Rape law: ಮಕ್ಕಳು ಪ್ರೌಢ ಅವಸ್ಥೆಗೆ ಬರುವ ಮುನ್ನವೇ ಅತ್ಯಾಚಾರ, ಲೈಂಗಿಕ ಶೋಷಣೆಗೆ ಒಳಗಾಗುತ್ತಿರುವುದು ಇತ್ತೀಚಿಗೆ ಹೆಚ್ಚಾಗಿ ನಮ್ಮ ದೇಶದ ಹೊರತು ಇತರ ದೇಶಗಳಲ್ಲಿಯೂ ಕಂಡು ಬರುತ್ತಿದೆ. ಈ ಹಿನ್ನೆಲೆ ಜಪಾನ್ (Japan) ದೇಶದ ಮಕ್ಕಳ ಮೇಲೆ ನಡೆಯುತ್ತಿರುವ ಅತ್ಯಾಚಾರ ಪ್ರಕರಣಗಳಿಗೆ ಕಡಿವಾಣ ಹಾಕಲು, ಅಪರಾಧಗಳ ಕಡಿವಾಣದ ಭಾಗವಾಗಿ ಜಪಾನ್ ಸರ್ಕಾರ ಮಹತ್ತರ ಹೆಜ್ಜೆಯನ್ನಿರಿಸಿದ್ದು, ಲೈಂಗಿಕ ಸಮ್ಮತಿಯ ವಯೋಮಿತಿಯನ್ನು 13 ರಿಂದ 16 ವರ್ಷಕ್ಕೆ ಏರಿಕೆ ಮಾಡಿದೆ.
ಜಪಾನ್ ಸರ್ಕಾರ ಪ್ರಸ್ತಾಪಿಸಿರುವ ಲೈಂಗಿಕ ಸಮ್ಮತಿಯ ಈ ನೀತಿಗೆ (Rape law) ಸಂಸತ್‌ನ ಮೇಲ್ಮನೆಯಲ್ಲಿ ಸರ್ವಾನುಮತದ ಅಂಗೀಕಾರ ದೊರೆತಿದೆ.
ಸದ್ಯ ಜಪಾನ್ ಇದೀಗ ಲೈಂಗಿಕ ಕ್ರಿಯೆಗೆ ಅತಿ ಸಣ್ಣವಯಸ್ಸಿಗೆ ಸಮ್ಮತಿ ನೀಡಿದ ದೇಶವೆಂಬ ಅಪಖ್ಯಾತಿಯಿಂದಲೂ ಜಪಾನ್ ಮುಕ್ತವಾಗಿದೆ. ಮುಖ್ಯವಾಗಿ ಸರ್ಕಾರದ ಈ ನಿರ್ಣಯವನ್ನು ಮಾನವ ಹಕ್ಕು ಸಂಘಟನೆಗಳು ಹಾಗೂ ಸಮಾಜ ಸುಧಾರಣಾ ಸಂಘ ಸಂಸ್ಥೆಗಳು ಸ್ವಾಗತಿಸುತ್ತವೆ.
ಈ ನಿಯಮದಿಂದ ಮಕ್ಕಳ ಮೇಲೆ ನಡೆಯುತ್ತಿರುವ ಅತ್ಯಾಚಾರ ಪ್ರಕರಣಗಳಿಗೆ ಕಡಿವಾಣ ಬೀಳುವ ಬಲವಾದ ಉದ್ದೇಶವನ್ನು ಸರ್ಕಾರ ಒಳಗೊಂಡಿದೆ.
ಇದನ್ನೂ ಓದಿ: ಹಳೆ ಸಾಲ ತೀರಿಸಲು ಹೊಸ ಪ್ರಯತ್ನದ ಹಾದಿ ಈ ರಾಶಿಯವರಿಗೆ!
