Home » Adipurush: ರಾಮಾಯಣಕ್ಕೂ ‘ಆದಿಪುರುಷ್’ ಸಿನಿಮಾಗೂ ಸಂಬಂಧವಿಲ್ಲ : ಸಿಕ್ಕಾಪಟ್ಟೆ ಟ್ರೋಲ್ ಬೆನ್ನಲ್ಲೇ ಉಲ್ಟಾ ಹೊಡೆದ ಚಿತ್ರ ತಂಡ

Adipurush: ರಾಮಾಯಣಕ್ಕೂ ‘ಆದಿಪುರುಷ್’ ಸಿನಿಮಾಗೂ ಸಂಬಂಧವಿಲ್ಲ : ಸಿಕ್ಕಾಪಟ್ಟೆ ಟ್ರೋಲ್ ಬೆನ್ನಲ್ಲೇ ಉಲ್ಟಾ ಹೊಡೆದ ಚಿತ್ರ ತಂಡ

by ಹೊಸಕನ್ನಡ
0 comments
Adipurush

Adipurush: ಆದಿಪುರುಷ್(Adipurush) ಟೀಸರ್​ನಲ್ಲಿ ರಾವಣನನ್ನು ನೋಡಿದರೆ ಅಲ್ಲಾವುದ್ದೀನ್​ ಖಿಲ್ಜಿ ನೋಡಿದಂತೆ ಆಗುತ್ತಿದೆ. ಇದಕ್ಕಿಂತ ರಾಮಾಯಣ ಸೀರಿಯಲ್​ ಎಷ್ಟೋ ಚೆನ್ನಾಗಿತ್ತು’ ಎಂದು ರಿಲೀಸ್ ಗೂ ಮುಂಚೆಯೇ ಟ್ರೋಲ್(Troll) ಆಗಿದ್ದ ಸಿನಿಮಾ, ಇದೀಗ ಬಿಡುಗಡೆಯ ಬಳಿಕವೂ ಸಖತ್ ಟ್ರೋಲ್ ಆಗ್ತಿದೆ. ಆದರೀಗ ಚಿತ್ರ ತಂಡ ಉಲ್ಟಾ ಹೊಡೆದಿದ್ದು, ಎಲ್ಲರೂ ಶಾಕ್ ಆಗುವಂತೆ ಮಾಡಿದೆ.

ಹೌದು, ಸ್ಟಾರ್ ನಟ ಪ್ರಭಾಸ್(Prabhas) ನಟನೆಯ ಬಹುನಿರೀಕ್ಷೆಯ ಸಿನಿಮಾ ಆದಿಪುರುಷ್ ಅದ್ದೂರಿಯಾಗಿ ತೆರೆಗೆ ಬಂದಿದ್ದು, ಪ್ಯಾನ್ ಇಂಡಿಯಾ(Pan India movie) ಪಟ್ಟದಲ್ಲಿ ರಿಲೀಸ್ ಆಗಿದೆ. ಆದರೆ ಸಾಮಾಜಿಕ ಜಾಲತಾಣದಲ್ಲಿ ಹಿಗ್ಗಾಮುಗ್ಗಾ ಟ್ರೋಲ್ ಆಗುತ್ತಿದೆ. ಸಿನಿಮಾ ನೋಡಿ ಪ್ರೇಕ್ಷಕರು ನಿರಾಸೆ ವ್ಯಕ್ತಪಡಿಸುತ್ತಿದ್ದಾರೆ. ನಿರ್ದೇಶಕ ಓಂ ರಾವುತ್(Om raout) ವಿರುದ್ಧ ಅಸಮಾಧಾನ ಹೊರಹಾಕುತ್ತಿದ್ದಾರೆ. ಈ ಬೆನ್ನಲ್ಲೇ ಚಿತ್ರತಂಡದ ಸಂಭಾಷಣೆಕಾರ ಮನೋಜ್ ಮುಂತಶೀರ್(Manoj muntasheer) ಅವರು ಇದೀಗ ಸಿನಿಮಾ ಬಗ್ಗೆ ವರಸೆ ಬದಲಿಸಿದ್ದಾರೆ. ರಾಮಾಯಣಕ್ಕೂ(Ramayana) ಆದಿಪುರುಷ್ ಚಿತ್ರಕ್ಕೂ ಯಾವುದೇ ಸಂಬಂಧವಿಲ್ಲ ಅಂತಾ ಹೇಳಿಕೆ ನೀಡಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಅವರು ಇದನ್ನು ನಾನು ಮೊದಲೇ ಹೇಳಿದ್ದೇ ಮತ್ತು ಈಗಲೂ ಹೇಳುತ್ತೇನೆ. ಈ ಸಿನಿಮಾದ ಹೆಸರು ಆದಿಪುರುಷ್​. ನಾವು ರಾಮಾಯಣವನ್ನು ಸಿನಿಮಾ ಮಾಡಿಲ್ಲ. ಅದರಿಂದ ತುಂಬ ಸ್ಫೂರ್ತಿ ಪಡೆದಿದ್ದೇವೆ. ಡಿಸ್​​ಕ್ಲೈಮರ್​ನಲ್ಲೂ ನಾವು ಅದನ್ನೇ ಹೇಳಿದ್ದೇವೆ’ ಎಂದು ಮನೋಜ್​ ಮುಂತಶೀರ್​ ಹೇಳಿರುವುದಾಗಿ ವರದಿ ಆಗಿದೆ.

ಅಂದಹಾಗೆ ಭಾರೀ ನಿರೀಕ್ಷೆ ಮೂಡಿಸಿದ್ದ ಓಂ ರಾವತ್ (Om Raut) ನಿರ್ದೇಶನದ ‘ಆದಿಪುರುಷ್’ ಸಿನಿಮಾಗೆ ಕೆಟ್ಟ ವಿಮರ್ಶೆ ವ್ಯಕ್ತವಾಗುತ್ತಿದೆ. ಈ ಸಿನಿಮಾದ ಹಲವು ಅಂಶಗಳನ್ನು ಟೀಕಿಸಲಾಗುತ್ತಿದೆ. ರಾಮಾಯಣವನ್ನು ಆಧರಿಸಿದ ಈ ಚಿತ್ರದಲ್ಲಿ ಪ್ರಭಾಸ್ ಅವರು ರಾಮನ ಪಾತ್ರ ಮಾಡಿದ್ದಾರೆ. ಸೀತೆಯಾಗಿ ಕೃತಿ ಸನೋನ್ ಕಾಣಿಸಿಕೊಂಡಿದ್ದಾರೆ. ಆಂಜನೇಯನಾಗಿ ದೇವದತ್ತ ನಾಗೆ ಅವರು ಅಭಿನಯಿಸಿದ್ದಾರೆ. ಲಕ್ಷ್ಮಣನ(Lakshmana) ಪಾತ್ರಕ್ಕೆ ಸನ್ನಿ ಸಿಂಗ್ ಅವರು ಬಣ್ಣ ಹಚ್ಚಿದ್ದಾರೆ. ಸೈಫ್ ಅಲಿ ಖಾನ್ ಅವರು ರಾವಣನಾಗಿ ಅಬ್ಬರಿಸಿದ್ದಾರೆ. ಆದರೆ ರಾಮಾಯಣವನ್ನು ತೋರಿಸಿದ ರೀತಿ ಸರಿಯಾಗಿಲ್ಲ ಎಂದು ಪ್ರೇಕ್ಷಕರು ತಕರಾರು ತೆಗೆದಿದ್ದಾರೆ.

ಪಾತ್ರಗಳನ್ನು ತೋರಿಸಿದ ರೀತಿ, ಸಂಭಾಷಣೆಯ ಶೈಲಿ, ಗ್ರಾಫಿಕ್ಸ್​ ಗುಣಮಟ್ಟ ಸೇರಿದಂತೆ ಅನೇಕ ವಿಚಾರಗಳು ಹಿಗ್ಗಾಮುಗ್ಗಾ ಟ್ರೋಲ್ ಆಗುತ್ತಿದೆ. ಪ್ರೇಕ್ಷಕರು ಟೀಕಿಸುತ್ತಿದ್ದಾರೆ. ಸೈಫ್‌ರನ್ನ ಮಾಡ್ರನ್ ರಾವಣನಂತೆ ತೋರಿಸಿರೋದು ಟ್ರೋಲ್ ಆಗುತ್ತಿದೆ. ಸಿನಿಮಾ ನೈಜವಾಗಿ ತೋರಿಸಿಲ್ಲ ಎಂದು ಟೀಕೆ ಮಾಡಿದ್ದಾರೆ.

ಇನ್ನು ಸಿನಿಮಾಗೇ ರಿಲೀಸ್ ಆಗಿ ಕೆಟ್ಟ ವಿಮರ್ಶೆಗಳು ಬರುತ್ತಿದ್ದರು ಪ್ರಭಾಸ್ ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ. ಸಿನಿಮಾ ರಿಲೀಸ್ ಬಳಿಕ ಪ್ರಭಾಸ್ ಎಲ್ಲೋಗಿದ್ದಾರೆ ಎನ್ನುವುದು ಸಹ ಗೊತ್ತಿಲ್ಲ. ಪ್ರಭಾಸ್​ ಮೌನಕ್ಕೆ ಶರಣಾಗಿದ್ದಾರೆ. ಈ ಬಗ್ಗೆ ಪ್ರಭಾಸ್ ಪ್ರತಿಕ್ರಿಯೆ ನೀಡುತ್ತಾರಾ ಎನ್ನುವುದು ಕುತೂಹಲ ಮೂಡಿಸಿದೆ.

ಇದನ್ನೂ ಓದಿ: Gujarath: ಒಂದು ರೂಪಾಯಿಯನ್ನೂ ಪಡೆಯದೆ 138 ಜೋಡಿಗಳ ವಿಚ್ಛೇದನ ತಡೆದಿದ್ದ ವಕೀಲನಿಗೆ ಹೆಂಡತಿಯಿಂದಲೇ ಡಿವೋರ್ಸ್!!

You may also like

Leave a Comment