Home » CET Results: ಜೂ.15 ರಂದು ಸಿಇಟಿ ಫಲಿತಾಂಶ ಪ್ರಕಟ

CET Results: ಜೂ.15 ರಂದು ಸಿಇಟಿ ಫಲಿತಾಂಶ ಪ್ರಕಟ

by ಹೊಸಕನ್ನಡ
0 comments
CET results

CET Results: ಬೆಂಗಳೂರು, ಜೂ. 11: ಎಂಜಿನಿಯರಿಂಗ್ ಮತ್ತು ಸಬ್ ಮೆಡಿಕಲ್ ಮತ್ತಿತರ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಿದ common entrance test (CET) ಪರೀಕ್ಷಾ ಫಲಿತಾಂಶಕ್ಕೆ(CET Results) ದಿನಾಂಕ ನಿಗದಿಯಾಗಿದೆ. ಕಳೆದ ತಿಂಗಳು ನಡೆದಿದ್ದ ಸಿಇಟಿಯ ಫಲಿತಾಂಶವು ಜೂನ್ 15 ರಂದು ಪ್ರಕಟವಾಗಲಿದೆ. ಹಲವು ದಿನಗಳಿಂದ ಪರೀಕ್ಷ ಬರೆದು, ತಮ್ಮ ಭವಿಷ್ಯ ನಿರ್ಧರಿಸುವ ಮಕ್ಕಳು ಟೆನ್ಶನ್ ನಲ್ಲಿ ಕಾಯುತ್ತಿದ್ದು, ಆ ಮಕ್ಕಳಿಗೆ ರಿಲೀಫ್ ಕೊಡುವ ಸುದಿನ ಹತ್ತಿರದಲ್ಲಿದೆ.

ಈಗ ಸಿಇಟಿ ಪರೀಕ್ಷಾ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಪೂರ್ಣಗೊಂಡಿದೆ. ಫಲಿತಾಂಶ ಕ್ರೋಢೀಕರಿಸುವ ಕಾರ್ಯ ನಡೆದಿದೆ. ಪ್ರಸ್ತುತ ಸಿಇಟಿ ಫಲಿತಾಂಶ ಮತ್ತು ದ್ವಿತೀಯ ಪಿಯುಸಿ ಫಲಿತಾಂಶ ಎರಡನ್ನೂ ಆಧರಿಸಿ ರ್ಯಾಂಕ್ ಪಟ್ಟಿ ಸಿದ್ದಪಡಿಸುವ ಕಾರ್ಯ ಭರದಿಂದ ನಡೆಯುತ್ತಿದೆ.

CET ಪ್ರಾಧಿಕಾರವು ಫಲಿತಾಂಶವನ್ನು ಜೂನ್ 12 ಅಥವಾ 14 ರಂದು ಪ್ರಕಟಿಸಲು ಈ ಮೊದಲು ನಿರ್ಧರಿಸಿತ್ತು. ಆದರೆ ಉನ್ನತ ಶಿಕ್ಷಣ ಸಚಿವರ ಅಲಭ್ಯತೆ ಮತ್ತು ಕೆಲವು ತಾಂತ್ರಿಕ ಕಾರಣಗಳಿಂದ ಜೂನ್ 15 ರಂದು ಪ್ರಕಟಿಸಲು ನಿರ್ಧರಿಸಿದೆ ಎನ್ನುವ ಮಾಹಿತಿ. ತಿಳಿದುಬಂದಿದೆ.

ಇದನ್ನೂ ಓದಿ: Gold-Silver Price today: ಚಿನ್ನದ ಬೆಲೆಯಲ್ಲಿ ಇಂದು ತಟಸ್ಥತೆ! ಬೆಳ್ಳಿ ದರ ಎಷ್ಟು?

You may also like

Leave a Comment