Home » Free Bus Ticket: ಮಹಿಳೆಯರೇ ತುಂಬಿದ ಬಸ್’ನಲ್ಲಿ ಕಂಡಕ್ಟರ್’ಗೇ ಜಾಗವಿಲ್ಲ ; ಟಿಕೆಟ್ ನೀಡಲು ಪರದಾಡಿ ಸೀಟ್ ಮೇಲೇರಿದ ಬಸ್ ಕಂಡಕ್ಟರ್ !

Free Bus Ticket: ಮಹಿಳೆಯರೇ ತುಂಬಿದ ಬಸ್’ನಲ್ಲಿ ಕಂಡಕ್ಟರ್’ಗೇ ಜಾಗವಿಲ್ಲ ; ಟಿಕೆಟ್ ನೀಡಲು ಪರದಾಡಿ ಸೀಟ್ ಮೇಲೇರಿದ ಬಸ್ ಕಂಡಕ್ಟರ್ !

0 comments
Shakti yojana effect

Shakti yojana effect : ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ (Congress Government) ನುಡಿದಂತೆ 5 ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸಿದೆ. ಇವುಗಳ ಪೈಕಿ ಒಂದಾದ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ (ಶಕ್ತಿ ಯೋಜನೆಗೆ) (Free Bus Ticket) ಈಗಾಗಲೇ ಅಧಿಕೃತವಾಗಿ ಚಾಲನೆ ಸಿಕ್ಕಿದ್ದು, ನಾರಿಮಣಿಯರು ಉಚಿತ ಪ್ರಯಾಣವನ್ನು ಸಂಭ್ರಮಿಸುತ್ತಿದ್ದಾರೆ.

ಮಹಿಳೆಯರು ಸರ್ಕಾರದ ಯೋಜನೆಯನ್ನು ಚೆನ್ನಾಗಿ ಸದುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಮಹಿಳೆಯರೇ ಬಸ್ಸಿಗಾಗಿ ಮುನ್ನುಗ್ಗುತ್ತಿದ್ದಾರೆ. ಬಸ್ ನಿಲ್ದಾಣದಲ್ಲಿ ಮಹಿಳೆಯರೇ ಯಥೇಚ್ಛವಾಗಿದ್ದು, ಬರುವ ಹೋಗುವ ಎಲ್ಲಾ ಬಸ್ಸುಗಳು ಫುಲ್ ಫುಲ್! ಆಗಿದೆ. ಮಹಿಳೆಯರಂತೂ ಉಚಿತ ಟಿಕೆಟ್ ಎಂದು ತವರು ಮನೆ, ಟ್ರಿಪ್ ಎಂದು ಸುತ್ತಾಡುತ್ತಿದ್ದಾರೆ ಎಂದರೆ ತಪ್ಪಾಗಲಾರದು. ಈ ಮಧ್ಯೆ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋವೊಂದು ವೈರಲ್ ಆಗಿದ್ದು, ಶಕ್ತಿ ಯೋಜನೆ ಎಫೆಕ್ಟ್ (Shakti yojana effect) ನಿಂದ ಕಂಡಕ್ಟರ್ ಸೀಟ್ ಮೇಲೇರಿ ಟಿಕೆಟ್​ ನೀಡುತ್ತಿದ್ದು, ಸದ್ಯ ವಿಡಿಯೋ ಸಖತ್ ವೈರಲ್ ಆಗಿದೆ.

 

ಫ್ರೀ ಬಸ್ ಟಿಕೆಟ್ ಹಿನ್ನೆಲೆ ಬಸ್ ನಲ್ಲಿ ಮಹಿಳೆಯರ ಸಂಖ್ಯೆ ಹೆಚ್ಚಾಗಿದೆ. ಕಂಡಕ್ಟರ್ ಗಳೂ ಹರಸಾಹಸ ಪಡುವಂತಾಗಿದೆ.
ಬಸ್​ನಲ್ಲಿ ಮಹಿಳೆಯರೇ ತುಂಬಿಕೊಂಡಿದ್ದರಿಂದ ನಿರ್ವಾಹಕರು ಟಿಕೆಟ್ ನೀಡಲು ಬಹಳ ಕಷ್ಟ ಪಡುವಂತೆ ಆಗಿದೆ.​ ವೈರಲ್ ಆಗಿರುವ ವಿಡಿಯೋದಲ್ಲಿ ಬಸ್ ಪೂರ್ತಿ ಮಹಿಳೆಯರೇ ತುಂಬಿದ ಹೋಗಿದ್ದು, ಗದ್ದಲದ ನಡುವೆ ರಷ್ ನಿಂದಾಗಿ ಬಸ್ ಹತ್ತಿದವರಿಗೆ ಟಿಕೆಟ್​ ನೀಡುವ ಸಲುವಾಗಿ ಕಂಡಕ್ಟರ್ ಸೀಟ್ ಮೇಲೆ ಹತ್ತಿ ಕುಳಿತ್ತಿದ್ದಾರೆ. ಸದ್ಯ ಕಂಡಕ್ಟರ್ ಸೀಟ್ ಮೇಲೆ ಕುಳಿತುಕೊಂಡು ಪ್ರಯಾಣಿಕರಿಗೆ ಟಿಕೆಟ್ ವಿತರಿಸುತ್ತಿರುವ ವಿಡಿಯೋ ಸಖತ್ ವೈರಲ್ ಆಗಿದೆ.

 

ಇದನ್ನೂ ಓದಿ: Rakhi Sawant: ರಾಖಿ ಸಾವಂತ್ ಗೆ ಸಿಕ್ಕ ಮತ್ತೊಬ್ಬ ಹೊಸ ಬಾಯ್ ಫ್ರೆಂಡ್! ಈ ಬಾರಿ ಯಾರು?

You may also like

Leave a Comment