Home » ಫ್ರೀ ಎಫೆಕ್ಟ್‌ : ಚಾಕಲೇಟ್‌ಗೆ ದುಡ್ಡು ನೀಡದ ಪೋಷಕರ ವಿರುದ್ಧ ಕೋಪಗೊಂಡು, ಫ್ರೀ ಬಸ್‌ ಹತ್ತಿ ಧರ್ಮಸ್ಥಳಕ್ಕೆ ಹೋದ ಸಹೋದರಿಯರು; ಎರಡು ದಿನದ ಬಳಿಕ ಪತ್ತೆ

ಫ್ರೀ ಎಫೆಕ್ಟ್‌ : ಚಾಕಲೇಟ್‌ಗೆ ದುಡ್ಡು ನೀಡದ ಪೋಷಕರ ವಿರುದ್ಧ ಕೋಪಗೊಂಡು, ಫ್ರೀ ಬಸ್‌ ಹತ್ತಿ ಧರ್ಮಸ್ಥಳಕ್ಕೆ ಹೋದ ಸಹೋದರಿಯರು; ಎರಡು ದಿನದ ಬಳಿಕ ಪತ್ತೆ

by Mallika
0 comments
Shakti yojana effect

Shakti yojana effect : ಕಾಂಗ್ರೆಸ್‌ನ ಶಕ್ತಿ ಯೋಜನೆ (Shakti Yojana)ಹೆಣ್ಮಕ್ಕಳಿಗೆ ಭಾರೀ ಲಾಭ ಕೊಟ್ಟಿದೆ. ಎಲ್ಲಿ ನೋಡಿದರೂ ಕೇವಲ ಹೆಣ್ಮಕ್ಕಳು ಬಸ್‌ ಹತ್ತಿ ದೇವಸ್ಥಾನ ಅಂತ ಎಲ್ಲ ಕ್ಷೇತ್ರಗಳಿಗೆ ಹೋಗುವ ಸುದ್ದಿಯೇ ಕಾಣುತ್ತದೆ. ಈಗ ಇಲ್ಲಿ ನಾವು ನೀಡುವ ಸುದ್ದಿಯೊಂದು ನಿಮ್ಮನ್ನು ನಿಜಕ್ಕೂ ಬೆರಗು ಗೊಳಿಸುತ್ತದೆ. ಈ ಫ್ರೀ ಎಫೆಕ್ಟ್‌ ಯಾವ ರೀತಿ ಮಕ್ಕಳು ಉಪಯೋಗಿಸುತ್ತಾರೆ? ಇದರಿಂದ ಆದ ಅನಾಹುತ ಏನು ಎಂಬ ಘಟನೆಯನ್ನು ನಾವಿಲ್ಲಿ ನೀಡಲಿದ್ದೇವೆ.

ಬಸ್‌ಗಳಲ್ಲಿ ನಮಗೆ ಸೀಟು ಸಿಗುತ್ತಿಲ್ಲ ಎಂದು ಒಂದು ಕಡೆ ಪುರುಷರು ಗೋಳಾಡಿದರೆ, ಇತ್ತ ಕಡೆ ತಮ್ಮ ಮಕ್ಕಳು ಕೂಡಾ ನಾಪತ್ತೆಯಾಗಿರುವ (Children Missing) ಬಗ್ಗೆ ಪೋಷಕರೊಬ್ಬರು ಕಣ್ಣಿರು ಹಾಕಿರುವ ಘಟನೆ ನಡೆದಿದೆ.

ಈ ಉಚಿತ ಬಸ್‌ ಯೋಜನೆ (Shakti yojana effect) ಬೆಂಗಳೂರಿನ ಕೋಣನಕುಂಟೆ ಪೊಲೀಸ್‌ ಠಾಣಾ ವ್ಯಾಪ್ತಿಯ ಪೋಷಕರಿಗೆ ಮಾತ್ರ ಭಾರೀ ಸಂಕಷ್ಟ ತಂದಿದೆ. ವಿಷಯ ಏನೆಂದರೆ, ತಂದೆ ಚಾಕಲೇಟಿಗೆ ಹಣ ನೀಡಿಲ್ಲ ಎಂಬ ಕಾರಣಕ್ಕೆ 10ನೇ ಮತ್ತು 9ನೇ ತರಗತಿ ಕಲಿಯುತ್ತಿದ್ದ ಇಬ್ಬರು ಪುತ್ರಿಯರು ಮನೆ ಬಿಟ್ಟು ಹೋಗಿದ್ದಾರೆ. ತಮ್ಮ ಇಬ್ಬರು ಹೆಣ್ಣು ಮಕ್ಕಳು ನಾಪತ್ತೆಯಾಗಿದ್ದು ಕಂಡು ಪೋಷಕರು ಕಂಗಾಲಾಗಿದ್ದಾರೆ. ತಂದೆ-ತಾಯಿ ಮೇಲಿನ ಕೋಪಕ್ಕೆ ಹೆಣ್ಣು ಮಕ್ಕಳು ಕಾಂಗ್ರೆಸ್‌ನ ಫ್ರೀ ಬಸ್‌ ಯೋಜನೆಯ ಮೂಲಕ ಬಸ್‌ ಹತ್ತಿ ಧರ್ಮಸ್ಥಳಕ್ಕೆ ತೆರಳಿದ್ದಾರೆ.

ತನ್ನ ಪೋಷಕರು ಚಾಕಲೇಟ್‌ಗೆ ಹಣ ನೀಡಿಲ್ಲವೆಂಬ ಸಿಟ್ಟಿನಿಂದ ಅಕ್ಕ ತಂಗಿಯರಿಬ್ಬರು ಈ ನಿರ್ಧಾರ ತೆಗೆದುಕೊಂಡಿದ್ದಾರೆ. ತಂದೆ ಹಣ ಕೊಡದೆ ಮಕ್ಕಳ ಮೇಲೆ ರೇಗಾಡಿದ್ದು, ಇದರಿಂದ ಕೋಪಗೊಂಡ ಇಬ್ಬರು ಪುತ್ರಿಯರು ಬಸ್‌ ಹತ್ತಿ ಫ್ರೀಯಾಗಿ ಧರ್ಮಸ್ಥಳಕ್ಕೆ ಹೋಗಿದ್ದಾರೆ. ನಂತರ ಗಾಬರಿಗೊಂಡ ಪೋಷಕರು ಕೋಣನಕುಂಟೆ ಪೊಲೀಸ್‌ ಠಾಣೆಯಲ್ಲಿ ಮಿಸ್ಸಿಂಗ್‌ ಕಂಪ್ಲೇಂಟ್‌ ಕೊಟ್ಟಿದ್ದಾರೆ. ನಂತರ ಹುಡುಕಾಡಿದ ಪೊಲೀಸರು ಮಕ್ಕಳು ನಾಪತ್ತೆಯಾದ ಎರಡು ದಿನದ ಬಳಿಕ ಅಂದರೆ ಜೂನ್‌ 18 ರಂದು ಧರ್ಮಸ್ಥಳದಲ್ಲಿ ಈ ಇಬ್ಬರನ್ನು ಪತ್ತೆ ಹಚ್ಚಿದ್ದಾರೆ.

ಇದನ್ನೂ : 40 ಅಡಿ ಆಳದ ಬಾವಿಗೆ ಕೇವಲ ಹಗ್ಗ ಬಳಸಿ ಇಳಿದು ಬೆಕ್ಕಿನ ಮರಿ ರಕ್ಷಿಸಿದ ಪೇಜಾವರ ಸ್ವಾಮೀಜಿ

You may also like

Leave a Comment