Home » Biparjoy: ಬಿಫೋರ್ ಜಾಯ್ ಚಂಡಮಾರುತ: 24 ಗಂಟೆಗಳಲ್ಲಿ ಮತ್ತಷ್ಟು ತೀವ್ರ, ಸಮುದ್ರದಲ್ಲಿ ಅಲ್ಲೋಲ ಕಲ್ಲೋಲ, ಭಾರೀ ಮಳೆ !

Biparjoy: ಬಿಫೋರ್ ಜಾಯ್ ಚಂಡಮಾರುತ: 24 ಗಂಟೆಗಳಲ್ಲಿ ಮತ್ತಷ್ಟು ತೀವ್ರ, ಸಮುದ್ರದಲ್ಲಿ ಅಲ್ಲೋಲ ಕಲ್ಲೋಲ, ಭಾರೀ ಮಳೆ !

0 comments
Biparjoy

Biparjoy: ‘ಬಿಪೊರ್‌ಜೋಯ್‌’ ಚಂಡಮಾರುತ ಮುಂದಿನ 24 ಗಂಟೆಗಳಲ್ಲಿ ಮತ್ತಷ್ಟು ತೀವ್ರಗೊಳ್ಳಲಿದ್ದು, ಉತ್ತರ-ಈಶಾನ್ಯಕ್ಕೆ ಚಲಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಶನಿವಾರ ತಿಳಿಸಿದೆ. ಬಿಪೊರ್‌ಜೋಯ್‌ ಅಂದರೆ ಶಬ್ದಾರ್ಥ ಖುಷಿ, ಚಂಡಮಾರುತ ಬರುವ ಮೊದಲು ಜನತೆ ಖುಷಿಯಲ್ಲಿದ್ದಾರೆ. ಕಾರಣ ಮುಂಗಾರು ಮಳೆಯ ಆಗಮನದಿಂದ ನೀರಿನ ಅಭಾವದಿಂದ ತತ್ತರಿಸಿದ ಜನರು ಮತ್ತು ರೈತಾಪಿ ವರ್ಗ ಖುಷಿಯಲ್ಲಿದ್ದಾರೆ. (ಭಾವಾರ್ಥ ವಿಪತ್ತು)

ಈಗ ಪ್ರಸ್ತುತ ಗೋವಾದಿಂದ ಪಶ್ಚಿಮಕ್ಕೆ 690 ಕಿಮೀ. ಗಳ ದೂರದಲ್ಲಿ ಈ ಮಾರುತವಿದೆ. ಮತ್ತು, ಮುಂಬೈನ ಪಶ್ಚಿಮ-ನೈಋತ್ಯಕ್ಕೆ 640 ಕಿಮೀ ಮತ್ತು ಪೋರಬಂದರ್‌ನಿಂದ ನೈಋತ್ಯಕ್ಕೆ 640 ಕಿಮೀ ದೂರದಲ್ಲಿ ಸುಳಿಯುತ್ತಿರುವ ಈ ಚಂಡಮಾರುತವು ಗಂಟೆಗೆ 145 ಕಿಲೋಮೀಟರ್ ವೇಗದಲ್ಲಿ ಬೀಸುತ್ತಿದೆ. ಹಾಗಾಗಿ ಮೂರು ರಾಜ್ಯಗಳಲ್ಲಿ ಭಾರೀ ಮಳೆಯ ಎಚ್ಚರಿಕೆ ನೀಡಲಾಗಿದೆ. ಈ ಚಂಡಮಾರುತವು ಕರ್ನಾಟಕ, ಗೋವಾ ಮತ್ತು ಮಹಾರಾಷ್ಟ್ರದ ಕರಾವಳಿ ಪ್ರದೇಶಗಳಲ್ಲಿ ಭಾರೀ ಮಳೆ ಉಂಟು ಮಾಡುವ ನಿರೀಕ್ಷೆ ಇದ್ದು, ಜತೆಗೆ ಪ್ರಬಲವಾದ ಗಾಳಿ ಕೂಡಾ ಬೀಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ಭಾರತೀಯ ಕಾಲಮಾನ ಜೂನ್ 9ರ ರಾತ್ರಿ 10.30 ಕ್ಕೆ, ಅನಾಡ್ರೆ ನಿನ್ನೆ ರಾತ್ರಿ ಚಂಡಮಾರುತ ‘ಬಿಪೊರ್ ಜಾಯ್’ (Biparjoy) ಪೂರ್ವ-ಮಧ್ಯ ಅರೇಬಿಯನ್ ಸಮುದ್ರದ ಮೇಲೆ ತುಂಬಾ ತೀವ್ರತೆಯಲ್ಲಿ ಬೀಸಿದ್ದು, ಅದು ಮುಂದಿನ 24 ಗಂಟೆಗಳಲ್ಲಿ ಮತ್ತಷ್ಟು ತೀವ್ರಗೊಳ್ಳುವ ಲಕ್ಷಣ ಇದೆ. ಬಿಫೋರ್ಜಾಯ್ ಉತ್ತರ-ಈಶಾನ್ಯಕ್ಕೆ ಚಲಿಸುವ ಸಾಧ್ಯತೆಯಿದೆ ಎಂದು ಹಾವಾಮಾನ ಇಲಾಖೆ ಟ್ವೀಟ್ ಮಾಡಿ ತಿಳಿಸಿದೆ. ಜತೆಗೆ ಕರಾವಳಿ ಗುಜರಾತ್, ಕೇರಳ, ಕರ್ನಾಟಕ ಮತ್ತು ಲಕ್ಷದ್ವೀಪ ಕರಾವಳಿಯಲ್ಲಿ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಹವಾಮಾನ ಇಲಾಖೆ ಸೂಚಿನೆ ನೀಡಿದೆ. ಈ ಸಂಬಂಧ ಕೇರಳದ ಎಂಟು ಜಿಲ್ಲೆಗಳಿಗೆ ಯಲ್ಲೋ ಅಲರ್ಟ್ ಘೋಷಿಸಲಾಗಿದೆ.

‘ಬಿಪೊರ್ ಜಾಯ್’ ಚಂಡಮಾರುತದ ಕಾರಣದಿಂದ, ಅರಬ್ಬಿ ಸಮುದ್ರದ ಕಕರಾವಳಿಯಲ್ಲಿ ಅಲೆಗಳ ಏರಿಳಿತ ವಿಪರೀತವಾಗಿದೆ. ಮಂಗಳೂರಿನ ಕಡಲ ಕಿನಾರೆಗಳಲ್ಲಿ ಪ್ರವಾಸ ಹೊರಟ ತಂಡದ ಮೇಲೆ ಅಬ್ಬರಿಸಿ ರಾಕ್ಷಸ ಅಲೆಗಳು ನುಗ್ಗಿ ಬಂದಿವೆ. 2- 3 ಮೀಟರ್ ಎತ್ತರಕ್ಕೆ ಅಲೆಗಳು ಎರಚಾಡುತ್ತಿವೆ. ಮುಂಜಾಗ್ರತಾ ಕ್ರಮವಾಗಿ ಹಲವು ಬೀಚುಗಳಲ್ಲಿ ಪೊಲೀಸರು ಕಾಣಿಸಿಕೊಂಡು ಪ್ರವಾಸಿಗರ ಮೇಲೆ ನಿಯಂತ್ರಣ ಸಾಧಿಸಿದ್ದಾರೆ.

ಈ ಮಧ್ಯೆ ಅರೇಬಿಯನ್ ಸಮುದ್ರ ಕರಾವಳಿಯಲ್ಲಿರುವ ಗುಜರಾತ್‌ನ ವಲ್ಸಾದ್‌ನಲ್ಲಿರುವ ಜನಪ್ರಿಯ ಪ್ರವಾಸಿ ತಾಣ ತಿಥಾಲ್ ಬೀಚ್ ನ್ನು ಜೂನ್ 14 ರ ತನಕ ಪ್ರವಾಸಿಗರಿಗೆ ಮುಚ್ಚಲಾಗಿದೆ. ದೇಶದಾದ್ಯಂತ SDRF (ರಾಜ್ಯ ವಿಪತ್ತು ನಿರ್ವಹಣಾ ಪಡೆ) ತಂಡಗಳನ್ನು ಸ್ಟ್ಯಾಂಡ್‌ಬೈ ಮೋಡ್‌ನಲ್ಲಿ ಇರಿಸಲಾಗಿದ್ದು, ಯಾವುದೇ ಸಂಭಾವ್ಯ ಅವಘಡಕ್ಕೆ ಪೂರ್ವ ತಯಾರಿ ಮಾಡಿಕೊಳ್ಳಲಾಗಿದೆ. ಜತೆಗೆ ಕರಾವಳಿಯ ಮತ್ತು ಪಕ್ಕದ ಗ್ರಾಮದ ಜನರಿಗೆ ಎಚ್ಚರಿಕೆ ನೀಡಲಾಗಿದೆ.

ಬಿಪೊರ್ ಜಾಯ್ ಹೆಸರು – ಇಟ್ಟದ್ದು ಯಾರು ? ಚಂಡಮಾರುತಕ್ಕೆ ಬಾಂಗ್ಲಾದೇಶವು ಬಿಪೊರ್ ಜಾಯ್ ಎಂದು ಹೆಸರಿಸಿದೆ. ಈ ಹೆಸರಿನ ಶಬ್ದಾರ್ಥ ಏನೇ ಇರಲಿ, ಅಲ್ಲಿನ ಅರ್ಥ ಬಂಗಾಳಿ ಭಾಷೆಯಲ್ಲಿ ವಿಪತ್ತು ಎಂದಂತೆ. ಅರಬ್ಬಿ ಸಮುದ್ರ ಮತ್ತು ಬಂಗಾಳ ಕೊಲ್ಲಿ ಸೇರಿದಂತೆ ಉತ್ತರ ಹಿಂದೂ ಮಹಾಸಾಗರದ ಮೇಲೆ ರೂಪುಗೊಳ್ಳುವ ಎಲ್ಲಾ ಉಷ್ಣವಲಯದ ಚಂಡಮಾರುತಗಳಿಗೆ ವಿಶ್ವ ಹವಾಮಾನ ಸಂಸ್ಥೆ (WMO) ಯು, ಇಸವಿ 2020 ರಲ್ಲಿ ಈ ಹೆಸರನ್ನು ನಾಮಕರಣ ಮಾಡಿದೆ. ಆಯಾ ಪ್ರದೇಶಗಳ ಮಾರುತಗಳನ್ನು ಆಯಾ ನಿರ್ಧಿಷ್ಟ ಹೆಸರುಗಳಿಂದ ಕರೆಯಲಾಗುತ್ತದೆ. ಮಾರುತಗಳಿಗೆ ಹೆಸರಿಡಲು ಸುತ್ತಮುತ್ತಲ ಪ್ರದೇಶದ ದೇಶಗಳಿಗೆ ಅವಕಾಶ ಕಲ್ಪಿಸಲಾಗುತ್ತದೆ. ಬಿಫೋರ್ ಜಾಯ್ ಹೆಸರನ್ನು ಬಾಂಗ್ಲಾದೇಶ ಇಟ್ಟಿದೆ.

 

ಇದನ್ನು ಓದಿ: Honeymoon: ಹನಿಮೂನ್ ಆಸೆಯಿಂದ ಇಂಡೋನೇಷ್ಯಾದ ಬಾಲಿಗೆ ಹೋದ ನವದಂಪತಿ ಸೆಳೆದಿತ್ತು ವಿಧಿ! 

You may also like

Leave a Comment