Home » Flight Ticket Price Increase: ದುಬೈ-ಮಂಗಳೂರು ವಿಮಾನ ಟಿಕೆಟ್‌ ದರ ಭಾರೀ ಹೆಚ್ಚಳ ; ಎಷ್ಟಿದೆ ಸಿಂಗಲ್‌ ವೇ ಪ್ರಯಾಣ ದರ ?

Flight Ticket Price Increase: ದುಬೈ-ಮಂಗಳೂರು ವಿಮಾನ ಟಿಕೆಟ್‌ ದರ ಭಾರೀ ಹೆಚ್ಚಳ ; ಎಷ್ಟಿದೆ ಸಿಂಗಲ್‌ ವೇ ಪ್ರಯಾಣ ದರ ?

0 comments
Flight Ticket Price Increase

Flight Ticket Price Increase: ದುಬೈ – ಮಂಗಳೂರು (dubai-mangaluru) ವಿಮಾನದ ಟಿಕೆಟ್‌ ದರ ಭಾರೀ ದುಬಾರಿಯಾಗಿದೆ (Flight Ticket Price Increase). ಬಡ, ಮಧ್ಯಮ ವರ್ಗದ ಜನರು ದುಬೈನಿಂದ ಮಂಗಳೂರಿಗೆ ತೆರಳುವುದು ಕಷ್ಟಕರವಾಗಿದೆ. ಅಷ್ಟಕ್ಕೂ ಟಿಕೆಟ್ ದರ (dubai-mangaluru ticket price) ಎಷ್ಟು ಗೊತ್ತಾ? ಸಿಂಗಲ್‌ ವೇ ಪ್ರಯಾಣ ದರ 50 ಸಾವಿರ ದಾಟಿದೆ.

ಸಾಮಾನ್ಯವಾಗಿ ದುಬೈಯಲ್ಲಿ ರಜೆ ಇರುವಾಗ ವಿಮಾನದ ಟಿಕೆಟ್‌ ದರ ಹೆಚ್ಚಾಗುತ್ತದೆ. ಪ್ರವಾಸಕ್ಕೆ ಹೆಚ್ಚಿನ ಜನರು ಈ ವೇಳೆ ಪ್ರಯಾಣಿಸುತ್ತಾರೆ. ಹಾಗೂ ನೇರ ಪ್ರಯಾಣಕ್ಕೆ ಎರಡು ವಿಮಾನಗಳು ಮಾತ್ರ ಇದೆ. ಸದ್ಯ ಮಂಗಳೂರು-ದುಬೈ ಮಧ್ಯೆ ನೇರ ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ ಮತ್ತು ಇಂಡಿಗೋ ವಿಮಾನ ಮಾತ್ರವಿದೆ. ಈ ಎರಡೂ ಕಾರಣಗಳಿಂದ ಟಿಕೆಟ್ ದರ ಹೆಚ್ಚಾಗುತ್ತದೆ. ಆದರೆ, ಈ ಬಾರಿ ಮಿತಿಮೀರಿ ಹೆಚ್ಚಿಸಲಾಗಿದೆ ಎಂದು ಹೇಳಲಾಗಿದೆ. ಇದೀಗ ಒಬ್ಬರಿಗೆ ವಿಮಾನ ಟಿಕೆಟ್‌ ದರ 50 ಸಾವಿರಕ್ಕಿಂತಲೂ ಹೆಚ್ಚಿದೆ.

ಜೂನ್ 25ರಂದು ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ನಲ್ಲಿ (Air India express) ಒಬ್ಬರಿಗೆ ಒನ್‌ ವೇ ವಿಮಾನದ ಟಿಕೆಟ್‌ ದರ 53,887 ರೂ., ಜೂನ್ 26ರಂದು 50,471 ರೂ., ಇಂಡಿಗೊ ವಿಮಾನದಲ್ಲಿ (indigo flight) ಜೂನ್ 27ರಂದು 50,582 ರೂ., ಜೂನ್ 28ರಂದು 52,000 ದರವಿದೆ. ಒಬ್ಬರಿಗೆ 50 ಸಾವಿರ ರೂ. ಟಿಕೆಟ್ ದರ ಆದಾಗ, ಮೂರ್ನಾಲ್ಕು ಜನರಿಗೆ 2 ಲಕ್ಷ ರೂ. ಆಗುತ್ತದೆ.

ಆದರೆ ಈ ಅವಧಿಯಲ್ಲಿ ಮಂಗಳೂರಿನಿಂದ ದುಬೈಗೆ ತೆರಳಲು ಟಿಕೆಟ್‌ ದರ ದುಬಾರಿಯೇನಿಲ್ಲ. ಭಾರತದಲ್ಲಿ ಏಪ್ರಿಲ್‌, ಮೇ ತಿಂಗಳಲ್ಲಿ ಮಂಗಳೂರು-ದುಬೈ ವಿಮಾನದ ಟಿಕೆಟ್ ದರ ಹೆಚ್ಚಳವಾಗಿತ್ತು. ಈಗ 12-15 ಸಾವಿರಕ್ಕೆ ಟಿಕೆಟ್‌ ಲಭ್ಯವಿದೆ.

ದುಬೈ ನಲ್ಲಿ ಈ ಬಾರಿ ಮಿತಿಮೀರಿ ಟಿಕೆಟ್ ದರ ಹೆಚ್ಚಿಸಲಾಗಿದೆ  ಸೆಪ್ಟೆಂಬರ್‌, ಅಕ್ಟೋಬರ್‌ ತಿಂಗಳಲ್ಲಿ ದರ ಇಳಿಕೆಯಾಗುತ್ತದೆ. ಆದರೆ, ಡಿಸೆಂಬರ್‌ಗೆ ಕ್ರಿಸ್ಮಸ್‌ , ಹೊಸ ವರ್ಷ ಸಂದರ್ಭದಲ್ಲಿ ಟಿಕೆಟ್‌ ದರ ಮತ್ತೆ ಏರಿಕೆಯಾಗುತ್ತದೆ ಎಂದು ಟ್ರಾವೆಲಿಂಗ್‌ ಏಜೆಂಟ್‌ ಝಾಕಿರ್‌ ಇಖ್ಲಾಸ್‌ ಹೇಳಿದ್ದಾರೆ.

 

ಇದನ್ನೂ ಓದಿ: Shakti Scheme: ಮಹಿಳೆಯರೇ, ಉಚಿತ ಬಸ್ ಪ್ರಯಾಣ ಎಂದು ಟಿಕೆಟ್ ಪಡೆಯದೇ ಪ್ರಯಾಣಿಸಿದ್ರೆ ದಂಡ ಫಿಕ್ಸ್ ; ಅಷ್ಟಕ್ಕೂ ಸಾರಿಗೆ ಇಲಾಖೆಯ ಮಾಸ್ಟರ್ ಪ್ಲ್ಯಾನ್ ಏನು?!

You may also like

Leave a Comment