Teachers Job: ಶಿಕ್ಷಕ ಹುದ್ದೆ ಹುಡುಕುತ್ತಿರುವವರಿಗೆ ಸುವರ್ಣ ಅವಕಾಶ ಒಂದು ಇಲ್ಲಿದೆ. ಅಲ್ಪಸಂಖ್ಯಾತರ ಕಲ್ಯಾಣ ಇಲಾಖಾ ವತಿಯಿಂದ ಸೋಮವಾರಪೇಟೆ ತಾಲ್ಲೂಕು ಖ್ಯಾತೆ ಗ್ರಾಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಅಬ್ದುಲ್ ಡಾ.ಎಪಿಜೆ ಕಲಾಂ ವಸತಿ ಶಾಲೆ (ಸಿಬಿಎಸ್‌ಇ) (ಆಂಗ್ಲ ಮಾಧ್ಯಮ) ಇಲ್ಲಿಗೆ 2023-24 ಸಾಲಿನ ರಸಾಯನ ಶಾಸ್ತ್ರ ಜೀವಶಾಸ್ತ್ರ ಹಾಗೂ ಗಣಿತ ವಿಷಯಗಳಿಗೆ ಸಂಬಂಧಿಸಿದಂತೆ ಅತಿಥಿ ಉಪನ್ಯಾಸಕರ ಹುದ್ದೆಗೆ ಅರ್ಜಿ (Teachers Job) ಆಹ್ವಾನಿಸಲಾಗಿದೆ.
ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗೆ ಪ್ರಾಂಶುಪಾಲರು, ಡಾ.ಎಪಿಜೆ ಅಬ್ದುಲ್ ಕಲಾಂ ವಸತಿ ಶಾಲೆ, ಖ್ಯಾತೆ ಗ್ರಾಮ, ಕೊಡ್ಲಿಪೇಟೆ, ಸೋಮವಾರಪೇಟೆ ತಾಲ್ಲೂಕು ದೂ. ಸಂಖ್ಯೆ 7676473767/ 9632746411 ಸಂಪರ್ಕಿಸಬಹುದು ಎಂದು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಬಿ.ಎಂ.ದಿವಾಕರ ಅವರು ತಿಳಿಸಿದ್ದಾರೆ.
