Logo Design Contest for PM Kisan Scheme: ಹಣ ಯಾರಿಗೆ ಬೇಡ ಹೇಳಿ. ಅದರಲ್ಲೂ ಕಷ್ಟಪಡದೆ ಫ್ರೀ ಆಗಿ ಹಣ ಸಿಗುತ್ತೆ ಅಂದ್ರೆ ಬೇಡ ಅನ್ನೋರು ಕಡಿಮೆಯೇ. ಆದರೆ, ಇಲ್ಲಿ ತುಂಬಾ ಕಷ್ಟ ಏನು ಪಡಬೇಕಿಲ್ಲ. ಸುಲಭವಾಗಿ 11 ಸಾವಿರ ನಿಮ್ಮದಾಗಿಸಬಹುದು. ನಿಮಗೆ ಕಲೆ ಗೊತ್ತಿರಬೇಕು ಅಷ್ಟೇ!. ಏನಪ್ಪಾ ಇದು? 11 ಸಾವಿರ ಸಿಗುತ್ತದೆ ಯಾವ ಯೋಜನೆ ಇರಬಹುದು ಎಂದು ಊಹಿಸುತ್ತಿದ್ದೀರಾ? ಇಲ್ಲಿದೆ ನೋಡಿ ಮಾಹಿತಿ.
ಪಿಎಂ ಕಿಸಾನ್ ಯೋಜನೆಗೆ (PM Kisan Samman Nidhi) ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಸ್ಪರ್ಧೆಯನ್ನು ನಡೆಸುತ್ತಿದೆ. ನೀವು ಇದರಲ್ಲಿ ಭಾಗವಹಿಸಿ ವಿಜೇತರಾದರೆ ನಿಮಗೆ ರೂ. 11 ಸಾವಿರ ಸಿಗಲಿದೆ. ಅಷ್ಟೇ ಅಲ್ಲ ಸಮಾಧಾನಕರ ಬಹುಮಾನಗಳ ಅಡಿಯಲ್ಲಿ ರೂ. 5 ಸಾವಿರ ಲಭ್ಯವಿದೆ.
ಹೌದು, ಪಿಎಂ ಕಿಸಾನ್ ಯೋಜನೆಗಾಗಿ ಲೋಗೋ ವಿನ್ಯಾಸ ಸ್ಪರ್ಧೆಯನ್ನು (Logo Design Contest for PM Kisan Scheme) ಆಯೋಜಿಸಲಾಗಿದೆ. ನೀವು ಲೋಗೋವನ್ನು ಡಿಸೈನ್ ಮಾಡಬೇಕು. ಸ್ಪರ್ಧೆಯಲ್ಲಿ ಭಾಗವಹಿಸಲು ಜೂನ್ 30 ಕೊನೆಯ ದಿನವಾಗಿದೆ. ಭಾಗವಹಿಸಲು My Gov ವೆಬ್‌ಸೈಟ್‌ಗೆ ಭೇಟಿ ನೀಡಿ.
