Home » RBI Recruitment 2023: ಆರ್’ಬಿಐನಲ್ಲಿ ವಿವಿಧ ಹುದ್ದೆಗೆ ಅರ್ಜಿ ಆಹ್ವಾನ, ಡೀಟೇಲ್ಸ್ ಗಮನಿಸಿ !

RBI Recruitment 2023: ಆರ್’ಬಿಐನಲ್ಲಿ ವಿವಿಧ ಹುದ್ದೆಗೆ ಅರ್ಜಿ ಆಹ್ವಾನ, ಡೀಟೇಲ್ಸ್ ಗಮನಿಸಿ !

0 comments
RBI Recruitment 2023

RBI Recruitment 2023: ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗ ಬಯಸುವವರಿಗೆ ಸಿಹಿಸುದ್ದಿ ಇಲ್ಲಿದೆ. ಭಾರತೀಯ ರಿಸರ್ವ್ ಬ್ಯಾಂಕ್ (Reserve Bank of India) (RBI) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ (RBI Recruitment 2023).‌ ಆಸಕ್ತ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಹುದ್ದೆಯ ಬಗೆಗಿನ ಹೆಚ್ಚಿನ ಮಾಹಿತಿ ಈ ಕೆಳಗಿನಂತಿದೆ.

ಹುದ್ದೆಯ ವಿವರ:-
ಜೂನಿಯರ್ ಇಂಜಿನಿಯರ್ (ಸಿವಿಲ್) – 29
ಜೂನಿಯರ್ ಇಂಜಿನಿಯರ್‌ (ಎಲೆಕ್ಟ್ರಿಕಲ್)- 6

ಪ್ರಮುಖ ದಿನಾಂಕಗಳು:
ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಆರಂಭ ದಿನಾಂಕ: 09/06/2023
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 30/06/2023
ಆನ್‌ಲೈನ್ ಪರೀಕ್ಷೆಯ ತಾತ್ಕಾಲಿಕ ದಿನಾಂಕ: 15/07/2023

ವಯೋಮಿತಿ: ಕನಿಷ್ಟ 20 ಹಾಗೂ ಗರಿಷ್ಟ 30 ವರ್ಷ.

ವಿದ್ಯಾರ್ಹತೆ:
• ಜೂನಿಯರ್ ಇಂಜಿನಿಯರ್ ಸಿವಿಲ್ ಹುದ್ದೆಗೆ ಸಿವಿಲ್ ಇಂಜಿನಿಯರಿಂಗ್‌ನಲ್ಲಿ ಕನಿಷ್ಠ ಮೂರು ವರ್ಷದ ಡಿಪ್ಲೋಮಾವನ್ನು ಪೂರ್ಣಗೊಳಿಸಿರಬೇಕು.
• ಜೂನಿಯರ್ ಇಂಜಿನಿಯರ್ ಎಲೆಕ್ಟ್ರಿಕಲ್‌ ಹುದ್ದೆಗೆ ಅಭ್ಯರ್ಥಿಗಳು ಕನಿಷ್ಠ 2 ವರ್ಷಗಳ ಡಿಪ್ಲೋಮಾ ಅಥವಾ ಪದವಿ ಪೂರ್ಣಗೊಳಿಸರಬೇಕು.

ಕಾರ್ಯಾನುಭವ:
• ಎಲೆಕ್ಟ್ರಿಕಲ್‌ ನವರು ಎಚ್‌ಟಿ, ಎಲ್‌ಟಿ ಸಬ್‌ಸ್ಟೇಷನ್‌ಗಳು, ಸೆಂಟ್ರಲ್ ಎಸಿ ಪ್ಲಾಂಟ್‌ಗಳನ್ನು ಹೊಂದಿರುವ ದೊಡ್ಡ ಕಟ್ಟಗಳು ಅಥವಾ ವಾಣಿಜ್ಯ ಕಟ್ಟಡಗಳಲ್ಲಿ ಎಲೆಕ್ಟ್ರಿಕಲ್ ಸ್ಥಾಪನೆಗಳ ನಿರ್ವಹಣೆ ಹಾಗೂ ಮೇಲ್ವಿಚಾರಣೆಯಲ್ಲಿ ಕನಿಷ್ಠ 1 ವರ್ಷದ ಅನುಭವ ಹೊಂದಿರಬೇಕು.
• ಲಿಫ್ಟ್‌ಗಳು, ಯುಪಿಎಸ್, ಡಿಜಿ ಸೆಟ್‌ಗಳು, ಸಿಸಿಟಿವಿ, ಫೈರ್ ಅಲಾರ್ಮ್ ಸಿಸ್ಟಮ್,ಅಥವಾ ಪಿಎಸ್‌ಯುನಲ್ಲಿ 1 ವರ್ಷದ ಪದವೀಧರ ಅಪ್ರೆಂಟಿಸ್‌ಶಿಫ್ ತರಬೇತಿ ಪಡೆದಿರಬೇಕು.

ಅರ್ಜಿ ಸಲ್ಲಿಕೆ: ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ opportunities.rbi.org.in. ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದು.

ಇದನ್ನೂ ಓದಿ: ಜೊತೆಯಾಗಿ ಶವರ್ ಸ್ನಾನ ಮಾಡಿದ ಯುವಕ ಯುವತಿ, ಬಾತ್ ರೂಮಿನಲ್ಲೇ ಕಾದಿತ್ತು ಸಾವು !

You may also like

Leave a Comment