Home » Electricity Rate Hike: ರಾಜ್ಯದ ಜನತೆಗೆ ಖುಷಿಯ ಸುದ್ದಿ; ಇನ್ನೆರಡು ತಿಂಗಳಲ್ಲಿ ವಿದ್ಯುತ್ ದರ ಇಳಿಕೆ !

Electricity Rate Hike: ರಾಜ್ಯದ ಜನತೆಗೆ ಖುಷಿಯ ಸುದ್ದಿ; ಇನ್ನೆರಡು ತಿಂಗಳಲ್ಲಿ ವಿದ್ಯುತ್ ದರ ಇಳಿಕೆ !

0 comments
Electricity Rate Hike

Electricity Rate Hike: ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ವಿದ್ಯುತ್ ದರ ಏರಿಕೆಯಾಗಿತ್ತು. ವಿದ್ಯುತ್ ದರ ಏರಿಕೆ (Electricity Rate Hike) ಮಾಡಿದ ಹಿನ್ನೆಲೆ ರಾಜ್ಯದ ಜನತೆ ರೊಚ್ಚಿಗೆದ್ದರು. ಜನಸಾಮಾನ್ಯರು ಸಿಟ್ಟಿಗೆದ್ದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಬಳಿಕ ಕಾಂಗ್ರೆಸ್-ಬಿಜೆಪಿ ನಾಯಕರು ನಾವು ವಿದ್ಯುತ್ ದರ ಏರಿಸಿಲ್ಲ ಎಂಬ ಚರ್ಚೆಗೆ ಇಳಿದಿದ್ದರು. ಇದೀಗ ಈ ಎಲ್ಲದರ ಮಧ್ಯೆ ರಾಜ್ಯದ ಜನತೆಗೆ ನೆಮ್ಮದಿಯ ಸುದ್ದಿ ಸಿಕ್ಕಿದೆ. ಶೀಘ್ರದಲ್ಲೇ ‘ವಿದ್ಯುತ್ ದರ’ ಇಳಿಕೆಯಾಗುವ ಸಾಧ್ಯತೆ ಇದೆ.

ವಿದ್ಯುತ್ ದರ ಹೆಚ್ಚಳ (Electricity Price) ವಿರೋಧಿಸಿ ಬೆಳಗಾವಿ ಕೈಗಾರಿಕೋದ್ಯಮಿಗಳು ಪ್ರತಿಭಟನೆ ನಡೆಸಿದ್ದು, ಈ ಹಿನ್ನೆಲೆ ಬೆಳಗಾವಿಯ ಫೌಂಡರಿ ಕ್ಲಸ್ಟರ್ ಸಭಾಂಗಣದಲ್ಲಿ ಹೆಸ್ಕಾಂ ಎಂಡಿ ಮೊಹಮ್ಮದ್ ರೋಷನ್ ಕೈಗಾರಿಕೋದ್ಯಮಿಗಳ ಜೊತೆಗೆ ಸಭೆ ನಡೆಸಿದರು. ಸಭೆಯಲ್ಲಿ ಮಾತನಾಡಿದ ಎಂಡಿ ಇನ್ನೆರಡು ತಿಂಗಳಲ್ಲಿ ವಿದ್ಯುತ್‌ ದರ ಕಡಿಮೆಯಾಗುತ್ತದೆ ಎಂದು ಭರವಸೆ ನೀಡಿದರು.

ಅಲ್ಲದೆ, ಈ ವೇಳೆ ದಕ್ಷಿಣ ಭಾರತದ ರಾಜ್ಯಗಳಿಗೆ ಹೋಲಿಸಿದರೆ, ರಾಜ್ಯದಲ್ಲಿ ವಿದ್ಯುತ್‌ ದರ ಕಡಿಮೆ ಇದೆ. ಕರ್ನಾಟಕ (Karnataka) ರಾಜ್ಯಕ್ಕಿಂತ ಮಹಾರಾಷ್ಟ್ರದಲ್ಲಿ ಹೆಚ್ಚಿನ ವಿದ್ಯುತ್ ದರ ಇದೆ ಎಂದು ಹೇಳಿದರು. ಸದ್ಯ ಉಚಿತ ವಿದ್ಯುತ್ ಬೆನ್ನಲ್ಲೆ ರಾಜ್ಯದ ಜನತೆಗೆ ಸರ್ಕಾರ ವಿದ್ಯುತ್ ದರ ಏರಿಸಿ ಶಾಕ್ ನೀಡಿತ್ತು. ಇದೀಗ ದರ ಇಳಿಕೆಯಾಗುವ ಸಾಧ್ಯತೆ ಇದೆ.

ಇದನ್ನೂ ಓದಿ: Adipurush Movie: ಆದಿಪುರುಷ್ ಸಿನಿಮಾ ಬಗ್ಗೆ ಜ್ಯೋತಿಷಿ ಶಾಕಿಂಗ್ ಭವಿಷ್ಯ ; ಪ್ರಭಾಸ್ ಮದುವೆ ಬಗ್ಗೆ ಏನಂದ್ರು ಗೊತ್ತಾ?

You may also like

Leave a Comment