊತೆ ಡೇಟಿಂಗ್ ಮಾಡುತ್ತಿರುವ ವಿಚಾರ ಕಾಲಿವುಡ್ ನ ಗಲ್ಲಿಗಲ್ಲಿಗಳಲ್ಲಿ ಮಾತಾಡಿಕೊಳ್ಳುವಂತಾಗಿದೆ. ಅಲ್ಲದೇ ಇಬ್ಬರೂ ಜೊತೆಗಿರುವ ಸಾಕಷ್ಟು ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ಸದ್ಯ ಈ ಕುರಿತು ಸ್ವತಃ ಯಾಶಿಕಾ ಅವರೇ ಸ್ಪಷ್ಟನೆಯನ್ನು ನೀಡಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಯಶಿಕಾ “ತಾನು ಯಾವುದೇ ವ್ಯಕ್ತಿಯನ್ನು ಪ್ರೀತಿಸುತ್ತಿಲ್ಲ ಮತ್ತು ಡೇಟ್ ಕೂಡ ಮಾಡುತ್ತಿಲ್ಲ. ರಿಚಾರ್ಡ್​ ಅವರೊಂದಿಗಿನ ಫೋಟೋಗಳು ಮುಂಬರುವ ಹೊಸ ಸಿನಿಮಾಕ್ಕೆ ಸಂಬಂಧಿಸಿದ್ದಾಗಿವೆ. ಮಾಧ್ಯಮಗಳಲ್ಲಿ ಬರುತ್ತಿರುವ ಸುದ್ದಿ ನಿಜವಲ್ಲ. ವಿನಯ್ ಭಾರದ್ವಾಜ್ ನಿರ್ದೇಶನದ ಮುಂಬರುವ ತಮಿಳು ಚಿತ್ರ ‘ಸಿಲಾ ನೋಡಿಗಲ್’ ನಲ್ಲಿ ನಾನು ಮತ್ತು ರಿಚರ್ಡ್ ರಿಷಿ ನಟಿಸಲಿದ್ದೇವೆ” ಎಂದವರು ಸ್ಪಷ್ಟೀಕರಣ ನೀಡಿದ್ದಾರೆ.

ಯಶಿಕಾ ಆನಂದ್ ಬೋಲ್ಡ್ (Bold) ಪಾತ್ರಗಳ ಮೂಲಕ ಗುರುತಿಸಿಕೊಂಡಿದ್ದಾರೆ. ಅವರ ಕಾಸ್ಟ್ಯೂಮ್ ಕೂಡ ಯಾವಾಗಲೂ ಬೋಲ್ಡ್ ಆಗಿಯೇ ಇರುತ್ತವೆ. ಹಾಗಾಗಿ ಆಗಾಗ್ಗೆ ಜನರು ಆಕೆಗೆ ತರ್ಲೆ ಪ್ರಶ್ನೆಗಳನ್ನು ಕೇಳುತ್ತಲೇ ಇರುತ್ತಾರೆ. ಯಾವುದೇ ಮುಜಗರವಿಲ್ಲದೇ ಯಶಿಕಾ ಕೂಡ ಅಷ್ಟೇ ಬೋಲ್ಡ್ ಆಗಿ ಉತ್ತರ ಕೊಡುತ್ತಿರುತ್ತಾರೆ.

ಇನ್ನು ಸಿನಿಮಾ ವಿಚಾರಕ್ಕೆ ಬರುವುದಾದರೆ, ರಿಚರ್ಡ್ ರಿಷಿ ಅಂಜೈಲ್ ಚಿತ್ರದಲ್ಲಿ ಬಾಲ ಕಲಾವಿದನಾಗಿ ತಮ್ಮ ನಟನಾ ವೃತ್ತಿಯನ್ನು ಪ್ರಾರಂಭಿಸಿದರು ಮತ್ತು 2002 ರಲ್ಲಿ ಕಾದಲ್ ವೈರಸ್ ಚಿತ್ರದ ಮೂಲಕ ನಾಯಕ ನಟನಾಗಿ ಪದಾರ್ಪಣೆ ಮಾಡಿದರು. ತ್ರೇಲಪತಿ ಮತ್ತು ಕೂತ್ತು ಅವರ ಎರಡು ಗಮನಾರ್ಹ ಚಿತ್ರಗಳು. ಕ್ರಿವಾಲಂ, ಯುಕಾ, ಕಮಾನಿ, ಬೆನ್ ಸಿಂಗಂ, ನೆರೆತಿರ್, ತಾನಾತು ಯಾರೋ ಮತ್ತು ಚಂದೋಲಾ ಸೇರಿದಂತೆ ಅನೇಕ ಚಿತ್ರಗಳಲ್ಲಿ ನಟಿಸಿದ್ದಾರೆ. ಆದರೆ, ಅವರಿಗೆ ಹೇಳಿಕೊಳ್ಳುವಷ್ಟು ಯಶಸ್ಸನ್ನು ಸಾಧಿಸಲಿಲ್ಲ.

ಇತ್ತ ಯಶಿಕಾ ಆನಂದ್​ ಅವರು ಕಾಲಿವುಡ್​ನ “ಇರುಟ್ಟು ಅರಯಿಲ್ ಮುರಟ್ಟು ಕುತ್ತು” ಹೆಸರಿನ ವಯಸ್ಕರ ಕಾಮಿಡಿ ಚಿತ್ರ ಹಾಗೂ ಬಿಗ್​ಬಾಸ್​ ಶೋ ಮೂಲಕ ಖ್ಯಾತಿ ಪಡೆದಿದ್ದಾರೆ. 2021ರ ಜುಲೈ ತಿಂಗಳಲ್ಲಿ ಸಂಭವಿಸಿದ ಭೀಕರ ಕಾರು ಅಪಘಾತದ ಬಳಿಕ ಯಶಿಕಾ ಸಿಕ್ಕಾಪಟ್ಟೆ ಸುದ್ದಿಯಾದರು. ಇದೀಗ ಸಾಲು ಸಾಲು ಸಿನಿಮಾಗಳಲ್ಲಿ ಯಶಿಕಾ ಬಿಜಿಯಾಗಿದ್ದಾರೆ.

 

 

ಇದನ್ನು ಓದಿ: Congress 5 guarantee: 5 ಗ್ಯಾರಂಟಿ, 50 ಷರತ್ತುಗಳು; ಅರ್ಜಿ ಸಲ್ಲಿಕೆ ಎಲ್ಲಿ – ಹೇಗೆ ?- ಒಂದು ಆಮೂಲಾಗ್ರ ವರದಿ

You may also like

Leave a Comment