ಪಿಎಂ ಕಿಸಾನ್ ಇ-ಕೆವೈಸಿ: ಕೇಂದ್ರ ಸರ್ಕಾರವು ಪ್ರಧಾನಮಂತ್ರಿ ಕೃಷಿ ಸಮ್ಮಾನ್ ನಿಧಿ ಯೋಜನೆ (ಪಿಎಂ ಕಿಸಾನ್ ಸಮ್ಮಾನ್ ನಿಧಿ) ಹಣವು ಬ್ಯಾಂಕ್ ಖಾತೆಗೆ ಜಮೆಯಾಗಲು ಇ-ಕೆವೈಸಿಯನ್ನು ನವೀಕರಿಸಲು ಜೂನ್ 30 ರವರೆಗೆ ಅವಕಾಶ ನೀಡಲಾಗಿದೆ.
ಇ-ಕೆವೈಸಿ ಅಪ್‌ಡೇಟ್ ಮಾಡುವುದರ ಜೊತೆಗೆ ಕಿಸಾನ್ (ಕೃಷಿ) ಸಮ್ಮಾನ್ ಯೋಜನೆ ಬಗೆಗಿನ ಪೂರ್ಣ ಮಾಹಿತಿ ಇಲ್ಲಿ ತಿಳಿಯಿರಿ.
ಮುಖ್ಯವಾಗಿ ಇ-ಕೆವೈಸಿ ಅಪ್‌ಡೇಟ್‌ಗೆ ಕೆಳಕಂಡಂತೆ ಆನ್‌ಲೈನ್‌ನಲ್ಲಿ ದಾಖಲೆಗಳನ್ನು ಅಪ್‌ಡೇಟ್ ಮಾಡಬಹುದು.
ಪಿಎಂ ಕಿಸಾನ್ ಅಧಿಕೃತ ವೆಬ್‌ಸೈಟ್‌ಗೆ ( https://pmkisan.gov.in ) ಭೇಟಿ ನೀಡಿ, ಇ-ಕೆವೈಸಿ (ಇ-ಕೆವೈಸಿ) ಮೇಲೆ ಕ್ಲಿಕ್ ಮಾಡಬೇಕು ಅಲ್ಲಿ ಆಧಾರ್ ಸಂಖ್ಯೆಯನ್ನು ನಮೂದಿಸಬೇಕು. ಆ ಬಳಿಕ ಕ್ಯಾಪ್ಚಾ ನಮೂದಿಸಿ ಸರ್ಚ್ ಮೇಲೆ ಕ್ಲಿಕ್ ಮಾಡಿ. ನಂತರ ನಿಮ್ಮ ಆಧಾರ್ ಸಂಖ್ಯೆಗೆ ಲಿಂಕ್ ಆಗಿರುವ ಮೊಬೈಲ್ ನಂಬರ್ ಅನ್ನು ನಮೂದಿಸಿ, OTP ಕ್ಲಿಕ್ ಮಾಡಿ ನಮೂದಿಸಿ, ನಿಮ್ಮ ಮೊಬೈಲ್‌ಗೆ ಬಂದ ಒಟಿಪಿ (ಒನ್ ಟೈಮ್ ಪಾಸ್‌ವರ್ಡ್) ನಂಬರ್ ಅನ್ನು ನಮೂದಿಸಿ.
ಈ ವೆಬ್‌ಸೈಟ್‌ನಲ್ಲಿರುವ
ವ್ಯಕ್ತಿಗಳು ತಮ್ಮ ಆಧಾರ್ ಸಂಖ್ಯೆ ಮತ್ತು ಆಧಾರ್‌ಗೆ ಜೋಡಣೆ ಮೊಬೈಲ್ ಸಂಖ್ಯೆಗೆ ಸಮೀಪದ ರೈತ ಸಂಪರ್ಕ ಕೇಂದ್ರ, ಗ್ರಾಮ ಮತ್ತು ಕೇಂದ್ರ, ಸಾಮಾನ್ಯ ಸೇವಾ ಕೇಂದ್ರಗಳಿಗೆ ಭೇಟಿ ನೀಡಿ ಬಯೋಮೆಟ್ರಿಕ್ ಅಥವಾ ಒಟಿಪಿ ಮೂಲಕ ಇ-ಕೆವೈಸಿ ಅಪ್‌ಡೇಟ್ ಮಾಡಬಹುದು.
ಇದರ ಹೊರತು ಮುಖದ ಚಹರೆಯ (Face Authentication Feature) ಮೂಲಕ ವ್ಯಕ್ತಿಯ ಗುರುತು ಕೊಡುವ ಫೀಚರ್ವೊಂದನ್ನು ಅನಾವರಣಗೊಳಿಸಲಾಗಿದೆ. ಈ ಫೀಚರ್ ಪಿಎಂ ಕಿಸಾನ್ ಆ್ಯಪ್ನಲ್ಲಿ ಲಭ್ಯ ಇದೆ. ಇದರಿಂದ ಪಿಎಂ ಕಿಸಾನ್ ಮೊಬೈಲ್ ತಂತ್ರಾಂಶದ ಮೂಲಕ ಫಲಾನುಭವಿಗಳೇ ತಮ್ಮ ಮುಖ ಚಹರೆ ತೋರಿಸಿ ಕೆವೈಸಿ ಅಪ್‌ಡೇಟ್ ಮಾಡಬಹುದು.
ಪಿಎಂ ಕಿಸಾನ್ ಸಮ್ಮಾನ್ ಅಧಿಕೃತ ವೆಬ್‌ಸೈಟ್‌ನಲ್ಲೂ ಈ ಯೋಜನೆಗೆ ನೋಂದಣಿ ಮಾಡಬಹುದು. ಕೇಂದ್ರದ pmkisan.gov.in ವೆಬ್‌ಸೈಟ್‌ಗೆ ಭೇಟಿ ನೀಡಿ ಅಲ್ಲಿ ಹೊಸ ರೈತರ ನೋಂದಣಿಯನ್ನು ಅದರ ಮೇಲೆ ಕ್ಲಿಕ್ ಮಾಡಿ. ಆಗ ಓಪನ್ ಆಗುವ ಪುಟದಲ್ಲಿ ಹೊಸ ರೈತರ ನೋಂದಣಿ ನಮೂನೆಯಲ್ಲಿ ತಮ್ಮ ವಿವರಗಳನ್ನು ದಾಖಲಿಸಿ ಹೆಸರನ್ನು ನೋಂದಣಿ ಮಾಡಿಕೊಳ್ಳಬಹುದು.
ಮುಖ್ಯವಾಗಿ ಸಾಂವಿಧಾನಿಕ ಹುದ್ದೆಯಲ್ಲಿ ಇರುವವರು ಅರ್ಹರಾಗುವುದಿಲ್ಲ. ಸರ್ಕಾರಿ ಮತ್ತು ನಿವೃತ್ತ ಸರ್ಕಾರಿ ಅಧಿಕಾರಿಗಳು, ಉದ್ಯೋಗಿಗಳು, ಕೇಂದ್ರ ಅಥವಾ ರಾಜ್ಯ ಸಚಿವಾಲಯಗಳು, ಸಾರ್ವಜನಿಕ ಸಂಸ್ಥೆಗಳು ಮತ್ತು ಕಚೇರಿಗಳು ಮತ್ತು ಇಲಾಖೆಗಳು ಮತ್ತು ಅವರ ಅಧೀನದಲ್ಲಿರುವ ಸಂಸ್ಥೆಗಳ ಸಿಬ್ಬಂದಿ ಗುಂಪು ಡಿ ನೌಕರರಿಗೆ ಈ ಯೋಜನೆ ಸೌಲಭ್ಯವಿಲ್ಲ.
ಇದನ್ನು ಓದಿ: Ram Charan’s Wife Net Income: ರಾಮ್ಚರಣ್ ಪತ್ನಿ ಉಪಾಸನಾ ಅವರ ನಿವ್ವಳ ಆದಾಯ ಎಷ್ಟು ? ಶಾಕಿಂಗ್ ಮಾಹಿತಿ ಇಲ್ಲಿದೆ
