School Holiday: ಬಿಸಿಲಿನ ತಾಪ ಹೆಚ್ಚು, ಒಂದು ಕಡೆ ಮುಂಗಾರು ಮಳೆ ವಿಳಂಬದ ಕಾರಣದಿಂದ ಇಂದು (ಜೂ.10) ಗೋವಾದಲ್ಲಿ (Goa) ಶಾಲೆಗಳಿಗೆ ರಜೆ ಘೋಷಣೆ(School Holiday) ಮಾಡಲಾಗಿದೆ. ರಜೆ ಘೋಷಣೆ ಮಾಡಿ ಶಿಕ್ಷಣ ನಿರ್ದೇಶನಾಲಯ (Directorate of Education) ಶುಕ್ರವಾರ ಸುತ್ತೋಲೆ ಮೂಲಕ ಹೇಳಿದೆ. ವಿಪರೀತ ಶಾಖ, ಮಳೆ ಇಲ್ಲದ ಕಾರಣ ಜೂನ್ 10 ರಂದು ಎಲ್ಲಾ ಸಂಸ್ಥೆಗಳಿಗೆ ರಜೆ ಸಾರಿ, ಸಕ್ಷಮ ಪ್ರಾಧಿಕಾರ ನಿರ್ಧಾರ ಮಾಡಿದೆ.
ಆದರೆ ಜೂನ್ 10ರಂದು ಪೂರಕ ಪರೀಕ್ಷೆ ಪೂರ್ವನಿಗದಿಯಂತೆ ನಡೆಯಲಿದೆ. ಈ ಬಗ್ಗೆ ಗೋವಾ ಬೋರ್ಡ್ ಆಫ್ ಸೆಕೆಂಡರಿ ಮತ್ತು ಹೈಯರಿ ಸೆಕೆಂಡರಿ ಎಜುಕೇಶನ್ ಹೇಳಿದ್ದು, ಅಷ್ಟು ಮಾತ್ರವಲ್ಲದೇ, ಎಲ್ಲಾ ಸರ್ಕಾರಿ ಮುಖ್ಯಸ್ಥರು, ಸರ್ಕಾರಿ ಅನುದಾನಿತ, ಪ್ರಾಥಮಿಕ, ಮಧ್ಯಮ, ಮಾಧ್ಯಮಿಕ, ಉನ್ನತ ಮಾಧ್ಯಮಿಕ ಮತ್ತು ವಿಶೇಷ ಭವಿಷ್ಯದಲ್ಲಿ ಯಾವುದೇ ಶೈಕ್ಷಣಿಕ ನಷ್ಟವನ್ನು ಸರಿದೂಗಿಸಲು ಶಾಲೆಗಳಿಗೆ ನಿರ್ದೇಶನ ನೀಡಲಾಗಿದೆ.
ಇದನ್ನೂ ಓದಿ: ಗೃಹ ಲಕ್ಷ್ಮಿಯರಿಗೆ ಸಕತ್ ಗುಡ್ ನ್ಯೂಸ್: ಮನೆ ಬಾಗಿಲಿಗೇ ಬರಲಿದೆ ಗ್ಯಾರಂಟಿ 2 ರ ಅರ್ಜಿ, ಕಂದಾಯ ಸಚಿವ ಕೃಷ್ಣ ಭೈರೇಗೌಡ ಘೋಷಣೆ !
