Home » Indurikar Maharaj: ‘ ಸಮ ‘ ಮಾಡಿದರೆ ಗಂಡು ಮಗು, ಉಲ್ಟಾ ಮಾಡಿದರೆ ಹೆಣ್ಣು ಮಗುವಾಗತ್ತೆ ಎಂದ ಖ್ಯಾತ ಕೀರ್ತನೆಗಾರ !

Indurikar Maharaj: ‘ ಸಮ ‘ ಮಾಡಿದರೆ ಗಂಡು ಮಗು, ಉಲ್ಟಾ ಮಾಡಿದರೆ ಹೆಣ್ಣು ಮಗುವಾಗತ್ತೆ ಎಂದ ಖ್ಯಾತ ಕೀರ್ತನೆಗಾರ !

0 comments
Indurikar Maharaj

Indurikar Maharaj: ‘ ಸಮ ‘ ಮಾಡಿದರೆ ಗಂಡು ಮಗು, ಉಲ್ಟಾ ಮಾಡಿದರೆ ಹೆಣ್ಣು ಮಗುವಾಗತ್ತೆ ಎಂದು ಖ್ಯಾತ ಕೀರ್ತನೆಗಾರ ಹೇಳಿದ್ದಾರೆ. ಹೌದು, ಗಂಡು ಮಗು ಪಡೆಯಲು ಸಮಸಂಖ್ಯೆಯ ದಿನದಂದು ಪತಿ -ಪತ್ನಿ ದೈಹಿಕ ಸಂಪರ್ಕ ನಡೆಸಬೇಕು ಎಂದು ಜನಪ್ರಿಯ ಕೀರ್ತನೆಕಾರ ನಿವೃತ್ತಿ ಮಹಾರಾಜ್ (Indurikar Maharaj) ಅವರು ಸಾರ್ವಜನಿಕವಾಗಿ ಹೇಳಿಕೆ ನೀಡಿದ್ದರು. ಈ ಹೇಳಿಕೆ ಭಾರೀ ಟೀಕೆಗೆ ಗುರಿಯಾಗಿತ್ತು. ಅಲ್ಲದೆ, ಮಹಾರಾಜ್ ವಿರುದ್ಧ ಪ್ರಕರಣವೂ ದಾಖಲಾಗಿತ್ತು. ಇದೀಗ ಈ ಪ್ರಕರಣವನ್ನು ರದ್ದುಪಡಿಸಲು ಬಾಂಬೆ ಹೈಕೋರ್ಟ್‌ ನಿರಾಕರಿಸಿದೆ.

ಗಂಡು ಮಗುವನ್ನು ಪಡೆಯುವ ತಂತ್ರಗಳನ್ನು ಸಾರ್ವಜನಿಕ ಪ್ರವಚನಗಳಲ್ಲಿ ಹೇಳುವುದು ಗರ್ಭಧಾರಣೆಯ ಪೂರ್ವ ಮತ್ತು ಪ್ರಸವಪೂರ್ವ ಲಿಂಗ ಆಯ್ಕೆಯ ನಿಷೇಧ ಕಾಯಿದೆ (ಪಿಸಿಪಿಎನ್‌ಡಿಟಿ ಕಾಯಿದೆ) ಅಡಿಯಲ್ಲಿ ಅಪರಾಧವಾಗಿದೆ. ಈ ರೀತಿಯ ಕಾರ್ಯ ‘ಲಿಂಗ’ ಪತ್ತೆಗಾಗಿ ನೀಡುವ ಜಾಹೀರಾತಿಗೆ ಸಮವಾಗಿದೆ ಎಂದು ನ್ಯಾಯಾಲಯ ಹೇಳಿದೆ.

ಕೀರ್ತನೆಕಾರನು ಈ ರೀತಿಯ ಉಪನ್ಯಾಸವನ್ನು ವೈದ್ಯಕೀಯ ವಿದ್ಯಾರ್ಥಿಗಳಿಗೆ ನೀಡುತ್ತಿದ್ದರು. ಹಾಗಾಗಿ ಈ ಆರೋಪಿಯ ವಿರುದ್ಧ ಯಾವುದೇ ಪ್ರಕರಣವಿಲ್ಲ ಎಂದು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರು ಜೂನ್ 16ರಂದು ನೀಡಿದ ಆದೇಶವನ್ನು ಹೈಕೋರ್ಟ್ ರದ್ದುಪಡಿಸಿದೆ.

ಕೀರ್ತನೆಕಾರ ಇದು ಶೈಕ್ಷಣಿಕ ಉದ್ದೇಶಕ್ಕಾಗಿ ಮಾಡಿದ್ದು ಎಂದು ವಾದಿಸಿದರು. ಆದರೆ, ಶೈಕ್ಷಣಿಕ ಉದ್ದೇಶಕ್ಕಾಗಿ, ಅಧ್ಯಯನಕ್ಕಾಗಿ ಪುಸ್ತಕವನ್ನು ಬರೆಯುವುದನ್ನು ಈ ಪ್ರಕರಣದೊಂದಿಗೆ ಹೋಲಿಸಲಾಗುವುದಿಲ್ಲ. ಜ್ಞಾನವನ್ನು ನೀಡುವುದು ಯಾವಾಗಲೂ ಜ್ಞಾನವನ್ನು ಪಡೆಯುವ ನಿರ್ದಿಷ್ಟ ವ್ಯಕ್ತಿಗಳಿಗೆ ನಿರ್ದಿಷ್ಟ ರೀತಿಯಲ್ಲಿ ಮಾಡಬೇಕು ಎಂದ ಬಾಂಬೆ ಹೈಕೋರ್ಟ್ ಕೀರ್ತನೆಕಾರ ನಿವೃತ್ತಿ ಮಹಾರಾಜ್ (Nivruthi Maharaj) ವಿರುದ್ಧದ ಪ್ರಕರಣವನ್ನು ರದ್ದುಗೊಳಿಸಿದ ಸೆಷನ್ಸ್ ನ್ಯಾಯಾಲಯದ (Sessions Court) ತೀರ್ಪನ್ನು ರದ್ದುಗೊಳಿಸಿತು.

ಇದನ್ನೂ ಓದಿ: SBI: ಯಾವುದೇ ಗ್ಯಾರಂಟಿ ಅಗತ್ಯ ಇಲ್ಲದೆ 1.6 ಲಕ್ಷ ರೂಪಾಯಿ ಸಾಲ, ರೈತರಿಗೆ 3 ಲಕ್ಷದ ತನಕ ಸಾಲ, ಕೇಂದ್ರದಿಂದ ಘೋಷಣೆ !

You may also like

Leave a Comment