Home » Sanya Iyer: ‘ ಐ ಲವ್ ಯೂ ಅಂತ ಹೇಳ್ಬೇಡಿ ಅದರ ಬದಲು…’ ; ಯಾರಿಗೆ ಏನು ಹೇಳಿದ್ರು ಸಾನ್ಯ ಅಯ್ಯರ್ !

Sanya Iyer: ‘ ಐ ಲವ್ ಯೂ ಅಂತ ಹೇಳ್ಬೇಡಿ ಅದರ ಬದಲು…’ ; ಯಾರಿಗೆ ಏನು ಹೇಳಿದ್ರು ಸಾನ್ಯ ಅಯ್ಯರ್ !

3 comments
Sanya Iyer

Sanya Iyer: ಪುಟ್ಟಗೌರಿ (putta gowri) ಧಾರಾವಾಹಿ ಮೂಲಕ ಜನಪ್ರಿಯತೆ ಪಡೆದ ನಟಿ ಸಾನ್ಯ ಅಯ್ಯರ್ (Sanya Iyer) ಬಿಗ್ ಬಾಸ್ (Bigg Boss Kannada) ಮೂಲಕ ಜನರಿಗೆ ಇನ್ನಷ್ಟು ಪರಿಚಿತರಾದರು. ಬಿಗ್ ಬಾಸ್ ಕನ್ನಡ ಓಟಿಟಿ 1’ (BBK OTT 1) ಹಾಗೂ ‘ಬಿಗ್ ಬಾಸ್ ಕನ್ನಡ 9’ ಕಾರ್ಯಕ್ರಮದಲ್ಲಿ ಭಾಗವಹಿಸಿ ಜನಮನಗೆದ್ದರು. ಬಿಗ್ ಬಾಸ್ ಬಳಿಕ ಸಾನ್ಯ ಅಯ್ಯರ್ ಸೋಷಿಯಲ್ ಮೀಡಿಯಾದಲ್ಲಿ ಸದಾ ಆಕ್ಟಿವ್ ಆಗಿರುತ್ತಾರೆ. ಡ್ಯಾನ್ಸ್, ಫೋಟೋ ಅಪ್ಲೋಡ್ ಮಾಡುತ್ತಿರುತ್ತಾರೆ. ಆದರೆ, ಈ ಬಾರಿ ನಟಿ ರೀಲ್ಸ್ ಶೇರ್ ಮಾಡಿದ್ದು ನೆಟ್ಟಿಗರು ಮೆಚ್ಚಿಕೊಂಡಿದ್ದಾರೆ. ನಟಿ ಸಾನ್ಯ ಅಯ್ಯರ್ ‘ ಐ ಲವ್ ಯೂ ಅಂತ ಹೇಳ್ಬೇಡಿ ಅದರ ಬದಲು..’ ಎಂಬ ಕ್ಯಾಪ್ಶನ್ ಕೊಟ್ಟು ಪೋಸ್ಟ್ ಹಂಚಿಕೊಂಡಿದ್ದಾರೆ. ಹಾಗಾದ್ರೆ ಸಾನ್ಯ ಏನು ಹೇಳಿದ್ರು?

ಸಾನ್ಯ ಅಯ್ಯರ್ ಬಿಗ್ ಬಾಸ್ ಒಟಿಟಿಯ ಬಳಿಕ ಬಿಗ್ ಬಾಸ್ ಸೀಸನ್ 09 ರಲ್ಲಿ ಕಾಣಿಸಿಕೊಂಡರು. ತಮ್ಮ ಜಾಣ್ಮೆಯ ಆಟದಿಂದ ಜನರನ್ನು ರಂಜಿಸಿದ್ದು, ರೂಪೇಶ್ ಶೆಟ್ಟಿ (Roopesh shetty) ಜೊತೆಗಿನ ಸ್ನೇಹ ಇವೆಲ್ಲವೂ ನಿಮಗೆ ತಿಳಿದೇ ಇದೆ. ಬಿಗ್ ಬಾಸ್ ಮೂಲಕ ಜನರನ್ನು ತನ್ನೆಡೆಗೆ ಸೆಳೆದಿದ್ದ ಸಾನ್ಯ ಅಯ್ಯರ್ ಇದೀಗ ತಮ್ಮ ರೀಲ್ಸ್ ಮೂಲಕ ನೆಟ್ಟಿಗರ ಹೊಗಳಿಕೆ ಗಳಿಸಿದ್ದಾರೆ.

ಹೌದು, ನಟಿ ಇನ್ಸ್ಟಾಗ್ರಾಮ್ ನಲ್ಲಿ ರೀಲ್ಸ್ ಅಪ್ಲೋಡ್ ಮಾಡಿದ್ದಾರೆ.
ಪುನೀತ್ ರಾಜ್​ಕುಮಾರ್ (Puneeth rajkumar) ಅವರ ಚಿತ್ರದ ಹಾಡಿಗೆ ರೀಲ್ಸ್ ಮಾಡಿದ್ದಾರೆ. ಲಕ್ಷಣವಾಗಿ ಆಕಾಶ ನೀಲಿ ಬಣ್ಣದ ಸೀರೆ ಉಟ್ಟು, ಕುತ್ತಿಗೆಗೆ ಸಿಂಪಲ್ ಆಗಿರುವ ಮಾಲೆ ಹಾಕಿಕೊಂಡು ಮುದ್ದಾಗಿ ರೀಲ್ಹ್ ಮಾಡಿದ್ದಾರೆ. ‘ಪರಮಾತ್ಮ’ ಸಿನಿಮಾದ ‘ಹೆಸರು ಪೂರ್ತಿ ಹೇಳದೆ..’ ಹಾಡಿಗೆ ರೀಲ್ಹ್ ಮಾಡಿರುವ ನಟಿ ಅದಕ್ಕೆ ಕ್ಯಾಪ್ಶನ್ ಆಗಿ . ‘ಐ ಲವ್​ ಯೂ ಹೇಳಬೇಡಿ ಅದರ ಬದಲು ಈ ಹಾಡನ್ನು ಹೇಳಿ’ ಎಂದು ಬರೆದಿದ್ದಾರೆ.

ಸದ್ಯ ನಟಿ ಸಾನ್ಯ ಅಯ್ಯರ್ ರೀಲ್ಸ್ ನೋಡಿದ ನೆಟ್ಟಿಗರು ತುಂಬಾ ಮೆಚ್ಚಿಕೊಂಡಿದ್ದು, ಸಾಕಷ್ಟು ಕಾಮೆಂಟ್ ಮಾಡಿದ್ದಾರೆ. ಕೆಲವರು ‘ ನೋಡಲು ಎರಡು ಕಣ್ಣು ಸಾಲದು’ ಎಂದು ಕಾಮೆಂಟ್ ಮಾಡಿದರೆ ಇನ್ನೂ ಕೆಲವರು ‘ಸೀರೆ ಉಟ್ಟು, ಅಪ್ಪು ಸರ್ ಸಾಂಗ್ ಗೆ ರೀಲ್ಸ್ ತುಂಬಾ ಚೆನ್ನಾಗಿದೆ’ ಎಂದು ಕಾಮೆಂಟ್ ಮಾಡಿದ್ದಾರೆ.

 

 

ಇದನ್ನು ಓದಿ: Bangalore: ಚಿನ್ನ ಪ್ರಿಯರಿಗೆ ಹೊಸ ರೂಲ್ಸ್‌ .! ಹೇಗಿರುತ್ತೆ ಗೊತ್ತಾ? ಇಲ್ಲಿದೆ ಓದಿ 

You may also like

Leave a Comment