Hijab controversy : ಹಿಂದೂ ವಿದ್ಯಾರ್ಥಿನಿಯರಿಗೆ ಹಿಜಾಬ್ (Hijab controversy ) ಧರಿಸಲು ಅನಿವಾರ್ಯಗೊಳಿಸಿದ್ದರಿಂದ ಹಾಗೂ ಮತಾಂತರಕ್ಕೆ ಪ್ರಯತ್ನ ಮಾಡಿದ್ದರಿಂದ, ಮಧ್ಯಪ್ರದೇಶದ ದಮೋಹ ಶಾಲೆಯ ಒಂದು ಭಾಗವನ್ನು ಕೆಡವಿ ಹಾಕಲಾಗಿದೆ.
ಶಾಲೆಯನ್ನು ಅಕ್ರಮವಾಗಿ ಕಟ್ಟಿದ್ದು ಅಲ್ಲದೆ, ಮತಾಂತರ ಕೃತ್ಯಗಳು ನಡೆಸುವ ಹಿನ್ನೆಲೆ, ಬಿಗಿ ಪೊಲೀಸ್ ಭದ್ರತೆಯಲ್ಲಿ ಜೆಸಿಬಿ ಮೂಲಕ ಕಟ್ಟಡವನ್ನು ಕೆಡವಿ ಹಾಕಲು ಪ್ರಯತ್ನ ನಡೆಸಲಾಯಿತು.
ಕೆಡವಿ ಹಾಕಿರುವ ಭಾಗವನ್ನು ಶಾಲೆಯ ಆಡಳಿತ ಮಂಡಳಿ ಒತ್ತುವಾರಿ ಮಾಡಿಕೊಂಡ ಜಾಗದಲ್ಲಿ ನಿರ್ಮಿಸಲಾಗಿದೆ. ಈ ಬಗ್ಗೆ ದಮೋಹ ನಗರಪಾಲಿಕೆಯಿಂದ ಶಾಲೆಗೆ ಅನುಮತಿ ಇಲ್ಲದೆ ಶಾಲೆಯ ಕಟ್ಟಡ ಕಟ್ಟಿರುವುದರ ಬಗ್ಗೆ ಉತ್ತರಿಸುವಂತೆ ಪಾಲಿಕೆಯು ಶಾಲೆಗೆ ನೋಟಿಸ್ ನೀಡಿ ಮೂರು ದಿನದಲ್ಲಿ ಉತ್ತರ ನೀಡಲು ಆದೇಶ ನೀಡಿದೆ.
ಈ ಕುರಿತು ಮಧ್ಯಪ್ರದೇಶ ಬಿಜೆಪಿ ಘಟಕದ ಅಧ್ಯಕ್ಷ ವಿ.ಡಿ.ಶರ್ಮಾ ಮಾತಾಡಿ “ಶಾಲೆಯ ಆಡಳಿತ ಮಂಡಳಿ ಜೆಹಾದಿ ಸಾಮ್ರಾಜ್ಯ ಸ್ಥಾಪನೆಗೆ ಮುಂದಾಗಿದೆ” ಎಂದು ಆರೋಪ ಮಾಡಿದ್ದಾರೆ.
ಇದನ್ನೂ ಓದಿ: ಪ್ರೇಯಸಿ ಜೊತೆ ಲವ್ವಿಡವ್ವಿ! ರೆಡ್ ಹ್ಯಾಂಡ್ ಆಗಿ ಹಿಡಿದೇ ಬಿಟ್ಟಳು ಪತ್ನಿ! ವೀಡಿಯೋ ವೈರಲ್
