Home » Sprouted Wheat Benefits: ಮೊಳಕೆಯೊಡೆದ ಗೋಧಿ ಸೇವನೆಯಲ್ಲಿ ಅಡಗಿದೆ ಆರೋಗ್ಯದ ರಹಸ್ಯ! ಏನೆಲ್ಲಾ‌ ಪ್ರಯೋಜನವಿದೆ ಗೊತ್ತಾ?

Sprouted Wheat Benefits: ಮೊಳಕೆಯೊಡೆದ ಗೋಧಿ ಸೇವನೆಯಲ್ಲಿ ಅಡಗಿದೆ ಆರೋಗ್ಯದ ರಹಸ್ಯ! ಏನೆಲ್ಲಾ‌ ಪ್ರಯೋಜನವಿದೆ ಗೊತ್ತಾ?

0 comments
Sprouted Wheat Benefits

Sprouted Wheat Benefits: ದೇಹವನ್ನು ಸದೃಢವಾಗಿ ಮತ್ತು ಆರೋಗ್ಯಕರವಾಗಿ ಇರಿಸಿಕೊಳ್ಳಬೇಕಾದರೆ, ಆಹಾರದಲ್ಲಿ ಧಾನ್ಯಗಳನ್ನು ಒಳಗೊಂಡಿರಬೇಕು ಎಂದು ಪೌಷ್ಟಿಕತಜ್ಞರು ಸಲಹೆ ನೀಡುತ್ತಾರೆ. ಹೌದು, ಮೊಳಕೆಯೊಡೆದ ಕಾಳುಗಳನ್ನು (Sprouted) ‘ಸೂಪರ್‌ಫುಡ್’ (Super Food)ಎಂದು ಕರೆಯಲಾಗುತ್ತದೆ. ಮೊಳಕೆಕಾಳುಗಳು ಒಳಗೊಂಡಿರುವ ಅನೇಕ ಉಪಯುಕ್ತ ಅಂಶಗಳಿಂದ ದೇಹಕ್ಕೆ ಸಾಕಷ್ಟು ಪ್ರಯೋಜನವನ್ನು (Benefits) ನೀಡುತ್ತದೆ.

ಮುಖ್ಯವಾಗಿ ಮೊಳಕೆಯೊಡೆದ ಗೋಧಿ ಕೂಡ ಆರೋಗ್ಯವಾಗಿರಲು ಸಹಾಯ (Sprouted Wheat Benefits) ಮಾಡುತ್ತದೆ. ಇದು ಅನೇಕ ಪ್ರಯೋಜನಗಳನ್ನು ಹೊಂದಿದೆ, ಅದರ ಬಗ್ಗೆ ಮಾಹಿತಿ ಇಲ್ಲಿದೆ.

ನೀವು ಮೊಳಕೆಯೊಡೆದ ಗೋಧಿಯನ್ನು ಸೇವಿಸುವುದರಿಂದ ತೂಕ ನಿಯಂತ್ರಿಸಬಹುದು. ಬೆಳಗಿನ ಉಪಾಹಾರದಲ್ಲಿ ಮೊಳಕೆಯೊಡೆದ ಗೋಧಿ ತಿನ್ನುವುದು ಉತ್ತಮ. ಇದರಿಂದ ಶಕ್ತಿಯು ದಿನವಿಡೀ ಹಾಗೇ ಉಳಿಯುತ್ತದೆ. ದೀರ್ಘಕಾಲ ಹಸಿವನ್ನು ಅನುಭವಿಸುವುದಿಲ್ಲ.ಇದನ್ನು ಸೇವಿಸುವುದರಿಂದ ಕ್ರಮೇಣ ತೂಕವು ಕಡಿಮೆಯಾಗಲು ಪ್ರಾರಂಭಿಸುತ್ತದೆ.

ಅಜೀರ್ಣಕ್ಕೆ ಸಂಬಂಧಿಸಿದ ಸಮಸ್ಯೆಗಳಿದ್ದರೆ ಗೋಧಿಯನ್ನು ದೈನಂದಿನ ಆಹಾರದಲ್ಲಿ ಸೇರಿಸಬೇಕು. ಏಕೆಂದರೆ ಇದು ಹೆಚ್ಚು ಫೈಬರ್ ಅನ್ನು ಹೊಂದಿರುತ್ತದೆ. ಇದು ಮಲಬದ್ಧತೆ, ಆಮ್ಲೀಯತೆ, ಗ್ಯಾಸ್ ಮತ್ತು ಜೀರ್ಣಕಾರಿ ಸಮಸ್ಯೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ.

ವಯಸ್ಸು ಹೆಚ್ಚಾದಂತೆ ಮೂಳೆಗಳು ಮೊದಲಿನಂತೆ ಗಟ್ಟಿಯಾಗಿ ಉಳಿಯದೇ ಕ್ರಮೇಣ ದೇಹದಲ್ಲಿ ದೌರ್ಬಲ್ಯ ಬರಲು ಆರಂಭಿಸುತ್ತದೆ. ಇದನ್ನು ತಪ್ಪಿಸಲು ಬೆಳಗ್ಗೆ ಎದ್ದು ಮೊಳಕೆ ಬರಿಸಿದ ಗೋಧಿಯನ್ನು ತಿನ್ನಬೇಕು. ಏಕೆಂದರೆ ಹೀಗೆ ಮಾಡುವುದರಿಂದ ಮೂಳೆಗಳಿಗೆ ಅಗಾಧವಾದ ಶಕ್ತಿ ಬರುತ್ತದೆ. ಇದು ಮೂಳೆಯ ಆರೋಗ್ಯಕ್ಕೆ ಅಗತ್ಯವಾದ ಪ್ರಮಾಣದಲ್ಲಿ ಕಂಡುಬರುತ್ತದೆ.

ಮೊಳಕೆಯೊಡೆದ ಗೋಧಿಯನ್ನು ಸೇವಿಸುವುದರಿಂದ, ನಿಮ್ಮ ಚರ್ಮ ಮತ್ತು ಕೂದಲಿನಲ್ಲಿ ನೀವು ವಿಭಿನ್ನ ವ್ಯತ್ಯಾಸವನ್ನು ನೋಡಬಹುದು. ಈ ಆರೋಗ್ಯಕರ ಆಹಾರದ ದೈನಂದಿನ ಸೇವನೆಯು ನಿಮ್ಮ ಮೂತ್ರಪಿಂಡಗಳು, ಗ್ರಂಥಿಗಳು ಮತ್ತು ಜೀರ್ಣಾಂಗ ವ್ಯವಸ್ಥೆಯನ್ನು ಬಲಪಡಿಸುತ್ತದೆ ಮತ್ತು ನಿಮ್ಮ ರಕ್ತದ ಪ್ಲೇಟ್‌ಲೆಟ್ ಸಂಖ್ಯೆಯನ್ನು ಹೆಚ್ಚಿಸುತ್ತದೆ.

ಇದನ್ನೂ ಓದಿ: Half Day Schools: ವಿದ್ಯಾರ್ಥಿಗಳಿಗೆ ಜೂನ್ 24 ರವರೆಗೆ ಅರ್ಧ ದಿನ ಮಾತ್ರ ಶಾಲೆ !

You may also like

Leave a Comment