Bengaluru : ಬೆಂಗಳೂರು (Bengaluru) ನಗರದ ಎಂಜಿ ರೋಡ್, ಬ್ರಿಗೇಡ್ ರೋಡ್ ಪಬ್ಗಳ ಮೇಲೆ ತಡ ರಾತ್ರಿ ಪೊಲೀಸರು ಅಟ್ಯಾಕ್ ಮಾಡಿದ್ದು, ಆಫ್ರಿಕನ್ ಪ್ರಜೆಗಳನ್ನು ವಶಕ್ಕೆ ಪಡೆಯಲಾಗಿದೆ.
ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ವೀಕೆಂಟ್ ಬಂತಂದ್ರೆ ಸಾಕು ಪಬ್, ಕ್ಲಬ್ ಬಾರ್‌ಗಳು ತುಂಬಿ ತುಳುಕುತ್ತದೆ. ಪಬ್‌ಗಳಲ್ಲಿ ಅನೈತಿಕ ಚಟುವಟಿಕೆ ಶಂಕಿಸಿ ಕೇಂದ್ರ ವಿಭಾಗ ಡಿಸಿಪಿ ಶ್ರೀನಿವಾಸಗೌಡ ನೇತೃತ್ವದಲ್ಲಿ ಇಬ್ಬರು ಎಸಿಪಿ, ಆರು ಇನ್ಸ್ಪೆಕ್ಟರ್, 10 ಪಿಎಸ್ಐ, 20 ಮಹಿಳಾ ಸಿಬ್ಬಂದಿ, 20 ಪುರುಷ ಸಿಬ್ಬಂದಿಯಿಂದ ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ.
ಪೊಲೀಸರ ದಾಳಿ ವೇಳೆ 25ಕ್ಕೂ ಹೆಚ್ಚು ಮಹಿಳೆಯರು ಆಫ್ರಿಕನ್ ಪ್ರಜೆಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಬಳಿಕ ಅವರನ್ನು ವೈದ್ಯಕೀಯ ಪರೀಕ್ಷೆ ಒಳಪಡಿಸಲಾಗಿದೆ
ಪೊಲೀಸರ ದಾಳಿ ವೇಳೆ ಆಫ್ರಿಕನ್ ಯುವತಿಯರು ಗಲಾಟೆ ತೀವ್ರಗೊಂಡಿತು ಬಳಿಕ ಯುವತಿಯರನ್ನು ಸಮಾಧಾನ ಮಾಡಲಾಗಿದೆ ವರದಿಯಾಗಿದೆ.
ಇದನ್ನೂ ಓದಿ: RBI on Missing Notes: ₹500 ನೋಟುಗಳು ನಿಜವಾಗಿಯೂ ‘ನಾಪತ್ತೆ’ಯಾಗಿವೆಯೇ? RBI ನೀಡಿತು ಸ್ಪಷ್ಟನೆ
