Home » KCET 2023 Results: ಕರ್ನಾಟಕ ‘CET’ ಫಲಿತಾಂಶ ಪ್ರಕಟ ; ರಿಸಲ್ಟ್ ಈ ರೀತಿ ಚೆಕ್ ಮಾಡಿ !

KCET 2023 Results: ಕರ್ನಾಟಕ ‘CET’ ಫಲಿತಾಂಶ ಪ್ರಕಟ ; ರಿಸಲ್ಟ್ ಈ ರೀತಿ ಚೆಕ್ ಮಾಡಿ !

0 comments
KCET 2023 Results

KCET 2023 Results : ಇಂದು (ಜೂ. 15) ಬೆಳಿಗ್ಗೆ 9:30 ಕ್ಕೆ 2023 ನೇ ಸಾಲಿನ ಕೆಸಿಇಟಿ ಫಲಿತಾಂಶವು (KCET 2023 Results) ಪ್ರಕಟವಾಗಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಕೆಸಿಇಟಿ -2023 (ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ) ಅಥವಾ ಯುಜಿಸಿಇಟಿ (UGCET) ಫಲಿತಾಂಶವನ್ನು ಜೂನ್(June) 15 ರಂದು ಬೆಳಿಗ್ಗೆ 9.30 ಕ್ಕೆ ಬಿಡುಗಡೆ ಮಾಡಿದೆ.

ಅಂದಹಾಗೆ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ್ ಅವರು ಸಿಇಟಿ-2023ರ ಬಹು ನಿರೀಕ್ಷಿತ ಫಲಿತಾಂಶಗಳನ್ನು ಬೆಂಗಳೂರಿನ ಮಲ್ಲೇಶ್ವರಂನ 18ನೇ ಕ್ರಾಸ್‌ನಲ್ಲಿರುವ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (ಕೆಇಎ) ಆವರಣದಲ್ಲಿ ಪ್ರಕಟಿಸಿದ್ದಾರೆ. ಈ ಬಾರಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ಇಂಜಿನಿಯರಿಂಗ್ ವಿಭಾಗದಲ್ಲಿ ವಿಘ್ನೇಶ್ ಪ್ರಥಮ ಸ್ಥಾನ ಪಡೆದಿದ್ದು, ದ್ವಿತೀಯ ಸ್ಥಾನವನ್ನು ಅರ್ಜುನ್ ಕೃಷ್ಣಸ್ವಾಮಿ ಪಡೆದಿದ್ದಾರೆ , ಸಮೃದ್ಧ್ ಶೆಟ್ಟಿ 3 ನೇ ಸ್ಥಾನ, ಎಸ್. ಸುಮೇಧ್ ಗೆ 4 ನೇ ಸ್ಥಾನ ಹಾಗೂ 5 ನೇ ಸ್ಥಾನ ಮಾಧವ ಸೂರ್ಯ ಪಡೆದಿದ್ದಾರೆ.

ಫಲಿತಾಂಶ ಪರಿಶೀಲನೆ ಹೇಗೆ?

KCET ಸ್ಕೋರ್ ಕಾರ್ಡ್ ಅನ್ನು ಅಧಿಕೃತ ವೆಬ್‌ಸೈಟ್‌ಗಳಾದ kea.kar.nic.in, cetonline.karnataka.gov.in ಮತ್ತು karresults.nic.in ನಿಂದ ಡೌನ್‌ಲೋಡ್ ಮಾಡಿಕೊಳ್ಳಬಹುದು. ಫಲಿತಾಂಶ ಪ್ರಕಟವಾದ ನಂತರ, ವಿದ್ಯಾರ್ಥಿಗಳು ತಮ್ಮ ನೋಂದಣಿ ಸಂಖ್ಯೆ ಮತ್ತು ಜನ್ಮ ದಿನಾಂಕದ ಮೂಲಕ ಅದನ್ನು ಡೌನ್‌ಲೋಡ್ ಮಾಡಲು ಸಾಧ್ಯವಾಗುತ್ತದೆ.

ಫಲಿತಾಂಶವು ಬೆಳಿಗ್ಗೆ 11 ರ ನಂತರ ಕೆಇಎ ವೆಬ್ ಸೈಟ್ http://kea.kar.nic.in ನಲ್ಲಿ ಪರಿಶೀಲಿಸಬಹುದು.

ಇದನ್ನೂ ಓದಿ: Free Bus Ticket: ಮಹಿಳೆಯರೇ ತುಂಬಿದ ಬಸ್’ನಲ್ಲಿ ಕಂಡಕ್ಟರ್’ಗೇ ಜಾಗವಿಲ್ಲ ; ಟಿಕೆಟ್ ನೀಡಲು ಪರದಾಡಿ ಸೀಟ್ ಮೇಲೇರಿದ ಬಸ್ ಕಂಡಕ್ಟರ್ ! ವಿಡಿಯೋ ವೈರಲ್ !!

You may also like

Leave a Comment