Home » Rachitha Mahalakshmi: ಸೂರ್ಯಕಾಂತಿ ಧಾರಾವಾಹಿ ನಟಿ ರಚಿತ ಮಹಾಲಕ್ಷ್ಮಿ ದಾಂಪತ್ಯದಲ್ಲಿ ಬಿರುಗಾಳಿ! ಪತಿ ದಿನೇಶ್‌ ಗೋಪಾಲಸ್ವಾಮಿ ವಿರುದ್ಧ ದೂರು ದಾಖಲು !

Rachitha Mahalakshmi: ಸೂರ್ಯಕಾಂತಿ ಧಾರಾವಾಹಿ ನಟಿ ರಚಿತ ಮಹಾಲಕ್ಷ್ಮಿ ದಾಂಪತ್ಯದಲ್ಲಿ ಬಿರುಗಾಳಿ! ಪತಿ ದಿನೇಶ್‌ ಗೋಪಾಲಸ್ವಾಮಿ ವಿರುದ್ಧ ದೂರು ದಾಖಲು !

0 comments
Rachitha Mahalakshmi

Rachitha Mahalakshmi: ಇತ್ತೀಚೆಗೆ ಸೆಲೆಬ್ರಿಟಿಗಳ ದಾಂಪತ್ಯದಲ್ಲಿ ಸಣ್ಣ ಮನಸ್ತಾಗಳು ಕೂಡ ಬೀದಿ ರಂಪ ಆಗುತ್ತಿದೆ. ಇದೀಗ ತಮಿಳು ಕಿರುತೆರೆಯಲ್ಲಿ ಸೆಟಲ್‌ ಆಗಿರುವ ಬೆಂಗಳೂರಿನ ರಚಿತ ಮಹಾಲಕ್ಷ್ಮಿ (Rachitha Mahalakshmi) ವೈಯಕ್ತಿಕ ಜೀವನದಲ್ಲಿ ಬಿರುಗಾಳಿ ಎದ್ದಿದೆ.

ಹೌದು, ಕೆಲವು ದಿನಗಳಿಂದ ಪತಿಯಿಂದ ದೂರ ವಾಸಿಸುತ್ತಿದ್ದ ರಚಿತ ಮಹಾಲಕ್ಷ್ಮಿ ಈಗ ಪತಿ ದಿನೇಶ್‌ ವಿರುದ್ಧ ಜೂನ್‌ 21 ರಾತ್ರಿ ಚೆನ್ನೈ ಮಂಗಾಡು ಪೊಲೀಸ್‌ ಠಾಣೆಗೆ ತೆರಳಿ, ಪತಿ ದಿನೇಶ್‌ ಗೋಪಾಲಸ್ವಾಮಿ ವಿರುದ್ಧ ದೂರು ಸಲ್ಲಿಸಿದ್ದಾರೆ. ದಿನೇಶ್‌ ನನಗೆ ಅಸಭ್ಯ ಸಂದೇಶಗಳನ್ನು ಕಳಿಸುತ್ತಿದ್ದಾರೆ. ಜೀವ ಬೆದರಿಕೆ ಕೂಡಾ ಒಡ್ಡಿದ್ದಾರೆ ಎಂದು ಆರೋಪಿಸಿದ್ದಾರೆ.

ಮುಖ್ಯವಾಗಿ ರಚಿತ ಮಹಾಲಕ್ಷ್ಮಿ ಕೆರಿಯರ್‌ ಆರಂಭಿಸಿದ್ದು ಕನ್ನಡ ಕಿರುತೆರೆ ಮೂಲಕ. ಆದರೆ ಕನ್ನಡದಲ್ಲಿ ನಟಿಸಿದ್ದು ಕೆಲವೇ ಕೆಲವು ಧಾರಾವಾಹಿ ಹಾಗೂ ಸಿನಿಮಾಗಳು. ಅಷ್ಟರಲ್ಲಿ ಅವರಿಗೆ ತಮಿಳಿನಲ್ಲಿ ಉತ್ತಮ ಅವಕಾಶ ದೊರೆತ ಕಾರಣ ಚೆನ್ನೈಗೆ ಹೋದರು. ಅಲ್ಲಿ ತನ್ನ ಸಹನಟ ದಿನೇಶ್‌ ಗೋಪಾಲಸ್ವಾಮಿ ಅವರನ್ನು ಪ್ರೀತಿಸಿ ಮದುವೆಯಾದರು. ಆದರೆ ಈ ದಂಪತಿ ಈಗ ಬೇರೆ ಬೇರೆ ವಾಸಿಸುತ್ತಿದ್ದಾರೆ.

ತಮಿಳು ಧಾರಾವಾಹಿ ಸಹನಟನನ್ನು ಪ್ರೀತಿಸಿ ಮದುವೆ ಆಗಿದ್ದ ನಟಿ
ಕನ್ನಡದಲ್ಲಿ ‘ಮೇಘ ಮಂದಾರ’ ಧಾರಾವಾಹಿ ಮೂಲಕ ರಚಿತ ಮಹಾಲಕ್ಷ್ಮಿ ಆಕ್ಟಿಂಗ್‌ ಕರಿಯರ್‌ ಆರಂಭಿಸಿದರು. ಗೀತಾಂಜಲಿ, ಸೂರ್ಯಕಾಂತಿ, ಸುಪ್ರಭಾತ, ಸವಿಗನಸು ಸೇರಿ ಅನೇಕ ಧಾರಾವಾಹಿಗಳಲ್ಲಿ ನಟಿಸಿದ್ದಾರೆ.

2011 ರಲ್ಲಿ ವಿಜಯ್‌ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ ‘ಪಿರಿವೊಮ್‌ ಸಂದಿಪೊಮ್‌’ ಧಾರಾವಾಹಿ ಮೂಲಕ ತಮಿಳಿಗೆ ಬಂದರು. 2013 ರಲ್ಲಿ ಮದುವೆ ಆದರು. ಈ ದಂಪತಿಗೆ ಮಕ್ಕಳು ಇಲ್ಲ. ಇತ್ತೀಚೆಗೆ ರಚಿತ ತಮಿಳು ಬಿಗ್‌ ಬಾಸ್‌ ಸೀಸನ್‌ 6ರಲ್ಲಿ ಕೂಡಾ ಸ್ಪರ್ಧಿಯಾಗಿ ಭಾಗವಹಿಸಿ ಮಿಂಚಿದ್ದರು. ಇನ್ನು ನನಗೆ ಮಗುವೊಂದನ್ನು ದತ್ತು ಪಡೆಯುವ ಆಸೆ, ಆದರೆ ಅದಕ್ಕೆ ಆರ್ಥಿಕವಾಗಿ ಇನ್ನೂ ಫಿಟ್‌ ಆಗಬೇಕು ಎಂದು ರಚಿತ ಮಹಾಲಕ್ಷ್ಮಿ ಬಿಗ್‌ಬಾಸ್ ನಲ್ಲಿ ಹೇಳಿದ್ದರು.

ಇನ್ನು ರಚಿತ ಸ್ನೇಹಿತೆ, ಡಬ್ಬಿಂಗ್‌ ಕಲಾವಿದೆ ಜೀಜಿ ಕೂಡಾ ದಿನೇಶ್‌ ವಿರುದ್ಧ ದೂರು ದಾಖಲಿಸಿದ್ದಾರೆ. ಆಕೆ ಸಲಹೆ ನೀಡಿದ್ದರಿಂದಲೇ ಪತ್ನಿ ನನ್ನಿಂದ ದೂರಾದಳು ಎಂದು ದಿನೇಶ್‌ ನನ್ನ ವಿರುದ್ಧ ಸುಳ್ಳು ಆರೋಪ ಮಾಡಿರುವುದಾಗಿ ಜೀಜಿ ದೂರು ನೀಡಿದ್ದಾರೆ.

ಇದನ್ನೂ ಓದಿ: ವಿಶ್ವದ ಅತಿ ದೊಡ್ಡ ಖಾಸಗಿ ನಿವಾಸ ಅಂಬಾನಿ ಮನೆ ಅಲ್ಲ! ಮತ್ಯಾರದು?

You may also like

Leave a Comment