Attempted rape: ಇದೊಂದು ಆಘಾತಕಾರಿ, ಅನಾಹುತಕಾರಿ, ಎಂದೂ ಕೇಳರಿಯದ, ನಿಮಗೆಂದೂ ಊಹಿಸಲೂ ಅಸಾಧ್ಯವಾದ ಘಟನೆ. ಇಂತಹ ಒಂದು ಘಟನೆ ನಡೆದಿರುವು ಆಗ್ರಾದ ಆಲಿಘಡದಲ್ಲಿ ನಡೆದಿದೆ. ಜಗತ್ತನ್ನೇ ಅರಿಯದ ಪುಟ್ಟ ಕಂದನ ಮೇಲೆ ಇಂತಹ ಹೀನಾಯ ಕೃತ್ಯ ನಡೆದಿರುವುದು ನಿಜಕ್ಕೂ ಆಘಾತಕಾರಿ. 12ವರ್ಷದ ಬಾಲಕನೋರ್ವ ಏನೂ ಅರಿಯದ 11ತಿಂಗಳ ಪುಟ್ಟ ಕಂದಮ್ಮನ ಮೇಲೆ ಕ್ರೌರ್ಯ ಎಸಗಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ. ಬಾಲಕ 11ತಿಂಗಳ ಪುಟ್ಟ ಕಂದನ ಮೇಲೆ ರೇಪ್ ಮಾಡಿದ್ದು, ನಂತರ ರಕ್ತಸಿಕ್ತ ಸ್ಥಿತಿಯಲ್ಲಿ ಮಗುವನ್ನು ಬಿಟ್ಟು ಪರಾರಿಯಾಗಿದ್ದಾನೆ. ಈ ಬಗ್ಗೆ ಪೊಲೀಸರು ಮಾಹಿತಿ ನೀಡಿದ್ದಾರೆ ಎಂದು ವರದಿಯಾಗಿದೆ.
ಆರೋಪಿ ಅಪ್ರಾಪ್ತ ಬಾಲಕನ ವಿರುದ್ಧ ಮಗುವಿನ ಪೋಷಕರು ದೂರು ದಾಖಲು ಮಾಡಿದ್ದಾರೆ. ನಂತರ ಪೊಲೀಸರು ಜೂ.22ರಂದು ಮುಂಜಾನೆ ಆರೋಪಿ ಬಾಲಕನನ್ನು ವಶಕ್ಕೆ ಪಡೆದಿದ್ದಾರೆ. ಬಾಲನ್ಯಾಯ ಮಂಡಳಿಯ ಮುಂದೆ ಬಾಲಕನನ್ನು ಹಾಜರುಪಡಿಸಿದ್ದು, ಆಗ್ರಾದ ಮಕ್ಕಳ ಸುಧಾರಣಾ ಕೇಂದ್ರಕ್ಕೆ ಕಳುಹಿಸಲಾಗಿದೆ. ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ. ನಂತರ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಠಾಣಾಧಿಕಾರಿ ರಾಜೇಶ್ ಕುಮಾರ್ ತಿಳಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿದೆ.
ಸಂತ್ರಸ್ತ ಮಗುವಿನ ಮನೆಗೆ ಆರೋಪಿ ಬಾಲಕ ಆಗಾಗ ಹೋಗುತ್ತಿದ್ದು, ಆದರೆ ಘಟನೆ ನಡೆದ ದಿನ ಆತ ಮಗುವನ್ನು ಕರೆದುಕೊಂಡು ಟೆರೇಸ್ ಮೇಲೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಪೊಲೀಸ್ ಠಾಣೆಯಲ್ಲಿ ದೂರು ದಾಖಲಾದ ನಂತರ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಆರೋಪಿ ನೆರೆಮನೆಯವನಾಗಿದ್ದು, ನಾನು ಕೆಲಸ ಮಾಡುತ್ತಿದ್ದಾಗ, ನನ್ನ ಮಗಳನ್ನು ಕರೆದುಕೊಂಡು ಆರೋಪಿ ಟೆರೇಸ್‌ಗೆ ಕರೆದುಕೊಂಡು ಹೋಗಿದ್ದಾನೆ. ಮಗುವಿನ ಅಳು ಕೇಳಿದ ನಂತರ ತಾಯಿ ಮೇಲ್ಗಡೆ ಹೋಗಿದ್ದು ನೋಡಿದಾಗ ಮಗು ರಕ್ತಸಿಕ್ತ ಸ್ಥಿತಿಯಲ್ಲಿ ಕೂಡಿದ್ದು, ಗಾಬರಿಗೊಂಡು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ ಎಂದು ವರದಿಯಾಗಿದೆ.
ಇದನ್ನು ಓದಿ: Deputy collector: ಗೃಹಪ್ರವೇಶಕ್ಕೆ ರಜೆ ನೀಡಿಲ್ಲವೆಂದು ಉಪ ಜಿಲ್ಲಾಧಿಕಾರಿ ಹುದ್ದೆಗೆ ರಾಜೀನಾಮೆ ನೀಡಿದ ಯುವತಿ !
