Home » Alfredo James Pacino: 83ನೇ ವಯಸ್ಸಿನಲ್ಲಿ 29ವರ್ಷದ ಪ್ರೇಯಸಿಯಿಂದ ಮತ್ತೊಮ್ಮೆ ಗಂಡು ಮಗುವಿನ ತಂದೆಯಾದ ಹಾಲಿವುಡ್‌ ನಟ!

Alfredo James Pacino: 83ನೇ ವಯಸ್ಸಿನಲ್ಲಿ 29ವರ್ಷದ ಪ್ರೇಯಸಿಯಿಂದ ಮತ್ತೊಮ್ಮೆ ಗಂಡು ಮಗುವಿನ ತಂದೆಯಾದ ಹಾಲಿವುಡ್‌ ನಟ!

by Mallika
0 comments
Alfredo James Pacino

Alfredo James Pacino: ತನ್ನ 83ನೇ ವಯಸ್ಸಿನಲ್ಲಿ 29ವರ್ಷದ ಪ್ರಿಯತಮೆ ನೂರ್‌ ಅಲ್ಫಲ್ಲಾಹ್‌ ಎಂಬಾಕೆಯಿಂದ ಅಕಾಡೆಮಿ ಅವಾರ್ಡ್‌ ವಿನ್ನರ್‌ ನಟ ಆಲ್‌ಫ್ರೆಡೊ ಜೇಮ್ಸ್‌ ಪೆಸಿನೋ (Alfredo James Pacino) ಎಂಬುವವರು ಗಂಡು ಮಗುವಿನ ತಂದೆಯಾಗಿದ್ದಾರೆ. ಈ ಮಗುವಿಗೆ ಈಗಾಗಲೇ ನಾಮಕರಣ ಮಾಡಿದ್ದು, ರೋಮನ್‌ ಪೆಸಿನೋ ಎಂಬ ಹೆಸರನ್ನು ಇಡಲಾಗಿದೆ.

ಇವರಿಬ್ಬರ ಭೇಟಿ 2022 ರಲ್ಲಿ ಆಗಿದೆ. ಅಲ್ಫಲ್ಲಾಹ್‌ ಎಂಬಾಕೆಯನ್ನು ಈತ ಭೇಟಿ ಮಾಡಿದಾಗ, ಅಲ್ಲೇ ಲವ್‌ ಆಗಿದೆ. ಹುಡುಗಿ ಬಗ್ಗೆ ಹೇಳುವುದಾದರೆ ಇವರು ನಿರ್ಮಾಪಕಿಯಾಗಿ ಕೆಲಸ ಮಾಡುತ್ತಿದ್ದು, ಕ್ಯಾಲಿಫೋರ್ನಿಯಾದಲ್ಲಿ ಅಲ್ಪಲ್ಲಾಹ್‌ ಶಿಕ್ಷಣ ಪಡೆದಿದ್ದಾರೆ.

ಅಂದ ಹಾಗೆ ಫೆಸಿನೋ ಅವರಿಗೆ ಈಗಾಗಲೇ ಮಕ್ಕಳಿದ್ದು, ಇದು ಅವರ ನಾಲ್ಕನೇ ಮಗು. ಬೆವೆರ್ಲಿ ಡಿ ಆಂಜೆಲೋ (Beverly D Angelo) ಎಂಬ ಪ್ರಿಯತಮೆಯಿಂದ ಇವರಿಗೆ ಆಂಟೊನ್‌, ಒಲಿವಿಯಾ ಎಂಬ ಮಕ್ಕಳಿದ್ದಾರೆ. ಜಾನ್‌ ಟೆರಂಟ್‌ ಎನ್ನುವ ಗೆಳತಿಯಿಂದ ಜೂಲಿ ಮಾರಿ ಎಂಬ ಮಗಳು ಇದ್ದಾಳೆ. ಒಟ್ಟಾಗಿ ನಾಲ್ಕು ಮಕ್ಕಳ ತಂದೆ ಈ  89 ವರ್ಷದ ನಟ ಫೆಸಿನೋ.

ಇಲ್ಲಿಯವರೆಗೆ ಪೆಸಿನೋ ಮದುವೆಯಾಗಿಲ್ಲ. ಅಲ್ಫ್ರೆಡೊ ಜೇಮ್ಸ್ ಪೆಸಿನೋ 20ನೇ ಶತಮಾನ ಅತ್ಯಂತ ಬೇಡಿಕೆಯ ಅಮೆರಿಕಾ ಮೂಲದ ನಟ. ಇವರ ನಟನೆಗೆ ಪ್ರೈಂಟೈಂ ಎಮಿ ಅವಾರ್ಡ್ಸ್, Golden Globe Cecil B. DeMille Award, AFI Life Achievement Award ಮುಂತಾದ ಪ್ರತಿಷ್ಠಿತ ಪ್ರಶಸ್ತಿ ಪಡೆದಿದ್ದಾರೆ.

ಇದನ್ನೂ ಓದಿ: ಮರದೊಂದಿಗೆ ಅಸ್ವಾಭಾವಿಕ ಸಂಭೋಗ ನಡೆಸಿದ 40 ವರ್ಷದ ವ್ಯಕ್ತಿ ಬಂಧನ..!‌ ವಿಡಿಯೋ ವೈರಲ್

You may also like

Leave a Comment