Dead woman alive: ಸತ್ತವರು ಎದ್ದು ಬಂದರೆ ಅದು ಪವಾಡವೇ ಸರಿ. ಹಾಗೆಯೇ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ (Women Death) ಎಂದು ಶವ ಪೆಟ್ಟಿಗೆಯಲ್ಲಿ ಇರಿಸಿ ಇನ್ನೇನು ಅಂತ್ಯಕ್ರಿಯೆ ನಡೆಸಬೇಕು ಎನ್ನುವಷ್ಟರಲ್ಲಿ ಮೃತ ಮಹಿಳೆಯೇ ಶವಪೆಟ್ಟಿಗೆಯ ಬಾಗಿಲು (Dead woman alive) ಬಡಿದ ಆಶ್ಚರ್ಯಕರ ಘಟನೆ ಬೆಳಕಿಗೆ ಬಂದಿದೆ.
ಹೌದು, ದಕ್ಷಿಣ ಅಮೇರಿಕದ ಈಕ್ವೆಡಾರ್ ಪ್ರದೇಶದಲ್ಲಿ 76 ವರ್ಷದ ಬೆಲ್ಲಾ ಮೊಂಟೊಯಾ ಎಂಬ ಮಹಿಳೆ ಅನಾರೋಗ್ಯದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಆದರೆ ಅರೋಗ್ಯ ಬಿಗಡಾಯಿಸಿದ ಪರಿಣಾಮ ಕಳೆದ ಏಳು ದಿನಗಳಿಂದ ತೀವ್ರ ನಿಗಾ ಘಟಕದಲ್ಲಿದ್ದರು.
ಆದರೆ ಆಸ್ಪತ್ರೆಯ ಮೂಲಗಳು ಜೂನ್ 8 ರಂದು ಮಹಿಳೆ ಸಾವನ್ನಪ್ಪಿರುವ ಕುರಿತು ಮಾಹಿತಿ ನೀಡಿದೆ. ಇದನ್ನು ನಂಬಿದ ಮಹಿಳೆಯ ಕುಟುಂಬಿಕರು ಅಂತ್ಯಕ್ರಿಯೆಗೆ ತಯಾರಿ ನಡಿಸಿದ್ದಾರೆ.
ಅಂತ್ಯಕ್ರಿಯೆಗೆ ಮಹಿಳೆಯನ್ನು ಶವ ಪೆಟ್ಟಿಗೆಯಲ್ಲಿ ಇರಿಸಿ ಸಿದ್ಧತೆ ನಡೆಸುತ್ತಿದ್ದ ವೇಳೆ ಶವ ಪೆಟ್ಟಿಗೆಯ ಬಾಗಿಲು ಬಡಿದ ಸದ್ದು ಕೇಳಿದೆ ಇದನ್ನು ಗಮನಿಸಿದ ಕುಟುಂಬ ಸದಸ್ಯರು ಶವ ಪೆಟ್ಟಿಗೆ ಬಾಗಿಲು ತೆರೆದಾಗ ಮೃತ ಮಹಿಳೆ ಜೀವಂತವಾಗಿ ಎದ್ದು ಕೂತಿದ್ದಾರೆ.
ಸದ್ಯ ಇದನ್ನು ಕಂಡ ಕುಟುಂಬ ಸದಸ್ಯರಿಗೆ ಒಂದು ಕಡೆ ಖುಷಿ, ಇನ್ನೊಂದು ಕಡೆ ಇದು ಹೇಗೆ ಸಾಧ್ಯ ಎಂಬ ಆತಂಕ ಎದುರಾಗಿದೆ, ಕೂಡಲೆ ಮಹಿಳೆಯನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿದಾಗ ಮಹಿಳೆ ಜೀವಂತವಾಗಿರುವುದು ದೃಢಪಟ್ಟಿದೆ.
ಆದರೆ ಮಹಿಳೆಯ ಅರೋಗ್ಯ ಸ್ಥಿತಿ ಗಂಭೀರವಾಗಿದ್ದ ಪರಿಣಾಮ ಮತ್ತೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಹಿಳೆ ಜೂನ್ 16 ರಂದು ನಿಜವಾಗಲು ಮೃತಪಟ್ಟಿದ್ದಾಗಿ, ಆಸ್ಪತ್ರೆಯ ವೈದ್ಯರು ದೃಢಪಡಿಸಿದ್ದು, ಬಳಿಕ ಜೂನ್ 6 ರಂದು ಅಂತ್ಯಕ್ರಿಯೆಗೆ ತಯಾರಿ ನಡೆಸಿದ್ದ ಸ್ಥಳದಲ್ಲೇ ಅಂತಿಮ ಸಂಸ್ಕಾರ ನಡೆಸಲಾಯಿತು ಕುಟುಂಬಸ್ಥರು ತಿಳಿಸಿದ್ದಾರೆ.
ಇದನ್ನು ಓದಿ: Nalin Kumar Kateel: ಕಾಂಗ್ರೆಸ್ ಸರ್ಕಾರ ಬರೋ ಡಿಸೆಂಬರ್ ತಿಂಗಳಲ್ಲಿ ಪತನ – ಭವಿಷ್ಯ ನುಡಿದ ಅಧ್ಯಕ್ಷ !
