Dowry: ಮನುಷ್ಯನ ಅಟ್ಟಹಾಸ ಮಿತಿಮೀರುತ್ತಿದೆ. ಇತ್ತೀಚಿಗೆ ಮನುಷ್ಯರು ಕರುಣೆ ಇಲ್ಲದೆ ವರ್ತಿಸುತ್ತಿರುವುದನ್ನು ನೋಡಿದ್ದೇವೆ ಮತ್ತು ಕೇಳಿದ್ದೇವೆ. ಹಾಗೆಯೇ ಇಲ್ಲೊಂದು ಘಟನೆ ಕೇಳಿದರೆ ಕರುಳು ಚುರುಕ್ ಅನ್ನುವುದು ಖಂಡಿತಾ.
ಹೌದು, ಸಾವಿರಾರು ಕನಸುಗಳನ್ನು ಹೊತ್ತು ಗಂಡನ ಮನೆ ಸೇರಿದ ಮಹಿಳೆಯನ್ನು, ಮಗನ ಸಣ್ಣ ಸ್ವಾರ್ಥ ಕ್ಕಾಗಿ ಅತ್ತೆಯು ಸೊಸೆಗೆ ವಿಷವುಣಿಸಿ ತವರು ಮನೆಗೆ ಕಳುಹಿಸಿದ್ದಾಳೆ.
ಮದುವೆ ಸಮಯದಲ್ಲಿ ವರದಕ್ಷಿಣೆ (Dowry) ರೂಪದಲ್ಲಿ ಬುಲೆಟ್ ಬೈಕ್ ಕೊಡದಿದ್ದಕ್ಕೆ ಸೊಸೆಯನ್ನು ಕೊಂದು ಹಾಕಿರುವ ಘಟನೆ ಬಿಹಾರದ ಬಕ್ಸರ್ ಜಿಲ್ಲೆಯಲ್ಲಿ ನಡೆದಿರುವುದು ಬೆಳಕಿಗೆ ಬಂದಿದೆ.
ಮಹಿಳೆಯ ಅತ್ತೆ ಸೊಸೆಗೆ ವಿಷ ಹಾಕಿದ್ದು, ಅದೇ ದಿನ ಆಕೆಯ ಆರೋಗ್ಯ ಹದಗೆಟ್ಟಿದೆ ಎಂದು ಆಕೆಯನ್ನು ತವರಿಗೆ ಕಳುಹಿಸಿದ್ದಾರೆ. ಆದರೆ ಸೊಸೆ ಅಲ್ಲಿ ಮೃತಪಟ್ಟಿದ್ದಾಳೆ.
ಮೃತರ ಸಹೋದರ ನೀಡಿದ ದೂರಿನ ಆಧಾರದ ಮೇಲೆ ಅತ್ತೆ ಸೇರಿ ಇಬ್ಬರ ವಿರುದ್ಧ ದೂರು ದಾಖಲಿಸಿದ್ದು, ವಿಚಾರಣೆ ನಡೆಸಲಾಗುತ್ತಿದೆ ಎಂದು ವರದಿ ತಿಳಿಸಿದೆ.
ಮದುವೆಯಲ್ಲಿ ವರದಕ್ಷಿಣೆ ರೂಪದಲ್ಲಿ ಬುಲೆಟ್ ಬೈಕ್ ನೀಡುವ ಬೇಡಿಕೆಯನ್ನು ಗಂಡನ ಮನೆಯವರು ಇಟ್ಟಿದ್ದರು. ಅಲ್ಲದೆ ವರದಕ್ಷಿಣೆಯ ಸಲುವಾಗಿ ಬುಲೆಟ್ ನೀಡಬೇಕೆಂದು ಅತ್ತೆ ಸೇರಿದಂತೆ ಗಂಡನ ಮನೆಯವರು ಮಹಿಳೆಗೆ ದೈಹಿಕವಾಗಿ ಹಿಂಸೆ ನೀಡುತ್ತಿದ್ದರು ಎಂದು ದೂರಿನಲ್ಲಿ ಮೃತಳ ಸಹೋದರ ಹೇಳಿದ್ದಾರೆ. ಪೊಲೀಸ್ ವಿಚಾರಣೆ ನಂತರ ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಿದೆ.
ಇದನ್ನೂ ಓದಿ: Dharmasthala Soujanya murder: ಧರ್ಮಸ್ಥಳ ಸೌಜನ್ಯ ಕೊಲೆ ಆರೋಪಿ ಬಿಡುಗಡೆ, ಈ ಕೇಸಿನಲ್ಲೀಗ ದೈವ, ದೇವರೇ ಅಪರಾಧಿ !?
