Transport corporation new rules: ಹಾವೇರಿ: ಚಲಿಸುತ್ತಿದ್ದ ಸಾರಿಗೆ ಬಸ್‍ನಿಂದ ಬಾಲಕಿ ಬಿದ್ದು ಮೃತಪಟ್ಟ ಘಟನೆ ಬೆನ್ನಲ್ಲೆ ಸಾರಿಗೆ ಇಲಾಖೆ ಎಚ್ಚೆತ್ತುಕೊಂಡಿದ್ದು, ಹೊಸ ರೂಲ್ಸ್ (Transport corporation new rules) ಜಾರಿಗೆ ತರಲಾಗಿದೆ ಎಂದು ವರದಿಯಾಗಿದೆ. ಹಾಗಿದ್ರೆ ಏನೆಲ್ಲ ಹೊಸ ನಿಯಮಗಳು ಅನ್ವಯಿಸುತ್ತದೆ ಎಂಬುದು ಈ ಕೆಳಗಿದೆ.
ಸಾರಿಗೆ ಇಲಾಖೆ ಹೊಸ ರೂಲ್ಸ್ :
1. ಸಾರಿಗೆ ಬಸ್ಸಿನ ಬಾಗಿಲು ಮುಚ್ಚಿದ್ಯಾ ಅನ್ನೋದನ್ನು ಕಡ್ಡಾಯವಾಗಿ ಖಚಿತಪಡಿಸಿಕೊಳ್ಳಬೇಕು.
2.ನಿರ್ವಾಹಕರ ಸೂಚನೆ ನಂತ್ರವೇ ಬಸ್ ಚಾಲಕರು ಚಾಲನೆ ಮಾಡಬೇಕು.
3.ಪ್ರಯಾಣಿಕರು ಯಾವುದೇ ಕಾರಣಕ್ಕೂ ಫುಟ್ ಬೋರ್ಡ್‍ನಲ್ಲಿ ನಿಲ್ಲುವಂತಿಲ್ಲ.
4. ಬಸ್ ನಿಲ್ದಾಣ ತಲುಪುವ ಮುನ್ನ ಬಾಗಿಲುಗಳನ್ನು ತೆರೆಯುವಂತಿಲ್ಲ.

ಹಾವೇರಿಯಲ್ಲಿ 14 ವರ್ಷದ ಮಧು ಕುಂಬಾರ ಎಂಬ ಬಾಲಕಿ ಬಸ್ಸಿನಿಂದ ಬಿದ್ದು ಮೃತಪಟ್ಟ ಘಟನೆ ಬೆನ್ನಲ್ಲೆ ಸಾರಿಗೆ ಇಲಾಖೆ ಎಚ್ಚೆತ್ತುಕೊಂಡಿದ್ದು, ಹೊಸ ರೂಲ್ಸ್ ಮೂಲಕ ಚಾಲಕ ಮತ್ತು ನಿರ್ವಾಹಕರಿಗೆ ಖಡಕ್ ವಾರ್ನಿಂಗ್ ನೀಡಲಾಗಿದೆ.
ಇದನ್ನೂ ಓದಿ: Gold-Silver Price today: ನಿನ್ನೆಯ ದರ ಕಾಯ್ದುಕೊಂಡ ಚಿನ್ನ!
