Home » Post office: ಕರಾವಳಿ ಜನತೆಗೆ ಸಿಹಿ ಸುದ್ದಿ! ಪೋಸ್ಟ್ ಆಫೀಸ್ ನಲ್ಲಿ ದಿನದ 24ಗಂಟೆ ಸೇವೆ ಲಭ್ಯ!

Post office: ಕರಾವಳಿ ಜನತೆಗೆ ಸಿಹಿ ಸುದ್ದಿ! ಪೋಸ್ಟ್ ಆಫೀಸ್ ನಲ್ಲಿ ದಿನದ 24ಗಂಟೆ ಸೇವೆ ಲಭ್ಯ!

0 comments
Post office

Post Office: ಅಂಚೆ ಕಚೇರಿ ( Post Office) ಸೇವೆಯೂ ಇತ್ತೀಚೆಗೆ ಹೆಚ್ಚಿನ ಬೆಳವಣಿಗೆ ಹೊಂದಿರುವುದರಿಂದ ಬ್ಯಾಂಕಿಗ್ ವ್ಯವಹಾರ ಸೇವೆಗಳಿಗೂ ಉತ್ತಮ ಪ್ರಯೋಜನವಾಗಲಿದೆ. ಇದೀಗ ಮಂಗಳೂರು ರೈಲ್ವೆ ಮೇಲ್ ಸರ್ವಿಸ್ ವಿಭಾಗವು, ಕರಾವಳಿಯ ಜನರು ಇನ್ನು ಮುಂದೆ ಯಾವುದೇ ಸಮಯದಲ್ಲಿ ಬೇಕಿದ್ದರೂ ಅಂಚೆ ಸೇವೆಯನ್ನು ಪಡೆಯುವ ಅವಕಾಶವನ್ನು ಕಲ್ಪಿಸಿಕೊಟ್ಟಿದೆ.

ಆದರೆ ಮಂಗಳೂರು ನಗರದ ಸೆಂಟ್ರಲ್ ರೈಲು ನಿಲ್ದಾಣದ ಆರ್.ಎಂ.ಎಸ್.ಕ್ಯೂ ಕಚೇರಿಯಲ್ಲಷ್ಟೇ ಈ ಸೇವೆಯನ್ನು ಗ್ರಾಹಕರು ಪಡೆಯಬಹುದಾಗಿದೆ.

ಮುಖ್ಯವಾಗಿ ದಿನದ 24 ಗಂಟೆಯೂ ನೋಂದಾಯಿತ (ರಿಜಿಸ್ಟರ್ಡ್ ಪೋಸ್ಟ್) ಮತ್ತು ತ್ವರಿತ ಪಾರ್ಸೆಲ್ ಸೇವೆಗಳು (ಸ್ಪೀಡ್ ಪೋಸ್ಟ್) ಕೂಡಾ ಲಭ್ಯವಿರಲಿದೆ. ಜೊತೆಗೆ ಅಂಚೆ ಚೀಟಿಗಳು (ಪೋಸ್ಟಲ್ ಸ್ಟ್ಯಾಂಪ್) ಕೂಡಾ ಸಿಗಲಿದ್ದು, ಗ್ರಾಹಕರು ದಿನದ ಯಾವುದೇ ಸಮಯದಲ್ಲಿ ಕೂಡಾ ಈ ಸೇವೆಯನ್ನು ಪಡೆಯಬಹುದಾಗಿದೆ.

24 ಗಂಟೆಗಳ ಈ ಸೇವೆಯನ್ನು ಗ್ರಾಹಕರು ಡಿಜಿಟಲ್ ಅಥವಾ ಕ್ಯೂಆರ್ ಕೋಡ್ ಬಳಸಿ ಹಣ ಪಾವತಿಸಬಹುದಾಗಿದೆ. ಸದ್ಯ ಈ ಹೊಸ ಸೇವೆಯನ್ನು ಸದುಪಯೋಗ ಪಡಿಸಿಕೊಳ್ಳುವಂತೆ ಮಂಗಳೂರು ಅಂಚೆ ವಿಭಾಗ ಸಾರ್ವಜನಿಕರಿಗೆ ಸಲಹೆ ನೀಡಿದೆ.

ಇದನ್ನೂ ಓದಿ: Solar Water Heater: ಏಕಾಏಕಿ ಸೋಲಾರ್ ವಾಟರ್ ಹೀಟರ್ ಪ್ರೋತ್ಸಾಹಧನ ರದ್ದು! ಗೃಹಜ್ಯೋತಿ ಎಫೆಕ್ಟ್!!

You may also like

Leave a Comment