Gruha jyothi Scheme: ಪಂಚ ಗ್ಯಾರಂಟಿಗಳ ಪೈಕಿ ಒಂದು ಗ್ಯಾರಂಟಿ (ಶಕ್ತಿ ಯೋಜನೆ) ಈಗಾಗಲೇ ಜಾರಿಯಾಗಿದೆ. ಇದೀಗ ಗಾರಂಟಿಗಳಲ್ಲಿ ಒಂದಾದ ಉಚಿತ ವಿದ್ಯುತ್ ಯೋಜನೆ ಬಗ್ಗೆ ಮಹತ್ವದ ಮಾಹಿತಿ ಇಲ್ಲಿದೆ. ರಾಜ್ಯಾದ್ಯಂತ ಬಾಡಿಗೆದಾರರಿಗೆ ಸೇರಿದಂತೆ ಎಲ್ಲರಿಗೂ 200 ಯೂನಿಟ್ ತನಕ ಗರಿಷ್ಠ ವಿದ್ಯುತ್ ಫ್ರೀ ಘೋಷಿಸಲಾಗಿದೆ. ಗೃಹಜೋತಿ ಉಚಿತ ವಿದ್ಯುತ್ ಜುಲೈ ತಿಂಗಳಿನಿಂದಲೇ ಆರಂಭವಾಗಲಿದೆ. ಈ ಯೋಜನೆಗೆ (Gruha jyothi Scheme) ನಾಳೆಯಿಂದ (ಜೂನ್ 15) ಅರ್ಜಿ ಸಲ್ಲಿಸಬಹುದು ಎಂದು ಹೇಳಲಾಗಿತ್ತು. ಆದರೆ ಇದೀಗ ಅರ್ಜಿ ಸಲ್ಲಿಕೆ ಪ್ರಕ್ರಿಯೆಯನ್ನು ಜೂನ್ 18ಕ್ಕೆ ಮುಂದೂಡಲಾಗಿದೆ.
ತಾಂತ್ರಿಕ ದೋಷದ ಹಿನ್ನೆಲೆ ಜೂನ್ 18 ಕ್ಕೆ ಗೃಹಜ್ಯೋತಿ ಅರ್ಜಿ ಸಲ್ಲಿಕೆ ಪ್ರಕ್ರಿಯೆಯನ್ನು ಮುಂದೂಡಲಾಗಿದೆ. ಜೂನ್ 18 ರಿಂದ ರಾಜ್ಯದ ಜನರು ಗ್ರಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಸೇವಾಸಿಂಧು ಪೋರ್ಟಲ್ ನಲ್ಲಿ, ಬೆಂಗಳೂರು ಒನ್, ಕರ್ನಾಟಕ ಒನ್, ಗ್ರಾಮ ಒನ್ ಸೆಂಟರ್ ನಲ್ಲಿ ಗೃಹ ಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಬಹುದು. ಅಲ್ಲದೆ, ಕಂಪ್ಯೂಟರ್, ಮೊಬೈಲ್ ನಿಂದ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಡಲಾಗುವುದು ಇಂಧನ ಸಚಿವರು ತಿಳಿಸಿದ್ದಾರೆ.
ಬಾಡಿಗೆದಾರರು ಅರ್ಜಿ ಸಲ್ಲಿಸಲು ಕೆಲವು ದಾಖಲೆಗಳನ್ನು ನೀಡಬೇಕು. ಬಾಡಿಗೆ ಮನೆಯಲ್ಲಿದ್ದು ಎಷ್ಟು ವರ್ಷವಾಯಿತು ಎಂಬುದರ ದಾಖಲೆ. ಮನೆ ಮಾಲೀಕ ಆಸ್ತಿ ತೆರಿಗೆ ಕಟ್ಟಿರಬೇಕು. ಎಷ್ಟು ಬಾಡಿಗೆ ಮನೆಗಳಿವೆ ಎಂದು ಘೋಷಣೆ ಮಾಡಿರಬೇಕು. ಬಾಡಿಗೆದಾರರು ವಿದ್ಯುತ್ ಬಿಲ್ ಮತ್ತು ಬಾಡಿಗೆ ಕರಾರು ಪತ್ರವನ್ನು ಅರ್ಜಿಯ ಜೊತೆಗೆ ನೀಡಬೇಕು. ಇವೆಲ್ಲಾ ದಾಖಲೆಗಳಿದ್ದರೆ, ಬಾಡಿಗೆದಾರರು ವಿದ್ಯುತ್ ಬಿಲ್ ನಲ್ಲಿ ನಮೂದಿಸಲಾಗಿರುವ ಗ್ರಾಹಕರ ಸಂಖ್ಯೆ, ಖಾತೆ ಸಂಖ್ಯೆ, ಬಾಡಿಗೆ, ಭೋಗ್ಯದ ಕರಾರು ಪತ್ರ ಸಲ್ಲಿಸಿ. ಸಂಬಂಧಿತ ವಿಳಾಸವನ್ನು ಸೂಚಿಸುವ ವೋಟರ್ ಐಡಿ ಜೊತೆಗೆ, ಆಧಾರ್ ಅನ್ನು ಸಲ್ಲಿಸುವ ಮೂಲಕ ಗೃಹಜ್ಯೋತಿ ಯೋಜನೆಯ ಸೌಲಭ್ಯ ಪಡೆಯಬಹುದು.
ಇದನ್ನೂ ಓದಿ: Electricity Rate Hike: ರಾಜ್ಯದ ಜನತೆಗೆ ಖುಷಿಯ ಸುದ್ದಿ; ಇನ್ನೆರಡು ತಿಂಗಳಲ್ಲಿ ವಿದ್ಯುತ್ ದರ ಇಳಿಕೆ !
