Home » Husaband-Wife viral video: ಪ್ರೇಯಸಿ ಜೊತೆ ಲವ್ವಿಡವ್ವಿ! ರೆಡ್ ಹ್ಯಾಂಡ್ ಆಗಿ ಹಿಡಿದೇ ಬಿಟ್ಟಳು ಪತ್ನಿ! ವೀಡಿಯೋ ವೈರಲ್

Husaband-Wife viral video: ಪ್ರೇಯಸಿ ಜೊತೆ ಲವ್ವಿಡವ್ವಿ! ರೆಡ್ ಹ್ಯಾಂಡ್ ಆಗಿ ಹಿಡಿದೇ ಬಿಟ್ಟಳು ಪತ್ನಿ! ವೀಡಿಯೋ ವೈರಲ್

0 comments
Husaband-Wife viral video

Husaband-Wife viral video: ಗಂಡ ಹೆಂಡತಿ (husband and wife )ಎಂದರೆ ಅವರಿಬ್ಬರ ಸಂಬಂಧ ಹಾಲು ಜೇನಿನಂತೆ ಇರಬೇಕು. ಆದರೆ ಅದೇ ಹಾಲು ಜೇನಿನ ಸಂಬಂಧ ನಡುವೆ ಹುಳಿ ಹಿಂಡಲು ಬಂದರೆ ಹೆಂಡತಿಯಾದವಳು ಸುಮ್ಮನೆ ಇರಲಾರಳು. ಹಾಗಿರುವಾಗ ತನ್ನ ಸಂಸಾರವನ್ನು ಕಾಪಾಡಿಕೊಳ್ಳಲು ಯಾವ ರೂಪ ಬೇಕಾದರೂ ತಾಳುತ್ತಾಳೆ ಅನ್ನೋದಕ್ಕೆ ಇದೇ ಉದಾಹರಣೆ (example ).

ಸದ್ಯ ಪತಿಯು ಪರ ಸ್ತ್ರಿಯೊಂದಿಗೆ ಸಂಬಂಧ ಇರಿಸಿಕೊಂಡಿರುವುದು ಪತ್ನಿಗೆ ಗೊತ್ತಾಗಿ, ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿರುವ ಪತಿಯನ್ನು ಪತ್ನಿ ಬೀದಿಗೆ ಎಳೆದು ತಂದಿದ್ದಾಳೆ. ಅಲ್ಲದೆ ಎಲ್ಲರೆದುದು ಮಾನ ಮರ್ಯಾದೆ ಮೂರುಕಾಸಿಗೆ ಹರಾಜು ಆಗುವಂತೆ ಸಾಕು ಸಾಕು ಎನ್ನುವಷ್ಟು ಗೂಸಾ ಕೊಡಿಸಿದ್ದಾಳೆ.

ಹೌದು, ಉತ್ತರ ಪ್ರದೇಶದ ಬಹಿಯಾಚ್ ಜಿಲ್ಲೆಯಲ್ಲಿ ಕಿರಿಯ ಅಭಿಯಂತರ (ಜೆಇ) ಆಗಿ ಕೆಲಸ ಮಾಡುವ ವ್ಯಕ್ತಿಯೊಬ್ಬ ತನ್ನ ಮನೆಯಲ್ಲಿ ಮಡದಿ ಇಲ್ಲದ ವೇಳೆ ಪ್ರೇಯಸಿಯನ್ನು ಕರೆಸಿಕೊಂಡು, ಪತ್ನಿ ಹಾಗೂ ಆಕೆಯ ಸಹೋದರರಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾನೆ.

ಈತ ತನ್ನ ಮಡದಿ ತವರಿಗೆ ಹೋಗಿದ್ದೇ ತಡ, ಪ್ರೇಯಸಿಯನ್ನು ಕರೆಸಿ ಐದು ದಿನಗಳಿಂದ ಚಕ್ಕಂದ ಆಡಲು ಶುರು ಮಾಡಿದ್ದಾನೆ. ಇನ್ನು ತನ್ನ ಮನೆಯಲ್ಲಿ ಪರಸ್ತ್ರೀಯೊಬ್ಬಳು ಪತಿಯೊಂದಿಗೆ ವಾಸಿಸುತ್ತಿದ್ದಾಳೆ ಎಂದು ಅರಿತ ಪತ್ನಿ ತನ್ನ ಸಹೋದರರನ್ನು ಕರೆದುಕೊಂಡು ಮನೆಗೆ ದಿಡೀರ್ ಭೇಟಿ’ ಕೊಟ್ಟಿದ್ದಾಳೆ.

ಈ ವೇಳೆ ಅನ್ಯ ಸ್ತ್ರೀ ಜೊತೆಗಿದ್ದ ತನ್ನ ಪತಿಯನ್ನು ಕಂಡು ಕೆಂಡಾಮಂಡಲವಾದ ಪತ್ನಿ ತನ್ನ ಪತಿಗೆ ಚೆನ್ನಾಗಿ ಬೈದಿದ್ದಲ್ಲದೆ, ಸಹೋದರರಿಂದ ಧರ್ಮದೇಟು ಹಾಕಿದ್ದಾಳೆ.

ಸದ್ಯ ಪೊಲೀಸ್ ಠಾಣೆಯಲ್ಲಿ ಈ ವಿಚಾರವಾಗಿ ರಾಜಿ ಪಂಚಾಯಿತಿ ಮಾಡಿದ್ದು, ತಾನು ಇನ್ನು ಮುಂದೆ ಆ ಮಹಿಳೆಯನ್ನು ಸಂಪರ್ಕ ಮಾಡುವುದಿಲ್ಲ ಎಂಬುದಾಗಿ ಜೆಇ ಮಾತು ಕೊಟ್ಟ ನಂತರ ಆತನೊಂದಿಗೆ ಸಂಸಾರ ಮುಂದುವರಿಸಿಕೊಂಡು ಹೋಗಲು ಮಡದಿ ಒಪ್ಪಿದ್ದಾಳೆ.

ಸದ್ಯ ಜೆಯಿಗೆ ಆತನ ಭಾಮೈದನರು ಹಿಗ್ಗಾಮುಗ್ಗಾ ಥಳಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಎಲ್ಲೆಡೆ ವೈರಲ್(Husaband-Wife viral video) ಆಗಿದೆ.

 

 

ಇದನ್ನೂ ಓದಿ: KSRTC Staff Salary Hike: ಸಾರಿಗೆ ನೌಕರರಿಗೆ ಸಿಹಿಸುದ್ದಿ ; ಶೇ.15 ವೇತನ ಹೆಚ್ಚಳ !

You may also like

Leave a Comment