Congress Guarantee: ರಾಜ್ಯ ಕಾಂಗ್ರೆಸ್ ಪಕ್ಷ (Congress Guarantee) ಜಾರಿಗೆ ತಂದಿರುವ 5 ಗ್ಯಾರಂಟಿ (5 guarantees) ಯೋಜನಾ ಪ್ರಯೋಜನ ಪಡೆಯಲು ಇದೀಗ ಜನರು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಮುಗಿಬಿದ್ದಿದ್ದಾರೆ.
ಆದರೆ ಈ ಸಂದರ್ಭವನ್ನೇ ಬಳಸಿಕೊಳ್ಳಲು ಸೈಬರ್ ಕಳ್ಳರು ಹೊಂಚು ಹಾಕಿ ಕಾಯುತ್ತಿದ್ದಾರೆ. ಹೌದು, ಕಾಂಗ್ರೆಸ್ ಗ್ಯಾರಂಟಿ ಯೋಜನೆ ಯ ಮೇಲೆ ಸೈಬರ್ ಕಳ್ಳರ ಕಣ್ಣು ಬೀಳುತ್ತಾ ಅನ್ನೋ ಅನುಮಾನ ಬಲವಾಗಿ ಶುರುವಾಗಿದೆ.
ಇದೀಗ ಕಾಂಗ್ರೆಸ್ ಸರ್ಕಾರದ ಗೃಹ ಜ್ಯೋತಿ ಉಚಿತ ವಿದ್ಯುತ್ ಯೋಜನೆಯ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ತಾಂತ್ರಿಕ ಸಮಸ್ಯೆ ಅನ್ನೋದು ಆರಂಭದಲ್ಲೇ ಅಡ್ಡಗಾಲಿಟ್ಟಿದೆ. ಬೆಂಗಳೂರು ಸೇರಿದಂತೆ ರಾಜ್ಯದ ನಾನಾ ಕಡೆಗಳಲ್ಲಿ ಸಮಸ್ಯೆಯಾಗಿದ್ದು, ಸೇವಾ ಸಿಂಧು ಪೋರ್ಟಲ್ ಕ್ರ್ಯಾಶ್ ಆಗಿದೆಯಾ ಅನ್ನೋ ಗೊಂದಲ ಆಗಿದೆ.
ಜೂನ್ 18ರಿಂದ ಗೃಹ ಜ್ಯೋತಿ ಅರ್ಜಿ ಸಲ್ಲಿಕೆ ಶುರುವಾಗಿದೆ. ಹೀಗಾಗಿ ತರಾತುರಿಯಲ್ಲಿ ಅರ್ಜಿ ಸಲ್ಲಿಸಲು ಬೆಂಗಳೂರು ಒನ್, ಎಸ್ಕಾಂ ಕಚೇರಿಗಳಿಗೆ ಜನ ಮುಗಿ ಬೀಳ್ತಿದ್ದಾರೆ.
ಆದರೆ, ಮೊಬೈಲ್ ಸೇವಾಸಿಂಧು ಕೇಂದ್ರದ ಮೂಲಕ ಸೈಬರ್ ಕ್ರೈಂ ಸಾಧ್ಯತೆ ತಪ್ಪಿಸೋದು, ಅಲ್ಲದೆ ಡೇಟಾ ಅಪ್ಲೋಡ್ ಮಾಡಲು 2-3 ಸರ್ವರ್ನಲ್ಲಿ ಅವಕಾಶ ನೀಡಬೇಕು.
ಒಟ್ಟಿನಲ್ಲಿ ಆನ್ಲೈನ್ ಮಾಹಿತಿಗಳ ಸಂರಕ್ಷಣೆ ಬಗ್ಗೆಯೂ ಕ್ರಮವಹಿಸಬೇಕು. ದತ್ತಾಂಶ ಸೋರಿಕೆಯಾಗದಂತೆ ನಿಗಾ ಇಡುವುದರ ಜೊತೆಗೆ, ನೋಂದಣಿ ಆದ ವ್ಯಕ್ತಿಗೆ ಒಟಿಪಿ ಬಗ್ಗೆಯೂ ಅರಿವು ಮೂಡಿಸಬೇಕು. ಅಲ್ಲದೆ ಗ್ರಾಮೀಣ ಭಾಗದ ಜನರಿಗೆ ಅರಿವು ಮೂಡಿಸುವುದು ಸೂಕ್ತ ಎಂದು ಸಲಹೆ ನೀಡಲಾಗಿದೆ.
ಇದನ್ನೂ ಓದಿ: ಗ್ರಾಹಕರ ಕೈ ಸುಡುತ್ತಿರುವ ತರಕಾರಿ ಬೆಲೆ! ಕಂಗಾಲಾದ ಜನ
