Biriyani: ಬಿರಿಯಾನಿ ಅಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ? ಅದರಲ್ಲೂ ಕಡಿಮೆ ಬೆಲೆಗೆ ಬಿರಿಯಾಗಿ ಸಿಗುತ್ತೆ ಅಂದರೆ ಜನರು ಸಕ್ಕರೆ ಮೇಲೆ ಇರುವೆ ಬಂದಂತೆ ಬರೋದು ಖಚಿತ. ಹಾಗೆಯೇ ಇಲ್ಲೊಬ್ಬ ಉದ್ಯಮಿ ಹೊಸ ಹೋಟೆಲ್ ಆರಂಭಿಸಿದ್ದು, ತನ್ನ ಹೋಟೆಲ್ ಬಗ್ಗೆ ಪ್ರಚಾರ ಮಾಡಲು ಹೊಸ ಐಡಿಯಾ ಮಾಡಿದ್ದಾನೆ.
ಹೌದು, ಕರೀಂ ನಗರದ ‘ ದಿ ಎಂಪೇರ್ ಹೋಟೆಲ್ ‘ ಒಂದರಲ್ಲಿ, ಒಂದು ರೂಪಾಯಿ ನೋಟ್‌ಗೆ ಒಂದು ಬಿರಿಯಾನಿ (Biriyani) ಕೊಡುವುದಾಗಿ, ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಪ್ರಚಾರ ಮಾಡಲಾಗಿತ್ತು. ಈ ಪ್ರಚಾರ ವ್ಯಾಪಕವಾಗುತ್ತಿದ್ದಂತೆಯೇ ಒಂದು ರೂಪಾಯಿ ನೋಟುಗಳನ್ನು ಸಂಗ್ರಹಿಸಿ ಗ್ರಾಹಕರು ಹೋಟೆಲ್ ಮುಂದೆ ಸರತಿ ಸಾಲಿನಲ್ಲಿ ನಿಂತರು.
ಕ್ರಮೇಣ ಜನಸಂದಣಿ ಹೆಚ್ಚಾದಂತೆ ಕೆಲವರು ಹೋಟೆಲ್‌ಗೆ ನುಗ್ಗಲು ಯತ್ನಿಸಿದರು. ಕೇವಲ ಒಂದು ರೂಪಾಯಿಗೆ ಬಿರಿಯಾನಿ ನೀಡುವುದಾಗಿ ಸರತಿ ಸಾಲಿನಲ್ಲಿ ನಿಂತರೂ ಸಹ ಕೆಲವರು ತಾಳ್ಮೆ ಕಳೆದು ಕೊಂಡು ನೂಕಲು ಯತ್ನಿಸಿದ್ದರು. ಒಂದು ರೂಪಾಯಿಯ ಬಿರಿಯಾನಿ ಪ್ರಚಾರದ ಎಫೆಕ್ಟ್‌ನಿಂದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಹೋಟೆಲ್‌ಗೆ ಆಗಮಿಸಲು ಪ್ರಾರಂಭಿಸಿದರು. ಈ ಪರಿಣಾಮ ಹಲವು ಜನರು ಒಂದು ರೂ. ನೋಟಿನ ಜೊತೆ 250 ರೂಪಾಯಿ ಪಾರ್ಕಿಂಗ್ ದಂಡ ಕಟ್ಟಿ ಬಂದಿರುವುದು ಬೆಳಕಿಗೆ ಬಂದಿದೆ. ಒಟ್ಟಿನಲ್ಲಿ ಒಂದು ರೂಪಾಯಿ ಗೆ ಬಿರಿಯಾನಿ ಫ್ರೀ ಗೆ ಜನರು 250 ರೂ. ಕಳೆದುಕೊಂಡಿದ್ದು, ನಿಜಕ್ಕೂ ತಮ್ಮ ತಲೆ ತಾವೇ ಕೆರೆದುಕೊಂಡು ಹೋಗುತ್ತಿರುವ ದೃಶ್ಯ ಅಲ್ಲಿ ಕಂಡು ಬಂದಿತ್ತು.
ಹೌದು, ಹೋಟೆಲ್ ಮಾಲೀಕರ ಈ ಪ್ರಚಾರದಿಂದ ಕೆಲವೇ ಗಂಟೆಗಳಲ್ಲಿ ಸುಮಾರು 800 ಬಿರಿಯಾನಿ ಪಾರ್ಸೆಲ್‌ಗಳನ್ನು ಮಾರಾಟ ಮಾಡಿದರು. ಇನ್ನು ತಯಾರು ಮಾಡಿದ್ದ ಬಿರಿಯಾನಿ ಎಲ್ಲವೂ ಕೆಲವೇ ಗಂಟೆಗಳಲ್ಲಿ ಖಾಲಿಯಾಗಿದ್ದು, ಗ್ರಾಹಕರಿಗೆ ಬಿರಿಯಾನಿ ಸಿಗದೇ ಇರುವುದರಿಂದ ನಿರಾಶೆಗೊಂಡಿದ್ದಾರೆ.
https://twitter.com/TeluguScribe/status/1670031920254816256/photo/1
ಇದನ್ನೂ ಓದಿ: Dowry: ಅತ್ತೆ, ಮಗನ ಬುಲೆಟ್ ಹುಚ್ಚಿನಲ್ಲಿ ಸೊಸೆಗೆ ವಿಷ ಪ್ರಾಷಣ! ಬುಲೆಟ್ ಬೈಕ್ ಬದಲು ಜೀವವನ್ನೇ ಕಿತ್ತುಕೊಂಡ ಪಾಪಿಗಳು!
