Home » Gruha Laxmi scheme: ಗೃಹ ಲಕ್ಷ್ಮಿಯರಿಗೆ ಸಕತ್ ಗುಡ್ ನ್ಯೂಸ್: ಮನೆ ಬಾಗಿಲಿಗೇ ಬರಲಿದೆ ಗ್ಯಾರಂಟಿ 2 ರ ಅರ್ಜಿ, ಕಂದಾಯ ಸಚಿವ ಕೃಷ್ಣ ಭೈರೇಗೌಡ ಘೋಷಣೆ !

Gruha Laxmi scheme: ಗೃಹ ಲಕ್ಷ್ಮಿಯರಿಗೆ ಸಕತ್ ಗುಡ್ ನ್ಯೂಸ್: ಮನೆ ಬಾಗಿಲಿಗೇ ಬರಲಿದೆ ಗ್ಯಾರಂಟಿ 2 ರ ಅರ್ಜಿ, ಕಂದಾಯ ಸಚಿವ ಕೃಷ್ಣ ಭೈರೇಗೌಡ ಘೋಷಣೆ !

by ಹೊಸಕನ್ನಡ
0 comments
Gruha Laxmi scheme

Gruha Laxmi scheme : ರಾಜ್ಯ ಕಾಂಗ್ರೆಸ್ ಸರ್ಕಾರವು ಮಹಿಳೆಯರಿಗೆ ಮತ್ತೊಂದು ಸಿಹಿಸುದ್ದಿ ನೀಡಿದ್ದು, ಗೃಹಲಕ್ಷ್ಮೀ ಯೋಜನೆ(Gruha Laxmi scheme )ಫಲಾನುಭವಿಗಳ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಇನ್ನೂ ಸುಲಭವಾಗಲಿದೆ. ಹೌದು, ಕಾಂಗ್ರೆಸ್ ನೀಡಿರುವ ಐದು ಗ್ಯಾರಂಟಿಗಳ ಅವುಗಳಿಗೆ ವಿಧಿಸುವುದರ ಜತೆ ಹತ್ತಾರು ವಿವಿಧ ಶರತ್ತುಗಳ ಕೆಟ್ಟ ಸುದ್ದಿಗಳ ಮಧ್ಯೆ ಕಾಂಗ್ರೆಸ್ ಒಂದು ಸಿಹಿ ಸುದ್ದಿ ನೀಡಿದೆ. ಅದರಲ್ಲೂ, ಗೃಹಲಕ್ಷ್ಮಿ ಯೋಜನೆ ಸರ್ಕಾರಕ್ಕೆ ಹೆಚ್ಚಿನ ಮಟ್ಟದ ಭಾರ ಆಗುವ ಕಾರಣ ನೂರಾರು ಕಡ್ಡಿಗಳನ್ನು ಮಡಗಿ ಫಲಾನುಭವಿಗಳನ್ನು ಕಮ್ಮಿ ಮಾಡಲು ಸರ್ಕಾರ ಯೋಚಿಸಿದೆ.

ಆದರೆ ಇಂತಹಾ ಬೇಸರದ ಘಟನೆಗಳ ಮಧ್ಯೆಯೇ ಒಳ್ಳೆಯ ಸುದ್ದಿ ಸಿಕ್ಕಿದ್ದು, ಫಲಾನುಭವಿಗಳ ಮನೆ ಬಾಗಿಲಿಗೆ ತೆರಳಿ ಅರ್ಜಿ ಸ್ವೀಕರಿಸುವ ವ್ಯವಸ್ಥೆ ಮಾಡಲಾಗುತ್ತಿದೆ ಎನ್ನುವ ಮಾಹಿತಿ ದೊರೆತಿದೆ.

ಈ ಸುದ್ದಿಯನ್ನು ಸುದ್ದಿಗಾರರೊಂದಿಗೆ ಮಾತನಾಡಿದ ಕೃಷ್ಣಭೈರೇಗೌಡ, ಗೃಹಲಕ್ಷ್ಮೀ ಅನುಷ್ಠಾನಕ್ಕಾಗಿ ಕಂದಾಯ ಇಲಾಖೆಯ ಸಿಬ್ಬಂದಿಯನ್ನು ಬಳಸಿಕೊಳ್ಳಲಾಗುತ್ತಿದೆ. ಗೃಹಲಕ್ಷ್ಮೀ ಯೋಜನೆಯ ಅಡಿಯಲ್ಲಿ 1.30 ಕೋಟಿ ಅರ್ಜಿ ಸಲ್ಲಿಸುವ ನಿರೀಕ್ಷೆಯಿದ್ದು, ಅರ್ಜಿಗಳನ್ನು ಎರಡು ತಿಂಗಳೊಳಗೆ ಸ್ವೀಕರಿಸಿ ವಿಲೇವಾರಿ ಮಾಡಬೇಕಿದೆ. ಹಾಗಾಗಿ ಫಲಾನುಭವಿಗಳ ಮನೆ ಬಾಗಿಲಿಗೇ ತೆರಳಿ ಅರ್ಜಿ ಸ್ವೀಕರಿಸುವ ವ್ಯವಸ್ಥೆ ಮಾಡಲಾಗುತ್ತಿದೆ ಎಂದಿದ್ದಾರೆ ಎಂದಿದ್ದಾರೆ ಕೃ. ಬೈ. ಗೌಡರು.

ಕಂದಾಯ ಸಚಿವ ಕೃ. ಬೈ. ಗೌಡರ ಹೇಳಿಕೆಯಂತೆ ರಾಜ್ಯದಲ್ಲಿ ಇರುವ 898 ನಾಡ ಕಚೇರಿ, 7,000 ಮಿಕ್ಕಿದ ಸೇವಾ ಸಿಂಧು ಕಚೇರಿ, ಬಾಪೂಜಿ ಸೇವಾ ಕೇಂದ್ರ ಮತ್ತು ಬೆಂಗಳೂರು ಒನ್ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗುತ್ತದೆ. ಜೂನ್ 15 ರಿಂದ ಅರ್ಜಿ ಸ್ವೀಕರಿಸಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ. ಮನೆ ಬಾಗಿಲಿಗೆ ಸರ್ಕಾರ ಅರ್ಜಿ ತಲುಪಿಸಿದರೆ ಒಳ್ಳೆಯದೇ, ಹಲವು ಬಾರಿ ತಾಲೂಕು ಕೇಂದ್ರಗಳಿಗೆ ಜನ ಓಡಾಡೋದನ್ನು ತಪ್ಪಿಸಬಹುದು. ಒಟ್ಟಾರೆ ಸರ್ಕಾರದ ಈ ಕಡೆಯಿಂದ ಅರ್ಹ ಗೃಹ ಲಕ್ಷ್ಮಿಯರು ಖುಷ್ ಆಗಿದ್ದಾರೆ.

ಇದನ್ನೂ ಓದಿ:ಸಂಸತ್ ಭವನದಲ್ಲಿ ಮಗುವಿಗೆ ಮೊಲೆ ಹಾಲುಣಿಸಿದ ಮಹಿಳಾ ಸಂಸದೆ !

You may also like

Leave a Comment