Home » Ramalinga Reddy: ‘ ಮಹಿಳೆಯರು ಹಿಡ್ಕೊಂಡು ಮುರಿಯುತ್ತಿದ್ದಾರೆ ‘ ಹೇಳಿಕೆಗೆ ಮಂತ್ರಿಗಳು ಹೇಳಿದ್ದೇನು ?!

Ramalinga Reddy: ‘ ಮಹಿಳೆಯರು ಹಿಡ್ಕೊಂಡು ಮುರಿಯುತ್ತಿದ್ದಾರೆ ‘ ಹೇಳಿಕೆಗೆ ಮಂತ್ರಿಗಳು ಹೇಳಿದ್ದೇನು ?!

0 comments

Ramalinga Reddy: ಈ ಹಿಂದೆ ಚಾಮರಾಜನಗರದಲ್ಲಿ (Chamarajanagar) ಬಸ್ ನಲ್ಲಿ ರಶ್ ಆಗಿ ಪ್ರಯಾಣಿಕರು ಬಸ್ಸಿನ ಬಾಗಿಲನ್ನೇ ಮುರಿದು ಹಾಕಿದ ಘಟನೆ ನಡೆದಿತ್ತು. ವಾರಾಂತ್ಯ ಹಾಗೂ ಮಣ್ಣೆತ್ತಿನ ಅಮಾವಾಸ್ಯೆ ಹಿನ್ನೆಲೆಯಲ್ಲಿ ಮಲೆ ಮಹದೇಶ್ವರ ಬೆಟ್ಟಕ್ಕೆ ಸಾಕಷ್ಟು ಮಹಿಳೆಯರು ತೆರಳುತ್ತಿದ್ದರು. ಈ ವೇಳೆ ಬಂದ ಬಸ್ ಏರಲು ನೂಕು ನುಗ್ಗಲು ಉಂಟಾಗಿದೆ. ಅಲ್ಲದೇ ಪ್ರಯಾಣಿಕರು ಬಸ್ ಏರುವಾಗ ಬಸ್ಸಿನ ಡೋರ್ ಮುರಿದು ಬಿದ್ದಿದೆ. ಇದರಿಂದಾಗಿ ಕಂಡಕ್ಟರ್ ಪರದಾಡೋ ಪರಿಸ್ಥಿತಿ ಕೂಡ ಉಂಟಾಗಿತ್ತು. ಈ ಬಗ್ಗೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ (Ramalinga Reddy) ಏನು ಹೇಳಿದ್ರು ಗೊತ್ತಾ?

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ (Ramalinga Reddy) ಅವರು, ಕಾಲ ಕಾಲಕ್ಕೆ ಸಾರಿಗೆ ನಿಗಮದಲ್ಲಿ ಬಸ್ ಬದಲಾಯಿಸಬೇಕು. ಈ ಮೊದಲು ಬಿಜೆಪಿ ಸರ್ಕಾರ ಮಾಡಬೇಕಿತ್ತು. ಆ ಕೆಲಸ ಅವರು ಮಾಡಿಲ್ಲ. ಹಾಗಾಗಿ ಇದೀಗ ಆ ಕೆಲಸ ನಾವು ಮಾಡುತ್ತಿದ್ದೇವೆ. ಹದಗೆಟ್ಟ ಬಸ್ ಗಳನ್ನು ಪರಿಶೀಲಿಸಿ, ಹೊಸ ಬಸ್ ಗಳನ್ನು ಬಿಡುತ್ತೇವೆ. ನಾಲ್ಕು ಸಾವಿರ ಹೊಸ ಬಸ್‌ಗಳನ್ನು ಬಿಡಲಾಗುವುದು ಎಂದು ಹೇಳಿದರು.

ಅಲ್ಲದೆ, ಮಹಿಳಾ ಪ್ರಯಾಣಿಕರ ಬಗ್ಗೆ ಮಾತನಾಡಿದ ಸಚಿವರು ವಾರಾಂತ್ಯದಲ್ಲಿ ಎಲ್ಲಾ ಮಹಿಳೆಯರು ಪುಣ್ಯಕ್ಷೇತ್ರಗಳಿಗೆ ಹೋಗಬೇಕು. ಎಲ್ಲಾರು ಕ್ಷೇತ್ರಗಳಿಗೆ ಭೇಟಿ ನೀಡುತ್ತಿದ್ದಾರೆ.
ಆರಾಮಾವಾಗಿ ಬಸ್ ನಲ್ಲಿ ಓಡಾಡಲಿ. ದೇವರ ದರ್ಶನ ಪಡೆಯಲಿ ಎಂದು ಹೇಳಿದರು.

ಇದನ್ನೂ ಓದಿ : Shakthi Scheme : ಮನೇಲಿ ಹೆಂಡ್ತಿ ಅಡುಗೆ ಮಾಡ್ತಿಲ್ಲ, 2 ಸೀರೆ ಹಿಡ್ಕೊಂಡು ‘ ನಾಳೆ ಬರ್ತೆ ‘ ಅಂತ ಧರ್ಮಸ್ಥಳ ಫ್ರೀ ಬಸ್ ಹತ್ತಿದೋಳು ಇವತ್ತಿಗೂ ಪತ್ತೆ ಇಲ್ಲ !

You may also like

Leave a Comment