Snake Viral Video: ಹಾವಿಗೆ ತೊಂದರೆ ಕೊಟ್ಟರೆ ಅದು ಕಚ್ಚುತ್ತದೆ. ಹಾಗಾಗಿಯೇ ಮನುಷ್ಯನಿಗೆ ಹಾವು ಕಂಡ್ರೆ ಎಲ್ಲಿಲ್ಲದ ಭಯ. ಆದರೆ, ಹಾವು ತನ್ನನ್ನು ತಾನೇ ಕಚ್ಚಿ ಸಾಯಿಸೋದು ಎಲ್ಲಾದರೂ ಕಂಡಿದ್ದೀರಾ?!. ಇಲ್ಲ ಅಲ್ವಾ! ಸದ್ಯ ವೈರಲ್ (Snake Viral Video) ಆಗಿರುವ ವಿಡಿಯೋದಲ್ಲಿ ನೋಡಲು ಭಯಾನಕವಾಗಿರುವ ಹಾವೊಂದು ತನ್ನ ದೇಹವನ್ನು ತಾನೇ ಕಚ್ಚುತ್ತಿದೆ. ನೀವು ವಿಡಿಯೋ ನೋಡಿದ್ರೆ ಭಯ ಬೀಳೋದು ಖಂಡಿತ!.
ವಿಡಿಯೋದಲ್ಲಿ, ಕಪ್ಪು ಬಣ್ಣದ ಹಾವೊಂದು ಕಾಣಿಸುತ್ತದೆ. ಆಕಾರದಲ್ಲಿ ದೊಡ್ಡದು, ನೋಡಲೂ ಭಯಾನಕವಾಗಿವೆ. ಸೂಕ್ಷ್ಮವಾಗಿ ಗಮನಿಸಿದರೆ ಹಾವಿನ ತಲೆ ಅದರ ದೇಹದಿಂದ ಬೇರ್ಪಟ್ಟಿದೆ. ವಿಚಿತ್ರವೆಂದರೆ ಹಾವಿನ ದೇಹ ಮಿಸುಕಾಡುತ್ತಿದ್ದಂತೆ ಅಲ್ಲೇ ಇದ್ದ ಹಾವಿನ ಬೇರ್ಪಟ್ಟ ತಲೆ ದೇಹವನ್ನು ಕಚ್ಚುತ್ತದೆ. ಹಾವು ಉರುಳಾಡಿದರೂ ಅದರ ತಲೆ ದೇಹವನ್ನು ಕಚ್ಚಿ ಹಿಡಿದಿರುತ್ತದೆ. ಸದ್ಯ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ನೆಟ್ಟಿಗರು ಈ ವಿಡಿಯೋವನ್ನು ವಿಸ್ಮಯದಿಂದ ನೋಡುತ್ತಿದ್ದು, ಹಲವು ವಿಭಿನ್ನ ರೀತಿಯ ಕಾಮೆಂಟ್ ಮಾಡಿದ್ದಾರೆ. ಒಬ್ಬರು ಭಯಂಕರವಾದ ಹಾವು ತನ್ನನ್ನು ತಾನೇ ಕಚ್ಚಿಕೊಂಡಿರುವುದು ಆತಂಕಕಾರಿಯಾಗಿದೆ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೂ ಕೆಲವರು ಹಾವು ತನ್ನ ಗುಣವನ್ನು ಬಿಡುವುದಿಲ್ಲ ಎಂದು ಕಾಮೆಂಟ್ ಮಾಡಿದ್ದಾರೆ.
