Human Sacrifice: ಮೌಢ್ಯತೆಯ ಬಗ್ಗೆ ಬಹುತೇಕರು ಹೆಚ್ಚಿನ ತಿಳುವಳಿಕೆ ಹೊಂದಿದ್ದರೂ ಸಹ, ಕೆಲವರು ಮೌಢ್ಯತೆಗೆ ಒಳಗಾಗುತ್ತಾರೆ. ಅದೇ ರೀತಿ ಉತ್ತರ ಪ್ರದೇಶದಲ್ಲಿ ಮಲತಾಯಿಯೊಬ್ಬರು ತನ್ನ ಸ್ವಾರ್ಥಕ್ಕಾಗಿ ನಾಲ್ಕು ವರ್ಷದ ಮಗನನ್ನೇ ನರಬಲಿ (Human Sacrifice) ಕೊಟ್ಟಿದ್ದಾರೆ.
ಉತ್ತರ ಪ್ರದೇಶದ ಅಮೇಥಿಯಲ್ಲಿ ರೇಶಿ ಗ್ರಾಮದ ನಿವಾಸಿಯಾದ ಜಿತೇಂದ್ರ ಪ್ರಜಾಪತಿಯ ಪತ್ನಿಯು ಮನೆಬಿಟ್ಟು ಹೋದ ಕಾರಣ ಒಂದೂವರೆ ವರ್ಷದ ಹಿಂದೆ ರೇಣು ಪ್ರಜಾಪತಿಯನ್ನು ಮದುವೆಯಾಗಿದ್ದರು. ರೇಣು ಪ್ರಜಾಪತಿಯು ಗರ್ಭ ಧರಿಸಿದರೂ ಹೆಚ್ಚಾಗಿ ಗರ್ಭಪಾತವಾಗುತ್ತಿತ್ತು. ಇದರಿಂದ ಬೇಸತ್ತ ಆಕೆ ಮಾಂತ್ರಿಕನ ಮೊರೆಹೋಗಿದ್ದರು. ನಂತರ ಮಾಂತ್ರಿಕನ ಜತೆಗೂಡಿ ನಾಲ್ಕು ವರ್ಷದ ಬಾಲಕನನ್ನು ನರಬಲಿ ಕೊಟ್ಟಿದ್ದಾರೆ ಮಾಹಿತಿ ಹೊರಬಿದ್ದಿದೆ.
ಇದೀಗ ನೀವು ಗರ್ಭ ಧರಿಸಲು ನಿಮ್ಮ ಮಲಮಗನನ್ನು ಬಲಿ ಕೊಡಬೇಕು ಎಂದು ಮಾಂತ್ರಿಕ ಹೇಳಿದ ಕಾರಣ, ಮಹಿಳೆ ಹಾಗೂ ಮಾಂತ್ರಿಕ ಸೇರಿ ಬಾಲಕನನ್ನು ಹತ್ಯೆ ಮಾಡಿರಬಹುದು ಎಂದು ಶಂಕಿಸಲಾಗಿದೆ.
ಸದ್ಯ ನಾಲ್ಕು ವರ್ಷದ ಬಾಲಕ ಸತ್ಯೇಂದ್ರನ ಶವ ಕೆರೆಯಲ್ಲಿ ಪತ್ತೆಯಾಗಿದ್ದು, ಆತನ ಕಿವಿ, ಕಣ್ಣು, ಎದೆ ಸೇರಿ ದೇಹದ ಹಲವು ಭಾಗದಲ್ಲಿ ಗಾಯಗಳಾಗಿವೆ. ಮಲತಾಯಿಯೇ ಈತನನ್ನು ಕೊಂದಿರುವ ಶಂಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಮಲತಾಯಿ ರೇಣು ಪ್ರಜಾಪತಿ (30) ಹಾಗೂ ದುರುಳ ಮಾಂತ್ರಿಕನನ್ನು ಪೊಲೀಸರು ಬಂಧಿಸಿದ್ದಾರೆ.
ಇನ್ನು ಈ ಪ್ರಕರಣ ಕುರಿತಂತೆ ರೇಣು ಪ್ರಜಾಪತಿಯ ಹಲವು ಸಂಬಂಧಿಕರ ವಿರುದ್ಧವೂ ಪ್ರಕರಣ ದಾಖಲಾಗಿದ್ದು, ವಿಚಾರಣೆ ನಂತರ ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ.
ಇದನ್ನೂ ಓದಿ: ಬಿಪೊರ್ ಜಾಯ್ ಚಂಡಮಾರುತ ಪ್ರಭಾವ; ಕರಾವಳಿಯಲ್ಲಿ ಜೂ.19 ರವರೆಗೆ ಹೈ ಅಲರ್ಟ್!!!
