RBI Quiz competition : ಸರಕಾರಿ ಪ್ರೌಢ ಶಾಲೆಗಳಲ್ಲಿ ಕಲಿಯುವಂತಹ ವಿದ್ಯಾರ್ಥಿಗಳಿಗೆ ಸಮಗ್ರ ಶಾಲಾ ಶಿಕ್ಷಣ ಇಲಾಖೆ ಕರ್ನಾಟಕ ಸರಕಾರ ಸುತ್ತೋಲೆಯನ್ನು ಹೊರಡಿಸಿದೆ. ಅದೇನೆಂದರೆ ವಿದ್ಯಾರ್ಥಿಗಳಿಗೆ ರಸಪ್ರಶ್ನೆ ಸ್ಪರ್ಧೆಯನ್ನು (RBI Quiz competition) ಹಮ್ಮಿಕೊಂಡಿದೆ. ಇದರಲ್ಲಿ ವಿದ್ಯಾರ್ಥಿಗಳು ಭಾಗವಹಿಸಬಹುದು. ಶಾಲಾ ಮಕ್ಕಳಲ್ಲಿ ಆರ್ಥಿಕ ಸಾಕ್ಷರತೆಯನ್ನು ಹೆಚ್ಚಿಸುವ ಸಲುವಾಗಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ರಾಜ್ಯದ ಎಲ್ಲಾ ಸರಕಾರಿ ಪ್ರೌಢಶಾಲೆಗಳಲ್ಲಿ ಕಲಿಯುವ ವಿದ್ಯಾರ್ಥಿಗಳಿಗೆ ಈ ರಸಪ್ರಶ್ನೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.
ಸರ್ಕಾರಿ/ಕಾರ್ಪೋರೇಷನ್/ ನಗರ ಸ್ಥಳೀಯ ಸಂಸ್ಥೆಗಳು/ ಸಮಾಜ ಕಲ್ಯಾಣ ಇಲಾಖೆ ಹಾಗೂ ಬುಡಕಟ್ಟು ಕಲ್ಯಾಣ ಇಲಾಖೆ / ಕರ್ನಾಟಕ ವಸತಿ ಶಾಲೆಗಳಲ್ಲಿ ಅಭ್ಯಾಸ ಮಾಡುತ್ತಿರುವ 8 ರಿಂದ 10ನೇ ತರಗತಿಯ ವಿದ್ಯಾರ್ಥಿಗಳು ಈ ರಸಪ್ರಶ್ನೆ ಯಲ್ಲಿ ಭಾಗವಹಿಸಬಹುದು. ಈ ಪ್ರತಿ ಹಂತದಲ್ಲಿ ಭಾಗವಹಿಸಿ, ಪ್ರಥಮ ಸ್ಥಾನ ಪಡೆದ ತಂಡ ಮುಂದಿನ ಹಂತದ ಸ್ಪರ್ಧೆಯಲ್ಲಿ ಭಾಗವಹಿಸಬಹುದು. ಪ್ರಮಾಣ ಪತ್ರವನ್ನು ಭಾಗವಹಿಸಿದ ಪ್ರತಿಯೊಬ್ಬ ವಿದ್ಯಾರ್ಥಿಗಳಿಗೆ, ಹಾಗೆನೇ ಪ್ರಮಾಣ ಪತ್ರ ಜೊತೆಗೆ ನಗದು ಬಹುಮಾನ ಕೂಡಾ ಕೊಡಲಾಗುತ್ತದೆ.
ಶಾಲಾ ಹಂತದಲ್ಲಿ ರಸಪ್ರಶ್ನೆ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾದ ಇಬ್ಬರು ವಿದ್ಯಾರ್ಥಿಗಳ ವಿವರಗಳನ್ನು ಆನ್‌ಲೈನ್ ಮೂಲಕ ವಿದ್ಯಾರ್ಥಿಗಳ ಸ್ಯಾಟ್ಸ್ ಐಡಿ, ಮೊಬೈಲ್ ಸಂಖ್ಯೆ, ಭಾವಚಿತ್ರದೊಂದಿಗೆ ವಿದ್ಯಾವಾಹಿನಿ ಪೋರ್ಟಲ್ www.vidyavahini.karnataka.gov.in ಅಥವಾ http://164.100.133.7 ನಲ್ಲಿ ದಿನಾಂಕ 19-06-2023ರೊಳಗೆ ನೋಂದಣಿ ಮಾಡಬೇಕು.
ಪ್ರಶಸ್ತಿಗಳ ವಿವರ
ಪ್ರಥಮ ಬಹುಮಾನ – ಬ್ಲಾಕ್ ಹಂತ ರೂ. 5000/-, ಜಿಲ್ಲಾ ಹಂತ – ರೂ. 10,000/-, ರಾಜ್ಯ ಹಂತ ರೂ. 20,000/-.
ದ್ವಿತೀಯ ಬಹುಮಾನ – ಬ್ಲಾಕ್ ಹಂತ ರೂ. 4000/-, ಜಿಲ್ಲಾ ಹಂತ – ರೂ. 7500/-, ರಾಜ್ಯ ಹಂತ ರೂ. 15,000/-.
ತೃತೀಯ ಬಹುಮಾನ – ಬ್ಲಾಕ್ ಹಂತ ರೂ. 3000/-, ಜಿಲ್ಲಾ ಹಂತ – ರೂ. 5,000/-, ರಾಜ್ಯ ಹಂತ ರೂ. 10,000/-.
ವೇಳಾಪಟ್ಟಿ;
02-06-2023 ರಿಂದ 19-06-2023 -ಶಾಲಾ ಮಟ್ಟದಲ್ಲಿ
20-06-2023 ರಿಂದ 23-06-2023 -ತಾಲೂಕು ಮಟ್ಟದ ಸ್ಪರ್ಧೆ
27-06-2023- ಪೂರ್ವ ಜಿಲ್ಲಾ ಮಟ್ಟದ ಸ್ಪರ್ಧೆ
27-06-2023 -ಜಿಲ್ಲಾ ಮಟ್ಟದ ಸ್ಪರ್ಧೆ
01-07-2023-ಪೂರ್ವ ರಾಜ್ಯ ಮಟ್ಟದ ಸ್ಫರ್ಧೆ
05-07-2023 – ರಾಜ್ಯ ಮಟ್ಟದ ಸ್ಪರ್ಧೆ
ರಾಷ್ಟ್ರ ಮಟ್ಟದ ಸ್ಫರ್ಧೆ – ಆಮೇಲೆ ತಿಳಿಸಲಾಗುವುದು.
ಹೆಚ್ಚಿನ ಮಾಹಿತಿಗಾಗಿ https://www.schooleducation.kar.nic.in/ ಶಾಲಾ ಶಿಕ್ಷಣ ಇಲಾಖೆ ಅಧಿಕೃತ ವೆಬ್‌ಸೈಟ್ ಗೆ ಭೇಟಿ ನೀಡಬಹುದು.
ಇದನ್ನೂ ಓದಿ:ಬಿರಿಯಾನಿ ಎಲೆಯ ಉಪಯೋಗಗಳೇನು ಗೊತ್ತಾ? ಇದ್ರಲ್ಲಿದೆ ಐದು ಸಮಸ್ಯೆಗಳಿಗೆ ಪರಿಹಾರ
